Home> World
Advertisement

ಮೆಕ್ಸಿಕೋ: ಒಂದೇ ಕುಟುಂಬದ ಏಳು ಜನರ ಹತ್ಯೆ

ನಗರದಲ್ಲಿ ಹೆಚ್ಚುತ್ತಿರುವ ಹಿಂಸಾತ್ಮಕ ಘಟನೆಗಳನ್ನು ನಿಯಂತ್ರಿಸಲು ಪೊಲೀಸರು ಸತತವಾಗಿ ಪ್ರಯತ್ನಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೆಕ್ಸಿಕೋ: ಒಂದೇ ಕುಟುಂಬದ ಏಳು ಜನರ ಹತ್ಯೆ

ಮೆಕ್ಸಿಕೋ: ಮೆಕ್ಸಿಕೋದ ಕ್ಯಾನ್ಕುನ್ನಲ್ಲಿ, ಒಂದೇ ಕುಟುಂಬದ ಏಳು ಜನರನ್ನು ಹತ್ಯೆಗೈದಿರುವ ಸುದ್ದಿ ಪ್ರದೇಶದಲ್ಲಿ ಬೆಂಕಿಯಂತೆ ಹರಡಿದೆ. ಮೂರು ಗೂಂಡಾಗಳು ಮನೆಗೆ ಪ್ರವೇಶಿಸಿ ಕುಟುಂಬದ ಎಲ್ಲಾ ಸದಸ್ಯರನ್ನು ಹತ್ಯೆಗೈದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಗಳು ಮಾದಕ ದ್ರವ್ಯ ಸೇವಿಸಿದ್ದು, ಪರಸ್ಪರರ ನಡುವಿನ ವಿವಾದ ಹತ್ಯೆಗೆ ಕಾರಣವಿರಬಹುದು ಎಂದು ಹೇಳಲಾಗಿದೆ. ಕ್ಯಾನ್ಕ್ಯುನ್ ನಗರವು ಕೆರಿಬಿಯನ್ ಕರಾವಳಿ ರಾಜ್ಯದ ಕ್ವಿಂಟಾನಾ ದಲ್ಲಿದೆ. ನಗರದಲ್ಲಿ ಹಿಂಸಾತ್ಮಕ ಘಟನೆಗಳು ಹೆಚ್ಚುತ್ತಿದ್ದು, ಪೊಲೀಸರು ಅವರನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನಗರದ ಪೋಲಿಸ್ ಮುಖ್ಯಸ್ಥ ಅಲ್ಬರ್ಟೋ ಕ್ಯಾಪೆಲ್ಲಾ, ಭಾನುವಾರ ಕುಟುಂಬದ ಮೇಲೆ ದಾಳಿ ನಡೆದಿದೆ, ನಂತರ ಅವರು ಮರಣ ಹೊಂದಿದ್ದಾರೆ. ಬಳಿಕ ದಾಳಿಕೋರರು ತಪ್ಪಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ. 

ಮದ್ಯ ಸೇವನೆ ಮತ್ತು ನಶೆಯಿಂದಾಗಿ ಸ್ಥಳೀಯ ಕಳ್ಳಸಾಗಾಣಿಕೆದಾರರ ಗುಂಪುಗಳ ನಡುವೆ ವಿವಾದ ಉಂಟಾಗಿದೆ ಎಂದು ಈವರೆಗಿನ ತನಿಖೆಯಿಂದ ತಿಳಿದುಬಂದಿದೆ.  ನಶೆಯಲ್ಲಿದ್ದ ಆರೋಪಿಗಳು ಈ ಜನರ ಮೇಲೆ ಹಲ್ಲೆ ನಡೆಸಿ ಅವರುನ್ನು ಕೊಂದು ನಂತರ ಅಲ್ಲಿಂದ ಓಡಿಹೋಗಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ.
 

Read More