Home> World
Advertisement

ಭಾರತ, ಚೀನಾ ಡಬ್ಲ್ಯುಟಿಒ ಪ್ರಯೋಜನ ಪಡೆಯುವುದನ್ನು ಯುಎಸ್ ಸಹಿಸುವುದಿಲ್ಲ-ಡೊನಾಲ್ಡ್ ಟ್ರಂಪ್

ಭಾರತ ಮತ್ತು ಚೀನಾ ದೇಶಗಳು ಈಗ ಮುಂದುವರೆಯುತ್ತಿರುವ ರಾಷ್ಟ್ರಗಳಾಗಿ ಉಳಿದಿಲ್ಲ, ಆದ್ದರಿಂದ ಈ ಹಣೆ ಪಟ್ಟದ ಮೂಲಕ ಡಬ್ಲ್ಯೂಟಿಓ ದಿಂದ ಅವುಗಳು ಲಾಭ ಪಡೆಯುತ್ತಿವೆ, ಇದನ್ನು ಇನ್ಮುಂದೆ ಸಹಿಸುವುದಿಲ್ಲ ಎಂದು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪಷ್ಟಪಡಿಸಿದ್ದಾರೆ.  

ಭಾರತ, ಚೀನಾ ಡಬ್ಲ್ಯುಟಿಒ ಪ್ರಯೋಜನ ಪಡೆಯುವುದನ್ನು ಯುಎಸ್ ಸಹಿಸುವುದಿಲ್ಲ-ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್ : ಭಾರತ ಮತ್ತು ಚೀನಾ ದೇಶಗಳು ಈಗ ಮುಂದುವರೆಯುತ್ತಿರುವ ರಾಷ್ಟ್ರಗಳಾಗಿ ಉಳಿದಿಲ್ಲ, ಆದ್ದರಿಂದ ಈ ಹಣೆ ಪಟ್ಟದ ಮೂಲಕ ಡಬ್ಲ್ಯೂಟಿಓ ದಿಂದ ಅವುಗಳು ಲಾಭ ಪಡೆಯುತ್ತಿವೆ, ಇದನ್ನು ಇನ್ಮುಂದೆ ಸಹಿಸುವುದಿಲ್ಲ ಎಂದು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪಷ್ಟಪಡಿಸಿದ್ದಾರೆ.  

ಅಮೆರಿಕಾವೇ ಮೊದಲು ಎನ್ನುವ ನೀತಿಯನ್ನು ಪ್ರತಿಪಾದಿಸುತ್ತಿರುವ ಟ್ರಂಪ್, ಇತ್ತೀಚಿಗೆ ಭಾರತ ಅಮೆರಿಕಾದ ಉತ್ಪನ್ನಗಳ ಮೇಲೆ ವಿಧಿಸುತ್ತಿರುವ ತೆರಿಗೆ ವಿಚಾರವಾಗಿ ಸರಣಿ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದರು.ಸದ್ಯ ಅಮೇರಿಕಾ ಮತ್ತು ಚೀನಾ ನಡುವೆ ವ್ಯಾಪಾರ ಯುದ್ಧ ನಡೆಯುತ್ತಿದೆ. ಇತ್ತೀಚಿಗೆ ಡೊನಾಲ್ಡ್ ಟ್ರಂಪ್ ಚೀನಾದ ಸರಕುಗಳ ಮೇಲೆ ದಂಡದ ಸುಂಕವನ್ನು ವಿಧಿಸಿದ ನಂತರ ಇದಕ್ಕೆ ಬೀಜಿಂಗ್ ಪ್ರತೀಕಾರವನ್ನು ತಿರಿಸಿಕೊಂಡಿತ್ತು.

ಜುಲೈನಲ್ಲಿ, ಡೊನಾಲ್ಡ್ ಟ್ರಂಪ್ ವಿಶ್ವ ವ್ಯಾಪಾರ ಸಂಸ್ಥೆಯನ್ನು ಅಭಿವೃದ್ಧಿಶೀಲ-ದೇಶದ ಸ್ಥಾನಮಾನವನ್ನು ಹೇಗೆ ಗೊತ್ತುಪಡಿಸುತ್ತಾರೆ ಎಂದು ವ್ಯಾಖ್ಯಾನಿಸಲು ಕೇಳಿಕೊಂಡರು, ಇದು ಜಾಗತಿಕ ವ್ಯಾಪಾರ ನಿಯಮಗಳ ಅಡಿಯಲ್ಲಿ ಲಾಭ  ಪಡೆಯುತ್ತಿರುವ ಚೀನಾ, ಟರ್ಕಿ ಮತ್ತು ಭಾರತದಂತಹ ದೇಶಗಳನ್ನು ಪ್ರತ್ಯೇಕಿಸುವ ಗುರಿಯನ್ನು ಹೊಂದಿದೆ ಎನ್ನಲಾಗಿದೆ. ಮುಂದುವರಿದ ಆರ್ಥಿಕತೆಗಳು ಡಬ್ಲ್ಯುಟಿಒನ ಪ್ರಯೋಜನಗಳನ್ನು ಅನುಚಿತವಾಗಿ ತೆಗೆದುಕೊಳ್ಳುತ್ತಿದ್ದರೆ ದಂಡನಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಲು ಡೊನಾಲ್ಡ್ ಟ್ರಂಪ್ ಯುಎಸ್ ಟ್ರೇಡ್ ರೆಪ್ರೆಸೆಂಟೇಟಿವ್ (ಯುಎಸ್ಟಿಆರ್) ಗೆ ಮನವಿ ಮಾಡಿದ್ದರು.

ಮಂಗಳವಾರ ಪೆನ್ಸಿಲ್ವೇನಿಯಾದಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಅಧ್ಯಕ್ಷ ಟ್ರಂಪ್, ಭಾರತ ಮತ್ತು ಚೀನಾ - ಏಷ್ಯಾದ ಇಬ್ಬರು ಆರ್ಥಿಕ ದೈತ್ಯರು, ಇನ್ನು ಮುಂದೆ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲ ಮತ್ತು ಆದ್ದರಿಂದ ಅವರು ಡಬ್ಲ್ಯುಟಿಒದಿಂದ ಲಾಭ ಪಡೆಯಲು ಸಾಧ್ಯವಿಲ್ಲ ಎಂದು ಒತ್ತಿ ಹೇಳಿದರು.

Read More