Home> World
Advertisement

Google Play Storeನಲ್ಲಿ 4.7 ರಿಂದ 2.0ಗೆ ಇಳಿದ TikTok ರೇಟಿಂಗ್

ಸೋಶಿಯಲ್ ಮೀಡಿಯಾದಲ್ಲಿ, ಅನೇಕ ಬಳಕೆದಾರರು ಭಾರತದಲ್ಲಿ ಟಿಕ್ ಟಾಕ್ ಅನ್ನು ನಿಷೇಧಿಸುವಂತೆ ಒತ್ತಾಯಿಸುತ್ತಿದ್ದಾರೆ. ಗೂಗಲ್ ಪ್ಲೇ ಸ್ಟೋರ್ ಪ್ರಕಾರ, ಟಿಕ್‌ಟಾಕ್ ಆ್ಯಪ್ ಅನ್ನು ಇದುವರೆಗೆ ಸುಮಾರು 24 ಮಿಲಿಯನ್ ಬಳಕೆದಾರರು ರೇಟ್ ಮಾಡಿದ್ದಾರೆ.

Google Play Storeನಲ್ಲಿ 4.7 ರಿಂದ 2.0ಗೆ ಇಳಿದ TikTok ರೇಟಿಂಗ್

ಕಳೆದ ಹಲವಾರು ದಿನಗಳಿಂದ ಸಾಮಾಜಿಕ ಮಾಧ್ಯಮ ಟ್ವಿಟ್ಟರ್ ನಲ್ಲಿ ಯುಟ್ಯೂಬ್ ಹಾಗೂ ಟಿಕ್ ಟಾಕ್ ಅಭಿಮಾನಿಗಳ ಮಧ್ಯೆ ಯುದ್ಧವೇ ಭುಗಿಲೆದ್ದಿದೆ. ಯುಟ್ಯೂಬ್ ಮತ್ತು ಟಿಕ್ ಟಾಕ್ ಮಧ್ಯೆ ಯಾವ ಮಾಧ್ಯಮ ಉತ್ತಮ ಎಂಬುದರ ಕುರಿತಾಗಿದೆ ಈ ವಾರ್. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಟಿಕ್ ಟಾಕ್ ರೇಟಿಂಗ್ 4.7 ರಿಂದ 2.0ಗೆ ಬಂದು ನಿಂತಿದೆ. ಇತ್ತೀಚಿಗೆ ಬಳಕೆದಾರರು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಕೇವಲ ಒಂದು ರೇಟಿಂಗ್ ನೀಡಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಟಿಕ್ ಟಾಕ್ ಅನ್ನು ಭಾರತದಲ್ಲಿ ನಿಷೇಧಿಸಬೇಕು ಎಂದು ಹಲವರು ಒತ್ತಾಯಿಸುತ್ತಿದ್ದಾರೆ. ಗೂಗಲ್ ಪ್ಲೇ ಸ್ಟೋರ್ ಪ್ರಕಾರ ಟಿಕ್ ಟಾಕ್ ಅಪ್ಲಿಕೇಶನ್ ಇದುವರೆಗೆ 24 ಮಿಲಿಯನ್ ಬಳಕೆದಾರರು ತಮ್ಮ ರೇಟಿಂಗ್ ನೀಡಿದ್ದಾರೆ. ಇದರಲ್ಲೇ ವಿಶೇಷ ಎಂದರೆ ಬಹುತೇಕ ಬಳಕೆದಾರರು ಟಿಕ್ ಟಾಕ್ ಗೆ ಕೇವಲ ಒಂದು ರೇಟಿಂಗ್ ನೀಡಿದ್ದಾರೆ. ಹೀಗಾಗಿ ಟಿಕ್ ಟಾಕ್ ಆಪ್ ನ ರೇಟಿಂಗ್ ನಲ್ಲಿ ಭಾರಿ ಕುಸಿತವಾಗಿದ್ದು ಗೂಗಲ್ ಪ್ಲೇ ಸ್ಟೋರ್ ನಲ್ಲಿ 4.7 ಕ್ಕೆ ಇದ್ದ ರೇಟಿಂಗ್ ಇದೀಗ ಕೇವಲ 2.0 ಬಂದು ತಲುಪಿದೆ.

ಇನ್ನೊಂದೆಡೆ ಟಿಕ್ ಟಾಕ್ ಲೈಟ್ ಆವೃತ್ತಿಗೆ ಇದುವರೆಗೆ ಸುಮಾರು 7 ಲಕ್ಷ 22 ಸಾವಿರ ಜನರು ತಮ್ಮ ರೇಟಿಂಗ್ ನೀಡಿದ್ದಾರೆ. ಇದರ ಲೈಟ್ ಆವೃತ್ತಿಗೆ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಕೇವಲ 1.1 ರೇಟಿಂಗ್ ಇದೆ. ಇನ್ನೊಂದೆಡೆ ಯುಟ್ಯೂಬ್ ಆಪ್ ಗೆ ಗೂಗಲ್ ಪ್ಲೇ ಸ್ಟೋರ್ ನಲ್ಲಿ 70 ಮಿಲಿಯನ್ ಅಧಿಕ ಬಳಕೆದಾರರು ತಮ್ಮ ರೇಟಿಂಗ್ ನೀಡಿದ್ದಾರೆ ಎಂಬುದು ಇಲ್ಲಿ ಗಮನಾರ್ಹ.

ಈ ಯುದ್ಧಕ್ಕೆ ಕಾರಣವಾದರು ಏನು?
ಕಳೆದ ಹಲವಾರು ದಿನಗಳಿಂದ ಟಿಕ್ ಟಾಕ್ ಮತ್ತು ಯುಟ್ಯೂಬ್ ಅಭಿಮಾನಿಗಳ ಮಧ್ಯೆ ಈ ಹಗ್ಗ ಜಗ್ಗಾಟ ನಡೆಯುತ್ತಿದೆ. ಒಂದೆಡೆ ಟಿಕ್ ಟಾಕ್ ಬಳಕೆದಾರರ ಕುರಿತು ಯುಟ್ಯೂಬ್ ಅಭಿಮಾನಿಗಳು ತಮಾಷೆ ಮಾಡುತ್ತಿದ್ದರೆ ಇನ್ನೊಂದೆಡೆ ಟಿಕ್ ಟಾಕ್ ಬಳಕೆದಾರರೂ ಕೂಡ ಯುಟ್ಯೂಬ್ ಬಳಕೆದಾರರ ಕುರಿತು ತಮಾಷೆ ಮಾಡುತ್ತಿದ್ದಾರೆ. ಟಿಕ್ ಟಾಕ್ ಸ್ಟಾರ್ ಅಮೀರ್ ಸಿದ್ದಿಕಿ ವಿಡಿಯೋ ಹೊರಹೊಮ್ಮಿದ ಬಳಿಕ ಈ ವಾದ ಇದೀಗ ತಾರಕಕ್ಕೆ ಏರಿದೆ. ಈ ವಿಡಿಯೋದಲ್ಲಿ ಸಿದ್ದಿಕಿ ಯುಟ್ಯೂಬ್ ಬಳಕೆದಾರರ ಬಗ್ಗೆ ತಮಾಷೆಯ ಮಾತುಗಳನ್ನು ಆಡಿದ್ದಾರೆ. ಆ ಬಳಿಕ ಯುಟ್ಯೂಬ್ ಬಳಕೆದಾರರು ಕೂಡ ತಮಾಷೆ ಮಾಡಲು ಆರಂಭಿಸಿದ್ದಾರೆ.

ಯುಟ್ಯೂಬ್ ಮೇಲೆ ಕೈರಿ ಮಿನಾಟಿ ಹೆಸರಿನ ಖಾತೆಯಿಂದ ವಿಡಿಯೋವೊಂದನ್ನು ಜಾರಿಗೊಳಿಸಲಾಗಿದೆ. ಈ ವಿಡಿಯೋದಲ್ಲಿ ಟಿಕ್ ಟಾಕ್ ಬಳಕೆದಾರರನ್ನು ಸಿಕ್ಕಾಪಟ್ಟೆ ಜರಿಯಲಾಗಿದ್ದು, ವಿಡಿಯೋ ವೈರಲ್ ಕೂಡ ಆಗಿದೆ. ಈ ವಿಡಿಯೋಗೆ ಲಕ್ಷಾಂತರ ವೀಕ್ಷಣೆಗಳು ಬಂದಿವೆ. ಆ ಬಳಿಕ ಟ್ವಿಟ್ಟರ್ ಮೇಲೆ ಈ ವಾರ್ ಆರಂಭಗೊಂಡಿದೆ. ಸಾವಿರಾರು ಜನರು ಮೀಮ್ಸ್ ಗಳನ್ನು ಹಂಚಿಕೊಂಡು ಪರಸ್ಪರ ಹಗೆ ತೀರಿಸಿಕೊಂಡಿದ್ದಾರೆ. ಇದರ ಪರಿಣಾಮ ಟ್ವಿಟ್ಟರ್ ನಲ್ಲಿ ಟಿಕ್ ಟಾಕ್, ಯುಟ್ಯೂಬ್ ಹಾಗೂ ಸ್ಕರ್ಟ್ ಟ್ರೆಂಡ್ ಮಾಡಲಾರಂಭಿಸಿವೆ.

Read More