Home> World
Advertisement

ಕೋತಿಗೆ ಲೈಂಗಿಕ ಕಿರುಕುಳ ನೀಡಿದ ಮಹಿಳೆಗೆ 3 ವರ್ಷ ಜೈಲು!

'ವ್ಯಭಿಚಾರಕ್ಕೆ ಪ್ರಚೋದನೆ' ಮತ್ತು ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲವಾಗಿ ವರ್ತಿಸಿದ ಆರೋಪದ ಮೇಲೆ ಬಶ್ಮಾ ಅಹಮದ್(25) ಎಂಬ ಮಹಿಳೆಗೆ ಮನ್ಸೌರಾ ನಗರದ ನ್ಯಾಯಾಲಯ 3 ವರ್ಷ ಜೈಲು ಶಿಕ್ಷೆ ವಿಧಿಸಿದೆ 

ಕೋತಿಗೆ ಲೈಂಗಿಕ ಕಿರುಕುಳ ನೀಡಿದ ಮಹಿಳೆಗೆ 3 ವರ್ಷ ಜೈಲು!

ಮನ್ಸೌರಾ: ಕೋತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಮಹಿಳೆಗೆ 3 ವರ್ಷ ಜೈಲು ಶಿಕ್ಷೆ ವಿಧಿಸಿದ ವಿಚಿತ್ರ ಘಟನೆ ಈಜಿಪ್ಟ್ ನಲ್ಲಿ ನಡೆದಿದೆ. 

'ವ್ಯಭಿಚಾರಕ್ಕೆ ಪ್ರಚೋದನೆ' ಮತ್ತು ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲವಾಗಿ ವರ್ತಿಸಿದ ಆರೋಪದ ಮೇಲೆ ಬಶ್ಮಾ ಅಹಮದ್(25) ಎಂಬ ಮಹಿಳೆಗೆ ಮನ್ಸೌರಾ ನಗರದ ನ್ಯಾಯಾಲಯ 3 ವರ್ಷ ಜೈಲು ಶಿಕ್ಷೆ ವಿಧಿಸಿದೆ ಎಂದು Daily Mail ಪತ್ರಿಕೆ ವರದಿ ಮಾಡಿದೆ. 

ನಗರದ pet shopನಲ್ಲಿ ಬಶ್ಮಾ ಅಹಮದ್ ಅವರು ಕೋತಿಯ ಜನನಾಂಗವನ್ನು ಮುಟ್ಟಿ ನಗುತ್ತಿರುವ 90 ಸೆಕೆಂಡುಗಳ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಆ ವೀಡಿಯೋದಲ್ಲಿ ಕೋತಿಯ ಜನನಾಂಗ ಮುಟ್ಟಿ ಅಸಭ್ಯವಾಗಿ ಮಾತನಾಡುತ್ತಿದ್ದ ಆಕೆಯನ್ನು ಕಂಡು ಜನ ನಗುತ್ತಿದ್ದುದು ಸ್ಪಷ್ಟವಾಗಿ ಕಾಣಿಸಿತ್ತು. ಅಲ್ಲದೆ, ಆಕೆಯೇ ಈ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.

ಈ ಘಟನೆಗೆ ಸಂಬಂಧಿಸಿದಂತೆ ಆಕೆಯನ್ನು ಕಳೆದ ಅಕ್ಟೋಬರ್ ನಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿತ್ತು. ಆದರೆ, ತಾವು ಪ್ರಾಣಿಗೆ ಕಿರುಕುಳ ನೀಡುವ ಯಾವ ದುರುದ್ದೇಶವನ್ನೂ ಹೊಂದಿರಲಿಲ್ಲ ಎಂದೂ ತಿಳುವಳಿಕೆ ಇಲ್ಲದೆ ಅಂತರ್ಜಾಲದಲ್ಲಿ ಪೋಸ್ಟ್ ಮಾಡಿದ್ದಾಗಿ ಬಶ್ಮಾ ಅಹಮದ್ ನ್ಯಾಯಾಲಯಕ್ಕೆ ಹೇಳಿಕೆ ನೀಡಿದ್ದರು. ಇದೀಗ ಈಜಿಪ್ಟ್ ನ್ಯಾಯಾಲಯ 3 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ ಎಂದು Daily Mail ಪತ್ರಿಕೆ ವರದಿ ಮಾಡಿದೆ. 

Read More