Home> World
Advertisement

ಬಾಗ್ದಾದಿ ಹತ್ಯೆಗೂ ಮೊದಲು ಅವರ ಒಳ ಉಡುಪಿನ ಡಿಎನ್ಎ ಪರೀಕ್ಷೆ ಮಾಡಿದ್ದ ಯುಎಸ್..!

ಇಸ್ಲಾಮಿಕ್ ಸ್ಟೇಟ್ ನಾಯಕ ಅಬೂಬಕರ್ ಅಲ್-ಬಾಗ್ದಾದಿಯನ್ನು ಹತ್ಯೆಗೈಯುವ ಮೊದಲು ಅಮೇರಿಕಾ ಸೇನೆ ಅವರ ಒಳ ಉಡುಪಿನ ಡಿಎನ್ಎ ಪರೀಕ್ಷೆ ಮಾಡಿತ್ತು ಎಂದು ಸಿರಿಯನ್ ಡೆಮಾಕ್ರಟಿಕ್ ಪಡೆಗಳ ಸಲಹೆಗಾರ ಸೋಮವಾರ ಹೇಳಿದ್ದಾರೆ.

ಬಾಗ್ದಾದಿ ಹತ್ಯೆಗೂ ಮೊದಲು ಅವರ ಒಳ ಉಡುಪಿನ ಡಿಎನ್ಎ ಪರೀಕ್ಷೆ  ಮಾಡಿದ್ದ ಯುಎಸ್..!

ನವದೆಹಲಿ: ಇಸ್ಲಾಮಿಕ್ ಸ್ಟೇಟ್ ನಾಯಕ ಅಬೂಬಕರ್ ಅಲ್-ಬಾಗ್ದಾದಿಯನ್ನು ಹತ್ಯೆಗೈಯುವ ಮೊದಲು ಅಮೇರಿಕಾ ಸೇನೆ ಅವರ ಒಳ ಉಡುಪಿನ ಡಿಎನ್ಎ ಪರೀಕ್ಷೆ ಮಾಡಿತ್ತು ಎಂದು ಸಿರಿಯನ್ ಡೆಮಾಕ್ರಟಿಕ್ ಪಡೆಗಳ ಸಲಹೆಗಾರ ಸೋಮವಾರ ಹೇಳಿದ್ದಾರೆ.

ಕುರ್ದಿಷ್ ನೇತೃತ್ವದ ಎಸ್‌ಡಿಎಫ್‌ನ ಹಿರಿಯ ಸಲಹೆಗಾರ ಪೋಲಾಟ್ ಕ್ಯಾನ್, ಎಸ್‌ಡಿಎಫ್ ಗುಪ್ತಚರ ಕಾರ್ಯವು ಬಾಗ್ದಾದಿಯನ್ನು ಪತ್ತೆಹಚ್ಚಲು ಹೇಗೆ ಸಹಾಯ ಮಾಡಿದೆ ಎನ್ನುವ ವಿವರಣೆಗಳನ್ನು ಟ್ವಿಟರ್‌ನಲ್ಲಿ ನೀಡಿದ್ದಾರೆ. 'ನಮಗೆ ದೊರೆತ ಮಾಹಿತಿಗೆ ಅನುಗುಣವಾಗಿ ಅಲ್-ಬಾಗ್ದಾದಿಯನ್ನು ತಲುಪಲು ಸಾಧ್ಯವಾಯಿತು, ಡಿಎನ್ಎ ಪರೀಕ್ಷೆಯನ್ನು ನಡೆಸಲು ಅಲ್-ಬಾಗ್ದಾದಿಯ ಒಳ ಉಡುಪುಗಳನ್ನು ತಂದರು, ಆ ಮೂಲಕ ಅವರೇ ಎಂದು ಖಚಿತಪಡಿಸಿಕೊಳ್ಳಲಾಯಿತು' ಎಂದು ಕ್ಯಾನ್ ಹೇಳಿದರು. ಇನ್ನೊಂದೆಡೆ ಡೊನಾಲ್ಡ್ ಟ್ರಂಪ್ ಅವರು ಕುರ್ಡ್ಸ್ ನೀಡಿದ ಕೆಲವು ಮಾಹಿತಿಗನುಗುಣವಾಗಿ ಕಾರ್ಯಾಚರಣೆಯನ್ನು ಕೈಗೊಳ್ಳಲಾಯಿತು ಎಂದರು. 

ಎಸ್‌ಡಿಎಫ್ ಮೇ 15 ರಿಂದ ಸಿಐಎ ಜೊತೆ ಬಾಗ್ದಾದಿಯನ್ನು ಪತ್ತೆಹಚ್ಚಲು ಕೆಲಸ ಮಾಡುತ್ತಿದೆ ಮತ್ತು ಅವರು ಪೂರ್ವ ಸಿರಿಯಾದ ಡೀರ್ ಅಲ್-ಜೋರ್‌ನಿಂದ ಇಡ್ಲಿಬ್‌ಗೆ ಸ್ಥಳಾಂತರಗೊಂಡಿದ್ದಾರೆ ಎಂದು ಖಚಿತಪಡಿಸುವಲ್ಲಿ ಯಶಸ್ವಿಯಾದರು, ಆಗ ಅವರನ್ನು ಅಲ್ಲಿ ಹತ್ಯೆಗೈಯಲಾಯಿತು. ಕಾರ್ಯಾಚರಣೆ ನಡೆದಾಗ ಬಾಗ್ದಾದಿ ಸಿರಿಯನ್ ಪಟ್ಟಣವಾದ ಜರಾಬ್ಲಸ್‌ಗೆ ಸ್ಥಳವನ್ನು ಬದಲಾಯಿಸುವ ಯತ್ನದಲ್ಲಿದ್ದನು ಎಂದು ತಿಳಿದು ಬಂದಿದೆ.

'ಎಲ್ಲಾ ಬುದ್ಧಿವಂತಿಕೆ ಮತ್ತು ಅಲ್-ಬಾಗ್ದಾದಿಗೆ ಪ್ರವೇಶ ಮತ್ತು ಅವನ ಸ್ಥಳವನ್ನು ಗುರುತಿಸುವುದು ನಮ್ಮ ಸ್ವಂತ ಕೆಲಸದ ಫಲಿತಾಂಶವಾಗಿದೆ. ನಮ್ಮ ಗುಪ್ತಚರ ಮೂಲವು ನಿರ್ದೇಶನಗಳನ್ನು ಕಳುಹಿಸುವುದು, ಏರ್ ಡ್ರಾಪ್ ನ್ನು ನಿರ್ದೇಶಿಸುವುದು, ಭಾಗವಹಿಸುವುದು ಮತ್ತು ಕೊನೆಯ ನಿಮಿಷದವರೆಗೆ ಕಾರ್ಯಾಚರಣೆಯನ್ನು ಯಶಸ್ವಿಗೊಳಿಸುವಲ್ಲಿ ತೊಡಗಿದೆ 'ಎಂದು ಕ್ಯಾನ್ ಹೇಳಿದರು.

Read More