Home> World
Advertisement

Viral Video: ಮಾಧ್ಯಮ ಚರ್ಚೆ ವೇಳೆ ಪಾಕ್ ರಾಜಕಾರಣಿಯಿಂದ ಪತ್ರಕರ್ತನ ಮೇಲೆ ಹಲ್ಲೆ!

 ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್ ಪಕ್ಷದ ರಾಜಕಾರಣಿ ಮಸ್ರೂರ್ ಅಲಿ ಸಿಯಾಲ್ ಅವರು ಪತ್ರಕರ್ತ ಇಮ್ತಿಯಾಜ್ ಖಾನ್ ಫರನ್ ಮೇಲೆ ವಾಗ್ದಾಳಿ ನಡೆಸುತ್ತಲೇ ದೈಹಿಕ ಹಲ್ಲೆ ನಡೆಸಿದ್ದಾರೆ. 

Viral Video: ಮಾಧ್ಯಮ ಚರ್ಚೆ ವೇಳೆ ಪಾಕ್ ರಾಜಕಾರಣಿಯಿಂದ ಪತ್ರಕರ್ತನ ಮೇಲೆ ಹಲ್ಲೆ!

ಇಸ್ಲಾಮಾಬಾದ್: ಕೆಲವೊಮ್ಮೆ ಮಾಧ್ಯಗಳಲ್ಲಿ ರಾಜಕೀಯ ಚರ್ಚೆ ವೇಳೆ ಭಾಗವಹಿಸುವ ರಾಜಕಾರಣಿಗಳು ವಾಗ್ವಾದಕ್ಕಿಳಿದು ಚರ್ಚೆ ತಾರಕಕ್ಕೇರಿದ ಸಾಕಷ್ಟು ನಿದರ್ಶನಗಳನ್ನು ನಾವು ಕಂಡಿದ್ದೇವೆ. ಆದರೆ ಪಾಕಿಸ್ತಾನದ ಮಾಧ್ಯಮವೊಂದರಲ್ಲಿ ನೇರ ಪ್ರಸಾರವಾಗುತ್ತಿದ್ದ ರಾಜಕೀಯ ಚರ್ಚೆ ಸಂದರ್ಭದಲ್ಲಿ ರಾಜಕಾರಣಿಯೊಬ್ಬರು ಪತ್ರಕರ್ತನ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ

ಪಾಕಿಸ್ತಾನದ ಸುದ್ದಿ ವಾಹಿನಿಯೊಂದರಲ್ಲಿ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರ ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್ ಪಕ್ಷದ ರಾಜಕಾರಣಿ ಮಸ್ರೂರ್ ಅಲಿ ಸಿಯಾಲ್ ಅವರು ಪತ್ರಕರ್ತ ಇಮ್ತಿಯಾಜ್ ಖಾನ್ ಫರನ್ ಮೇಲೆ ವಾಗ್ದಾಳಿ ನಡೆಸುತ್ತಲೇ ದೈಹಿಕ ಹಲ್ಲೆ ನಡೆಸಿದ್ದಾರೆ. ಕ್ಯಾಮರಾ ರೋಲ್ ಆಗುವಾಗಲೇ ಈ ಘಟನೆ ನಡೆದಿದ್ದು, ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

ಈ ವಾಗ್ವಾದದಲ್ಲಿ ಇಬ್ಬರೂ ಏನುಹೇಳಿದರು, ಯಾಕೆ ಜಗಳವಾಡಿದರು ಎಂಬುದು ಸ್ಪಷ್ಟವಾಗಿ ಕೇಳಿಸಿಲ್ಲವಾದರೂ, ಈ ಘಟನೆಯು ಇಮ್ರಾನ್ ಅವರ ಪಕ್ಷ ಮತ್ತು ಸರ್ಕಾರಕ್ಕೆ ಭಾರಿ ಮುಜುಗರವನ್ನುಂಟು ಮಾಡಿದೆ. ಸೋಷಿಯಲ್ ಮೀಡಿಯಾ ಬಳಕೆದಾರರು ಈ ನಡವಳಿಕೆಯನ್ನು ನಾಚಿಕೆಗೇಡು ಎಂದು ಟೀಕಿಸಿದ್ದಾರೆ. ಅಷ್ಟೇ ಅಲ್ಲದೆ,  ಸಿಯಾಲ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಾಕಿಸ್ತಾನ ಪ್ರಧಾನ ಮಂತ್ರಿಯನ್ನು ಒತ್ತಾಯಿಸಿದ್ದಾರೆ.
 

Read More