Home> World
Advertisement

Rishi Sunak: "ರಿಷಿ ಸುನಕ್ ಬ್ರಿಟನ್ ಪ್ರಧಾನಿಯಾಗಿದ್ದು ನನ್ನ ಮಗಳಿಂದ" ಎಂದ್ರು ಸುಧಾ ಮೂರ್ತಿ

Sudha Murthy On Rishi Sunak: ಸುಧಾ ಮೂರ್ತಿ ಅವರು ಒಂದು ಇನ್‌ಸ್ಟಾಗ್ರಾಮ್ ಪೋಸ್ಟ್‌ವೊಂದು ವೈರಲ್‌ ಆಗಿದೆ. ನನ್ನ ಮಗಳು ಅವಳ ಪತಿಯನ್ನು ಪ್ರಧಾನಿ ಮಾಡಿದಳು ಎಂದು ಈ ವಿಡಿಯೋದಲ್ಲಿ ಅವರು ಹೇಳಿದ್ದಾರೆ.  
 

Rishi Sunak:

Sudha Murthy On Rishi Sunak: ರಿಷಿ ಸುನಕ್ ಯುಕೆ ಪ್ರಧಾನಿಯಾಗಿದ್ದು ತಮ್ಮ ಮಗಳು ಅಕ್ಷತಾ ಮೂರ್ತಿ ಅವರಿಂದ ಎಂದು ಅವರ ಅತ್ತೆ ಸುಧಾ ಮೂರ್ತಿ ಹೇಳಿದ್ದಾರೆ. ಸುಧಾ ಮೂರ್ತಿ ಅವರ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿದೆ, ಅದರಲ್ಲಿ ರಿಷಿ ಸುನಕ್ ಅವರು ತಮ್ಮ ಮಗಳಿಂದಾಗಿ ಬ್ರಿಟನ್‌ನ ಅತ್ಯಂತ ಕಿರಿಯ ಪ್ರಧಾನಿಯಾಗಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ವಿಡಿಯೋದಲ್ಲಿ ಸುಧಾ ಅವರು "ನಾನು ನನ್ನ ಪತಿಯನ್ನು ಉದ್ಯಮಿ ಮಾಡಿದ್ದೇನೆ. ನನ್ನ ಮಗಳು ತನ್ನ ಪತಿಯನ್ನು ಯುಕೆ ಪ್ರಧಾನಿಯನ್ನಾಗಿ ಮಾಡಿದಳು" ಎಂದಿದ್ದಾರೆ.

ಸುಧಾ ಮೂರ್ತಿ ಅವರ ವಿಡಿಯೋ ವೈರಲ್‌ : 

ಇನ್‌ಸ್ಟಾಗ್ರಾಮ್ ನಲ್ಲಿ ಪೋಸ್ಟ್‌ ಮಾಡಲಾದ ಈ ವಿಡಿಯೋದಲ್ಲಿ ಸುಧಾ ಮೂರ್ತಿ, "ಇದಕ್ಕೆ ಕಾರಣ ಹೆಂಡತಿಯ ಮಹಿಮೆ. ಹೆಂಡತಿ ತನ್ನ ಗಂಡನನ್ನು ಹೇಗೆ ಬದಲಾಯಿಸಬಹುದು ಎಂಬುದನ್ನು ನೋಡಿ. ನಾನು ನನ್ನ ಪತಿಯನ್ನು ಉದ್ಯಮಿಯನ್ನಾಗಿ ಮಾಡಿದ್ದೇನೆ ಮತ್ತು ನನ್ನ ಮಗಳು ಅವಳ ಪತಿಯನ್ನು ಪ್ರಧಾನಿಯನ್ನಾಗಿ ಮಾಡಿದಳು" ಎಂಉ ಹೇಳಿದ್ದಾರೆ.

ಇದನ್ನೂ ಓದಿ: "ಗಡಿ ಉಲ್ಲಂಘನೆಯು ಇಂಡೋ-ಚೀನಾ ದೇಶಗಳ ಸಂಬಂಧಗಳನ್ನು ಹಾಳು ಮಾಡಿದೆ'

ಅಕ್ಷತಾ 730 ಮಿಲಿಯನ್ ಪೌಂಡ್ ಮೌಲ್ಯದ ಆಸ್ತಿಯ ಒಡತಿ :

ರಿಷಿ ಸುನಕ್ 2009 ರಲ್ಲಿ ಅಕ್ಷತಾ ಮೂರ್ತಿ ಅವರನ್ನು ವಿವಾಹವಾದರು. ಆ ಬಳಿಕ ಅವರು ಅಧಿಕಾರದ ಏಣಿಯನ್ನು ಅತ್ಯಂತ ವೇಗವಾಗಿ ಏರಿದರು. ವಿಶ್ವದ ಅತ್ಯಂತ ಶ್ರೀಮಂತ ಬಿಲಿಯನೇರ್‌ಗಳಲ್ಲಿ ಒಬ್ಬರ ಮಗಳು ಮತ್ತು ಸುಮಾರು £730 ಮಿಲಿಯನ್ ವೈಯಕ್ತಿಕ ಸಂಪತ್ತನ್ನು ಹೊಂದಿರುವ ಅಕ್ಷತಾ ಮೂರ್ತಿ ವಿಶ್ವದ ಶಕ್ತಿಶಾಲಿ ಮಹಿಳೆಯರಲ್ಲಿ ಒಬ್ಬರು. ಅವರ ಪೋಷಕರು ಭಾರತದಲ್ಲಿದ್ದಾರೆ. ಇನ್ಫೋಸಿಸ್‌ ಫೌಂಡೇಶನ್‌ನ ಸಂಸ್ಥಾಪಕರಾದ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ಅವರ ಮಗಳು ಅಕ್ಷತಾ ಮೂರ್ತಿ.   

ಇದನ್ನೂ ಓದಿ: ಉತ್ತರ ಕೊರಿಯಾ ಪರಮಾಣು ದಾಳಿಗೆ ಮುಂದಾದಲ್ಲಿ ಆ ದೇಶದ ಆಡಳಿತವೇ ಅಂತ್ಯ ಎಂದ ಯುಎಸ್ 

ಅಕ್ಷತಾ ಮೂರ್ತಿ ಅವರ ತಂದೆ ನಾರಾಯಣ ಮೂರ್ತಿ ಅವರು ಭಾರತದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು. 42 ನೇ ವಯಸ್ಸಿನಲ್ಲಿ ಆಧುನಿಕ ಇತಿಹಾಸದಲ್ಲಿ ಬ್ರಿಟನ್‌ನ ಅತ್ಯಂತ ಕಿರಿಯ ಪ್ರಧಾನ ಮಂತ್ರಿಯಾಗುವುದರ ಜೊತೆಗೆ, ಸುನಕ್ ಕೇವಲ ಏಳು ವರ್ಷಗಳಲ್ಲಿ ಪ್ರಧಾನಿಯಾದ ಸಂಸದ ಎಂಬ ದಾಖಲೆ ಬರೆದಿದ್ದಾರೆ. 

ಹೀಗಿದೆ ಸುನುಕ್‌ ಜೀವನಶೈಲಿ : 

ಸುಧಾ ಮೂರ್ತಿ ಅವರು ತಮ್ಮ ಮಗಳು ಪ್ರಧಾನಿಯವರ ಜೀವನಶೈಲಿ ಬಗ್ಗೆ ಕೂಡ ಈ ವಿಡಿಯೋದಲ್ಲಿ ಹೇಳಿದ್ದಾರೆ. ಅವರ ಆಹಾರಕ್ರಮ, ಪ್ರತಿ ಗುರುವಾರ ಉಪವಾಸ ಮಾಡುವ ಸಂಪ್ರದಾಯ ಹೀಗೆ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಸುನಕ್ ಪ್ರತಿ ಗುರುವಾರ ಉಪವಾಸ ಮಾಡಿದರೆ ಅವರ ತಾಯಿ ಪ್ರತಿ ಸೋಮವಾರ ಉಪವಾಸ ಮಾಡುತ್ತಾರಂತೆ. ನಮ್ಮ ಅಳಿಯನ ಕುಟುಂಬ 150 ವರ್ಷಗಳಿಂದ ಇಂಗ್ಲೆಂಡಿನಲ್ಲಿದೆ. ಆದರೆ ಅವರು ತುಂಬಾ ಧಾರ್ಮಿಕರು ಎನ್ನುತ್ತಾರೆ ಸುಧಾ ಮೂರ್ತಿ. 

ಇದನ್ನೂ ಓದಿ: ಹೃದಯಾಘಾತದಿಂದ ಸಾವು, ನಂತರ 28 ನಿಮಿಷಗಳವರೆಗೆ ವ್ಯಕ್ತಿ ನೋಡಿದ್ದು ಬೆಚ್ಚಿಬೀಳಿಸುವಂತಿದೆ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More