Home> World
Advertisement

Viral Video: ಆತ್ಮಹತ್ಯೆ ಮಾಡಿಕೊಳ್ಳಲು ಎತ್ತರ ಕಟ್ಟಡದ ಕಿಟಕಿ ಏರಿ ಕುಳಿತ ಯುವತಿ...ನಂತರ ನಡೆದಿದ್ದೇನು ನೀವೇ ನೋಡಿ

Viral Video: ಟ್ವಿಟರ್‌ನಲ್ಲಿ 48 ಲಕ್ಷಕ್ಕೂ ಹೆಚ್ಚು ಬಳಕೆದಾರರು ಈ ವೈರಲ್ ವೀಡಿಯೊವನ್ನು ವೀಕ್ಷಿಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಮಾಡಿದ ಕೆಲಸ ನೋಡಿ ಬಳಕೆದಾರರು ಅವಾಕ್ಕಾಗಿದ್ದಾರೆ.
 

Viral Video: ಆತ್ಮಹತ್ಯೆ ಮಾಡಿಕೊಳ್ಳಲು ಎತ್ತರ ಕಟ್ಟಡದ ಕಿಟಕಿ ಏರಿ ಕುಳಿತ ಯುವತಿ...ನಂತರ ನಡೆದಿದ್ದೇನು ನೀವೇ ನೋಡಿ

Trending Video: ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದು ಭಾರಿ ವೈರಲ್ ಆಗಿದ್ದು  ಈ ವಿಡಿಯೋ ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ. ವಿಡಿಯೋದಲ್ಲಿ ಮಹಿಳೆ ಎತ್ತರದ ಕಟ್ಟಡದ ಕಿಟಕಿಯೊಂದರಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದು, ಕಿಟಕಿ ಏರಿದ್ದಾಳೆ. ಮಹಿಳೆಯ ಆತ್ಮಹತ್ಯಾ ರಕ್ಷಣೆಯ ಈ ಘಟನೆ ಜಪಾನ್‌ನಿಂದ ಹೊರಹೊಮ್ಮಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಮಹಿಳೆ ಕಿಟಕಿಯ ಹೊರಗೆ ಕಾಲುಗಳನ್ನು ನೇತುಹಾಕಿಕೊಂಡು ಕೆಳಗೆ ಜಿಗಿಯಲು ಮುಂದಾಗಿದ್ದಾಳೆ. ಇನ್ನೇನು ಮಹಿಳೆ ಕಟ್ಟಡದಿಂದ ಜಿಗಿದು ಪ್ರಾಣ ಬಿಡಬೇಕು ಎನ್ನುವಷ್ಟರಲ್ಲೇ ಆಕೆಗೆ ಒಂದು ಟ್ವಿಸ್ಟ್ ಎದುರಾಗಿರುವುದನ್ನು ನೀವು ವಿಡಿಯೋದಲ್ಲಿ ಗಮನಿಸಬಹುದು. ಆಕಸ್ಮಿಕವಾಗಿ ಕಟ್ಟಡದ ಮೇಲ್ಚಾವಣಿಯಿಂದ ಅಗ್ನಿಶಾಮಕ ದಳದ ಸಿಬ್ಬಂದಿ ಮಹಿಳೆಯನ್ನು ಕಟ್ಟಡದೊಳಗೆ ಬೀಳುವಂತೆ ತಳ್ಳುತ್ತಾನೆ ಮತ್ತು ಮಹಿಳೆಯ ಜೀವ ಉಳಿಯುತ್ತದೆ. 

ಇದನ್ನೂ ಓದಿ-ಹಾರುವ ಮೂಲಕ ನದಿ ದಾಟಿದ ಬೆಕ್ಕು : ಮಾರ್ಜಾಲದ ಅದ್ಭುತ ವಿಡಿಯೋ

ಮಾಧ್ಯಮ ವರದಿಗಳ ಪ್ರಕಾರ, ಈ ಮಹಿಳೆ ಕೆಳಗೆ ಜಿಗಿಯಲು ಮುಂದಾದಾಗ, ಅವಳನ್ನು ನೋಡಿದ ಜನರು ಕೆಳಗೆ ಜಮಾವಣೆಗೊಂಡಿದ್ದರು. ಎಲ್ಲರೂ ಆಕೆಯನ್ನು ಆತ್ಮಹತ್ಯೆ ಮಾಡಿಕೊಳ್ಳದಂತೆ ತಡೆಯುತ್ತಿದ್ದರು, ಆದರೆ ಈ ಮಹಿಳೆ ಒಪ್ಪದಿದ್ದಾಗ, ಅಗ್ನಿಶಾಮಕ ದಳದ ಸಿಬ್ಬಂದಿ ಆಕೆಯ ಜೀವವನ್ನು ಉಳಿಸಲು ವಿಶಿಷ್ಟವಾದ ಮಾರ್ಗವನ್ನು ಅನುಸರಿಸಿದ್ದಾರೆ. ಮಹಿಳೆಯ ಫ್ಲಾಟ್‌ನ ಮೇಲಿನ ಮಹಡಿಗೆ ತೆರಳಿದ ಓರ್ವ ಸಿಬ್ಬಂದಿ ನಂತರ ಅಲ್ಲಿಂದ ಹಗ್ಗದ ಸಹಾಯದಿಂದ ಕೆಳಗಿಳಿದು ಮಹಿಳೆಯ ಕಿಟಕಿಯನ್ನು ತಲುಪಿದ ಕೂಡಲೇ ಆಕೆಯನ್ನು ಮನೆಯ ಒಳಗೆ ತಳ್ಳಿದ್ದಾನೆ. ಈ ಆಘಾತದಿಂದ ಮಹಿಳೆ ಕೊಠಡಿಯೊಳಗೆ ಬಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಮೂಲಕ ಅಗ್ನಿಶಾಮಕ ಸಿಬ್ಬಂದಿ ಸೂಪರ್ ಮ್ಯಾನ್ ಆಗುವ ಮೂಲಕ ಈ ಮಹಿಳೆಯ ಜೀವವನ್ನು ಉಳಿಸಿದ್ದಾನೆ.

ಇದನ್ನೂ ಓದಿ-Viral Video: ಬ್ಯಾಂಕ್ ಲೂಟಿ ಮಾಡಲು ಬಂದ ಕಳ್ಳನನ್ನು ಏಕಾಂಗಿಯಾಗಿ ಹೊಡೆದೋಡಿಸಿದ ಮಹಿಳಾ ಮ್ಯಾನೇಜರ್.. ವಿಡಿಯೋ ನೋಡಿ

ಈ ವೈರಲ್ ವೀಡಿಯೊವನ್ನು usman__haruna ಹೆಸರಿನ ಟ್ವಿಟರ್ ಖಾತೆಯಿಂದ ಹಂಚಿಕೊಳ್ಳಲಾಗಿದೆ. ಜಪಾನಿನ ಅಗ್ನಿಶಾಮಕ ದಳದ ಸಿಬ್ಬಂದಿಯೊಬ್ಬರು ಮಹಿಳೆಯೊಬ್ಬರನ್ನು ಆತ್ಮಹತ್ಯೆಯಿಂದ ರಕ್ಷಿಸಿದ್ದಾರೆ...ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ವಿಡಿಯೋದ ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಟ್ವಿಟರ್‌ನಲ್ಲಿ 48 ಲಕ್ಷಕ್ಕೂ ಹೆಚ್ಚು ಬಳಕೆದಾರರು ಈ ವೈರಲ್ ವೀಡಿಯೊವನ್ನು ವೀಕ್ಷಿಸಿದ್ದಾರೆ.  ಬಳಿಕ ಅಗ್ನಿ ಶಾಮಕ ದಳದ ಸಿಬ್ಬಂದಿ ಮಾಡಿರುವ ಕೆಲಸಕ್ಕೆ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Read More