Home> World
Advertisement

World's Luckiest House: ಇದು ವಿಶ್ವದ ಅದೃಷ್ಟಶಾಲಿ ಮನೆಯಂತೆ..! ಕಾರಣ ಏನು ಗೊತ್ತೇ..?

World's Luckiest House: ಅಟ್ಲಾಂಟಿಕ್ ದ್ವೀಪದ ಸ್ಪೇನ್ ನ ಲಾ ಪಾಲ್ಮಾದಲ್ಲಿ ಜ್ವಾಲಾಮುಖಿ ಸ್ಫೋಟವು ಗಮನಾರ್ಹ ಹಾನಿ ಉಂಟುಮಾಡಿದೆ. ಕುದಿಯುವ ಲಾವಾ ಸುತ್ತಮುತ್ತಲಿನ ಎಲ್ಲ ಪ್ರದೇಶವನ್ನು ನಾಶಪಡಿಸಿದೆ. ಆದರೆ ಪವಾಡ ಸದೃಶ್ಯ ಎಂಬಂದೆ ಒಂದು ಮನೆಯನ್ನು ಉಳಿಸಲಾಗಿದೆ. ಆ  ಮನೆಯನ್ನು ಇದೀಗ ವಿಶ್ವದ ಅತ್ಯಂತ ಅದೃಷ್ಟಶಾಲಿ ಮನೆ ಎಂದು ಕರೆಯಲಾಗುತ್ತಿದೆ.

World's Luckiest House: ಇದು ವಿಶ್ವದ ಅದೃಷ್ಟಶಾಲಿ ಮನೆಯಂತೆ..! ಕಾರಣ ಏನು ಗೊತ್ತೇ..?

ಸ್ಪೇನ್: World's Luckiest House - ಸ್ಪೇನ್‌ನ (Spain) ಪರ್ವತಗಳ ನಡುವೆ ಇರುವ ಮನೆಯನ್ನು ವಿಶ್ವದ 'ಅದೃಷ್ಟದ ಮನೆ' ಎಂದು ಕರೆಯಲಾಗುತ್ತಿದೆ. ಜ್ವಾಲಾಮುಖಿ ಸ್ಫೋಟದ (Volcano Erruption) ನಂತರ ಹೊರಬಂದ ಲಾವಾ ಬಳಿಕವೂ ಇದು ಸುರಕ್ಷಿತವಾಗಿರುವುದೇ ಇದಕ್ಕೆ ಕಾರಣ ಎನ್ನಲಾಗುತ್ತದೆ. ಪ್ರಜ್ವಲಿಸುವ ಲಾವಾ ಎಲ್ಲವನ್ನೂ ತೆಕ್ಕೆಗೆ ತೆಗೆದುಕೊಂಡಾಗ, ಪವಾಡ ಸದೃಶ್ಯ ಎಂಬಂತೆ ಈ ಸಣ್ಣ ಮನೆ ಸುರಕ್ಷಿತವಾಗಿ ಉಳಿದಿದೆ. ಸ್ಪೇನ್ ಜನರು ಇದನ್ನು ಚಮತ್ಕಾರ ಎಂದು ಭಾವಿಸುತ್ತಿದ್ದರೆ, ಮನೆ ಮಾಲೀಕನ ಖುಷಿಗೆ ಎಲ್ಲೆಯೇ ಇಲ್ಲಂತಾಗಿದೆ.

ಎಲ್ಲವನ್ನು ಅಲ್ಲಿಯೇ ಬಿಟ್ಟು ಜನ ಜಾಗ ಖಾಲಿ ಮಾಡಿದರು

'ದಿ ಸನ್'ನಲ್ಲಿ ಪ್ದ್ರಕತಗೊಂಡ ವರದಿಯ ಪ್ರಕಾರ ಲಾ ಪಲ್ಮಾದ ಅಟ್ಲಾಂಟಿಕ್ ದ್ವೀಪದ ಮೇಲೆ ಜ್ವಾಲಾಮುಖಿ ಸ್ಫೋಟದ ಬಳಿಕ ಲಾವಾ ಹೊರಬರಲು ಆರಂಭಿಸಿತ್ತು. ಇದರಿಂದ ಎಚ್ಚೆತ್ತುಕೊಂಡ ಆಡಳಿತ ನಂತರ ಲಾ ಪಲ್ಮಾನಿಂದ (La Palma) ಜನರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಿದೆ. ಪ್ರಾಣವನ್ನು ರಕ್ಷಿಸಿಕೊಳ್ಳಲು ಎಲ್ಲ ಜನರು ತಮ್ಮ ಸರ್ವಸ್ವವನ್ನು ಅಲ್ಲಿಯೇ ಬಿಟ್ಟು ದೂರ ಹೊರಟುಹೋಗಿದ್ದಾರೆ. ತಮಗೆ ಸಂಬಂಧಪಟ್ಟ ಯಾವುದೇ ಸಂಗತಿ ಉಳಿದಿರಬಹುದು ಎಂಬ ನಿರೀಕ್ಷೆ ಯಾರಿಗೂ ಇರಲಿಲ್ಲ. ಆದರೆ, ಪವಾಡ ಸದೃಶ್ಯ ಎಂಬಂತೆ ಈ ನೈಸರ್ಗಿಕ ವಿಪತ್ತಿನಲ್ಲಿ ಮನೆಯೊಂದು ಉಳಿದುಕೊಂಡಿದೆ.

ಇದನ್ನೂ ಓದಿ-ಅಮೆರಿಕಾದ ಟಾಪ್ CEO ಗಳ ಜೊತೆ ಪ್ರಧಾನಿ ಮೋದಿ ಮಹತ್ವದ ಮಾತುಕತೆ

350ಕ್ಕೂ ಅಧಿಕ ಮನೆಗಳು ನಷ್ಟವಾಗಿವೆ
ವರದಿಗಳ ಪ್ರಕಾರ ಜ್ವಾಲಾಮುಖಿ ಸ್ಫೋಟದ ಬಳಿಕ ಹೊರಬಂದ ಲಾವಾದಿಂದ 350 ಕ್ಕೂ ಅಧಿಕ ಮನೆಗಳು ನಷ್ಟಗೊಂಡಿವೆ. ಆದರೆ, ನಿವೃತ್ತ ನೌಕರ ಡ್ಯಾನಿಶ್ ದಂಪತಿಗೆ ಸೇರಿದ ನಿವಾಸಕ್ಕೆ ಯಾವುದೇ ಹಾನಿ ಸಂಭವಿಸಿಲ್ಲ. ಈ ಕುರಿತು ಹೇಳಿಕೆ ನೀಡಿರುವ ಮನೆಯ ಮಾಲೀಕರು "ಈ ಸಂಗತಿ ನಮಗೆ ತಿಳಿದಾಗ ಖುಷಿಯಿಂದ ನಮ್ಮ ಕಣ್ಣುಗಳು ಒದ್ದೆಯಾದವು. ನಮ್ಮ ಮನೆ ಸುರಕ್ಷಿತವಾಗಿದೆ ಎಂಬುದರ ಮೇಲೆ ನಮಗೆ ನಂಬಿಕೆಯೇಯಾಗಿಲ್ಲ.' ಎಂದಿದ್ದಾರೆ. ಈ ಪ್ರದೇಶದಲ್ಲಿರುವ ಬಹುತೇಕ ಮನೆಗಳು, ಶಾಲೆಗಳು ಕುದಿಯುತ್ತಿರುವ ಲಾವಾಗೆ (Lava) ಆಹುತಿಯಾಗಿವೆ.

ಇದನ್ನೂ ಓದಿ-ನ್ಯೂಯಾರ್ಕ್‌ಗೆ ಬಂದಿಳಿದ ಪ್ರಧಾನಿ ಮೋದಿ: ಇಂದು ಸಂಜೆ ವಿಶ್ವಸಂಸ್ಥೆ ಸಾಮಾನ್ಯ ಸಭೆ ಉದ್ದೇಶಿಸಿ ಭಾಷಣ

ಕಡಿಮೆಯಾದ ಲಾವಾ ವೇಗ
ಆದರೆ ಸದ್ಯಕ್ಕೆ ಲಾವಾದ ವೇಗ ಕಡಿಮೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರೊಂದಿಗೆ ಪರಿಹಾರ ಕಾರ್ಯವನ್ನು ತೀವ್ರಗೊಳಿಸಲಾಗಿದೆ. ಆದರೆ, ಅಪಾಯ ಇನ್ನೂ ಸಂಪೂರ್ಣವಾಗಿ ತಪ್ಪಿಲ್ಲ ಎಂದು ಅವರು ಹೇಳಿದ್ದಾರೆ. ಪೀಡಿತ ಪ್ರದೇಶಗಳಿಗೆ ಹೋಗುವುದನ್ನು ತಪ್ಪಿಸುವಂತೆ ಅವರು ಜನರಿಗೆ ಮನವಿ ಮಾಡಿದ್ದಾರೆ. ಮತ್ತೊಂದೆಡೆ, ಡ್ಯಾನಿಶ್ ದಂಪತಿಗಳ ಮನೆಯನ್ನು ನಿರ್ಮಿಸಿದ ಬಿಲ್ಡರ್ ತನ್ನ ಕೆಲಸದಿಂದ ಭಾರಿ ಸಂತಸಗೊಂಡಿದ್ದಾನೆ. ಈ ಘಟನೆಯ ನಂತರ ತನ್ನ ಕಟ್ಟಡ ನಿರ್ಮಾಣ ವ್ಯಾಪಾರ ಕುದುರಲಿದೆ ಎಂದು ಆತ ನಿರೀಕ್ಷಿಸಿದ್ದಾನೆ.

ಇದನ್ನೂ ಓದಿ-PM Modi In US: ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು ಭೇಟಿ ಮಾಡಿದ ಪ್ರಧಾನಿ ಮೋದಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Read More