Home> World
Advertisement

Ukrain-Russia Crisis: ರಷ್ಯಾ ಗಡಿಗೆ ಸೈನಿಕರನ್ನು ಕಳುಹಿಸಿದ US, ಮೂರನೇ ವಿಶ್ವ ಯುದ್ಧದ ಕುರಿತು Biden ಹೇಳಿದ್ದೇನು?

Russia-Ukraine War - ಉಕ್ರೇನ್ ಮತ್ತು ರಷ್ಯಾ ನಡುವೆ ಮೂರನೇ ಮಹಾಯುದ್ಧ  (Third World War) ನಡೆಯುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ನೆರೆಯ ರಾಷ್ಟ್ರಗಳು ರಷ್ಯಾದ ದಾಳಿಗೆ ಹೆದರುತ್ತಿವೆ. ಈ ಹಿನ್ನೆಲೆಯಲ್ಲಿ ರಷ್ಯಾ ಗಡಿಯಲ್ಲಿರುವ ದೇಶಗಳಿಗೆ ಅಮೆರಿಕ ಸೇನೆಯನ್ನು ಕಳುಹಿಸಿದೆ.

Ukrain-Russia Crisis: ರಷ್ಯಾ ಗಡಿಗೆ ಸೈನಿಕರನ್ನು ಕಳುಹಿಸಿದ US, ಮೂರನೇ ವಿಶ್ವ ಯುದ್ಧದ ಕುರಿತು Biden ಹೇಳಿದ್ದೇನು?

ವಾಷಿಂಗ್ಟನ್: Russian Invasion - ಯುಎಸ್ ಅಧ್ಯಕ್ಷ ಜೋ ಬಿಡನ್ (Joe Biden) ಅವರು ಲತಾವಿಯಾ, ಎಸ್ಟೋನಿಯಾ, ಲಿಥುವೇನಿಯಾ ಮತ್ತು ರೊಮೇನಿಯಾದಂತಹ ದೇಶಗಳಲ್ಲಿನ ರಷ್ಯಾಗೆ (Russia) ಹೊಂದಿಕೊಂಡಂತೆ ಇರುವ ಗಡಿಗೆ (Russian Border) 12,000 ಸೈನಿಕರನ್ನು ಕಳುಹಿಸಿದ್ದಾರೆ. ಆದರೆ, ತಾವು ಉಕ್ರೇನ್‌ನಲ್ಲಿ ಮೂರನೇ ಮಹಾಯುದ್ಧವನ್ನು ಎದುರಿಸಲು ಹೋಗುವುದಿಲ್ಲ ಎಂದು ಅವರು ಹೇಳಿದ್ದಾರೆ. ಉಕ್ರೇನ್ ವಿರುದ್ಧ ನಡೆಯುತ್ತಿರುವ ಯುದ್ಧದಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಎಂದಿಗೂ ಗೆಲ್ಲುವುದಿಲ್ಲ ಎಂದು ಅವರು ಹೇಳಿದ್ದಾರೆ. ಅಷ್ಟೇ ಅಲ್ಲ ಉಕ್ರೇನ್ ಪರವಾಗಿ ಹೋರಾಡಲು ಬಯಸುವ ಅಮೆರಿಕನ್ ನಾಗರಿಕರು ತಮ್ಮ ಸ್ವಇಚ್ಛೆಯಿಂದ ಹೋಗಬಹುದು ಮತ್ತು ಅವರನ್ನು ತಡೆಯಲಾಗುವುದಿಲ್ಲ ಎಂದು ಬಿಡೆನ್ ಹೇಳಿದ್ದಾರೆ. 

ಪ್ರತಿಯೊಂದು ಇಂಚು ಭೂಮಿ ರಕ್ಷಿಸಲಾಗುವುದು

ಹೌಸ್ ಡೆಮಾಕ್ರಟಿಕ್ ಕಾಕಸ್‌ನ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಬಿಡೆನ್, ಯುಎಸ್ ಉಕ್ರೇನ್‌ನಲ್ಲಿ ಮೂರನೇ ಮಹಾಯುದ್ಧದ ವಿರುದ್ಧ ಹೋರಾಡಲು ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ, ಆದರೆ ವಾಷಿಂಗ್ಟನ್ ನ್ಯಾಟೋ ಅಡಿಯಲ್ಲಿ ಬರುವ ಪ್ರತಿಯೊಂದು ಇಂಚು ಭೂಮಿಯನ್ನು ರಕ್ಷಿಸಲಿದೆ ಎಂದೂ ಕೂಡ ಹೇಳಿದ್ದಾರೆ.

ಇದನ್ನೂ ಓದಿ-Pakistan: ಭಾರತದ ರಫೇಲ್ ಎದುರಿಸಲು ಚೀನಾದಿಂದ J-10C ಖರೀದಿಸಿದ ಪಾಕಿಸ್ತಾನ!

ಮಿತ್ರಪಕ್ಷಗಳನ್ನು ಬೆಂಬಲಿಸುವೆವು
"ರಷ್ಯಾದ ಆಕ್ರಮಣವನ್ನು ಎದುರಿಸುವಲ್ಲಿ ಉಕ್ರೇನ್ ಜನರು ಗಮನಾರ್ಹವಾದ ಶೌರ್ಯ ಮತ್ತು ಧೈರ್ಯವನ್ನು ಪ್ರದರ್ಶಿಸಿದ್ದಾರೆ, ಆದರೆ ಯುಎಸ್ ಒದಗಿಸಿದ ಭದ್ರತಾ ನೆರವು ಅವರ ರಕ್ಷಣೆಯಲ್ಲಿ ಪ್ರಮುಖವಾಗಿದೆ" ಎಂದು ಬಿಡೆನ್ ಹೇಳಿದರು. "ನಾವು ಉಕ್ರೇನ್‌ಗೆ ಬೆಂಬಲ ನೀಡುತ್ತಿರುವಂತೆಯೇ, ಯುರೋಪ್‌ನಲ್ಲಿ ನಮ್ಮ ಮಿತ್ರರಾಷ್ಟ್ರಗಳೊಂದಿಗೆ ನಿಲ್ಲುವುದನ್ನು ನಾವು ಮುಂದುವರಿಸುತ್ತೇವೆ ಮತ್ತು ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಮತ್ತು ನ್ಯಾಟೋ ಭೂಮಿಯ ಪ್ರತಿ ಇಂಚಿನನ್ನೂ ಮರಳಿ ಪಡೆಯುತ್ತೇವೆ  ಎಂಬ ಸ್ಪಷ್ಟ ಸಂದೇಶವನ್ನು ರವಾನಿಸುತ್ತಿದ್ದೇವೆ" ಎಂದು ಯುಎಸ್ ಅಧ್ಯಕ್ಷರು ಹೇಳಿದ್ದಾರೆ.

ಇದನ್ನೂ ಓದಿ-Big Wonder - ಗಾಳಿಯಿಂದ ವಜ್ರ ತಯಾರಿಸಿದ ಕಂಪನಿ ! ಸುದ್ದಿ ಓದಿ... ನೀವೂ ನಿಬ್ಬೇರಗಾಗುವಿರಿ

NATO ಕ್ಷೇತ್ರದ ರಕ್ಷಣೆ ಮಾಡುವೆವು
'ಅದಕ್ಕಾಯಿಗೆ ನಾವು 12,000 ಅಮೆರಿಕನ್ ಸೈನಿಕರನ್ನು ಲತಾವಿಯಾ, ಎಸ್ಟೋನಿಯಾ, ಲಿಥುವೇನಿಯಾ ಮತ್ತು ರೊಮೇನಿಯಾ ಸೇರಿದಂತೆ ಇತರ ಕೆಲವು ದೇಶಗಳಲ್ಲಿ ರಷ್ಯಾದ ಗಡಿಗೆ ಕಳುಹಿಸಿದ್ದೇವೆ. ನಾವು ಪ್ರತಿದಾಳಿ ನಡೆಸಿದರೆ ಮೂರನೇ ಮಹಾಯುದ್ಧ ಖಚಿತ.'ನ್ಯಾಟೋ ಪ್ರದೇಶವನ್ನು ರಕ್ಷಿಸುವ ಪವಿತ್ರ ಜವಾಬ್ದಾರಿ ನಮ್ಮ ಮೇಲಿದ್ದರೂ ಉಕ್ರೇನ್‌ನಲ್ಲಿ ನಾವು ಮೂರನೇ ಯುದ್ಧ ಬಯಸುವುದಿಲ್ಲ' ಎಂದು ಬಿಡೆನ್ ಹೇಳಿದ್ದಾರೆ.

ಇದನ್ನೂ ಓದಿ-ಚೀನಾದಲ್ಲಿ ಕೊರೊನಾ ಪ್ರಕರಣಗಳ ಹೆಚ್ಚಳ, ನಗರಗಳಲ್ಲೆಡೆ ಲಾಕ್ ಡೌನ್ ಜಾರಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More