Home> World
Advertisement

ಭಾರತದಲ್ಲಿನ ಹೈಕಮಿಷನರ್ ವಾಪಾಸ್ ಕರೆಸಿಕೊಂಡ ಪಾಕ್

ಪುಲ್ವಾಮಾ ಉಗ್ರರ ದಾಳಿಯ ವಿಚಾರವಾಗಿ ಭಾರತದಲ್ಲಿ ಪಾಕ್ ನಡೆಗೆ ತೀವ್ರ ಖಂಡನೆ ವ್ಯಕ್ತವಾಗಿದ್ದು ಈ ಬೆನ್ನಲ್ಲೇ ಈಗ ಪಾಕಿಸ್ತಾನ ಭಾರತದಲ್ಲಿನ ತನ್ನ ಹೈಕಮಿಷನರ್ ಗೆ ಪಾಕ್ ಗೆ ವಾಪಸ್ ಬರುವಂತೆ ಸೂಚನೆ ನೀಡಿದೆ.

ಭಾರತದಲ್ಲಿನ ಹೈಕಮಿಷನರ್ ವಾಪಾಸ್ ಕರೆಸಿಕೊಂಡ ಪಾಕ್

ನವದೆಹಲಿ: ಪುಲ್ವಾಮಾ ಉಗ್ರರ ದಾಳಿಯ ವಿಚಾರವಾಗಿ ಭಾರತದಲ್ಲಿ ಪಾಕ್ ನಡೆಗೆ ತೀವ್ರ ಖಂಡನೆ ವ್ಯಕ್ತವಾಗಿದ್ದು ಈ ಬೆನ್ನಲ್ಲೇ ಈಗ ಪಾಕಿಸ್ತಾನ ಭಾರತದಲ್ಲಿನ ತನ್ನ ಹೈಕಮಿಷನರ್ ಗೆ ಪಾಕ್ ಗೆ ವಾಪಸ್ ಬರುವಂತೆ ಸೂಚನೆ ನೀಡಿದೆ.

ಈಗ ಈ ವಿಚಾರವನ್ನು ಪಾಕ್ ವಿದೇಶಾಂಗ ಸಚಿವಾಲಯದ ವಕ್ತಾರ ಮೊಹಮ್ಮದ್ ಫೈಸಲ್ ಈ ವಿಚಾರವನ್ನು ಟ್ವಿಟ್ಟರ್ ಮೂಲಕ ತಿಳಿಸಿದ್ದಾರೆ."ಭಾರತದಲ್ಲಿನ ನಮ್ಮ ಹೈಕಮಿಷನರ್ ರನ್ನು ಮಾತುಕತೆಗಾಗಿ ವಾಪಾಸ್ ಕರೆಯಿಸಿಕೊಂಡಿದ್ದೇವೆ.ಈ ಬೆಳಗ್ಗೆ ಅವರು ದೆಹಲಿಯಿಂದ ಹೊರಟಿದ್ದಾರೆ" ಎಂದು ಹೇಳಿದ್ದಾರೆ.

ಶುಕ್ರವಾರದಂದು ಭಾರತ ಪಾಕ್ ಹೈ ಕಮಿಷನರ್ ಸೋಹೈಲ್ ಮೊಹಮ್ಮದ್ ರನ್ನು ಕರೆಯಿಸಿಕೊಂಡು ಪುಲ್ವಾಮಾ ದಾಳಿಯ ವಿಚಾರವಾಗಿ ಖಂಡಿಸಿತ್ತು. ಇದೇ ದಿನ ಭಾರತವು ಕೂಡ ಪಾಕ್ ನಲ್ಲಿನ ಭಾರತದ ಹೈಕಮಿಷನರ್ ಅಜಯ್ ಬಿಸಾರಿಯಾ ರನ್ನು ವಾಪಸ್ ಕರೆಯಿಸಿಕೊಂಡಿತ್ತು. ಆ ಮೂಲಕ ಭಾರತವು ಜೈಶ್ ಇ ಮೊಹಮ್ಮದ್ ನಂತಹ ಸಂಘಟನೆಗಳ ವಿರುದ್ದ ಶಿಸ್ತುಕ್ರಮ ತೆಗೆದುಕೊಳ್ಳಬೇಕೆಂದು ಪಾಕ್ ಸೂಚಿಸಿತ್ತು.

ಅಲ್ಲದೆ ಪಾಕ್ ಗೆ ನೀಡಿರುವ ಆಪ್ತ ದೇಶದ ಸ್ಥಾನಮಾನವನ್ನು ಸಹಿತ ಹಿಂದೆಗೆದುಕೊಂಡಿತ್ತು ಅಲ್ಲದೆ ಜಾಗತೀಕವಾಗಿ ಪಾಕ್ ದೇಶವನ್ನು ಒಬ್ಬಂಟಿ ಮಾಡಲು ಎಲ್ಲ ರೀತಿಯ ಕ್ರಮವನ್ನು ಭಾರತ ಕೈಗೊಳ್ಳಲಿದೆ ಎಂದು ಹೇಳಿತ್ತು.   

Read More