Home> World
Advertisement

Coronavirus ಗಿಂತ ಭಯಾನಕ ವೈರಸ್ ಬರಲಿದೆ ಎಚ್ಚರ! ಎಂದ Ebola ಪತ್ತೆಹಚ್ಚಿದ ವಿಜ್ಞಾನಿ

Deadliest Viruses: ಮುಂಬರುವ ದಿನಗಳಲ್ಲಿ ಕೊರೊನಾ ವೈರಸ್ ಗಿಂತಲೂ ಹೆಚ್ಚು ಮಾರಕವಾಗಿರುವ ವೈರಸ್ ಗಳು ಪತ್ತೆಯಾಗಳಿವೆ ಎಂದು Ebola ಕಂಡುಹಿಡಿದ ವಿಜ್ಞಾನಿಯೊಬ್ಬರು ಎಚ್ಚರಿಕೆ ನೀಡಿದ್ದಾರೆ.

Coronavirus ಗಿಂತ ಭಯಾನಕ ವೈರಸ್ ಬರಲಿದೆ ಎಚ್ಚರ! ಎಂದ  Ebola ಪತ್ತೆಹಚ್ಚಿದ ವಿಜ್ಞಾನಿ

ನವದೆಹಲಿ: Deadliest Viruses - ಪ್ರಸ್ತುತ ವಿಶ್ವಾದ್ಯಂತ  ಲಕ್ಷಾಂತರ ಜನರು ಈಗಾಗಲೇ ಕೊರೊನಾವೈರಸ್‌ನಿಂದ ಬಳಲುತ್ತಿದ್ದಾರೆ ಮತ್ತು ಲಂಡನ್‌ನಲ್ಲಿ, ಹೊಸ ಹೊಸ ರೂಪದ ವೈರಸ್ ತನ್ನ ತನ್ನ ಪಾದಗಳನ್ನು ವೇಗವಾಗಿ ಪಸರಿಸುತ್ತಿದೆ. ಹೊಸ ಸ್ಟ್ರೆನ್ ಅಲ್ಲಿನ ಜನರಲ್ಲಿ ಉದ್ವೇಗ ಮತ್ತು ಭೀತಿ ಎರಡನ್ನು ಸೃಷ್ಟಿಸಿದೆ. ಆದ್ದರಿಂದ, ಹೊಸ ವೈರಸ್ ಅನ್ನು ನಿಲ್ಲಿಸಲು, ವಿಶ್ವದ ಎಲ್ಲಾ ದೇಶಗಳು ಪ್ರಯಾಣದ ಮೇಲೆ ನಿರ್ಬಂಧ ವಿಧಿಸುತ್ತಿವೆ.  ಏತನ್ಮಧ್ಯೆ, ವಿಜ್ಞಾನಿಯೊಬ್ಬರು ಮುಂದಿನ ದಿನಗಳಲ್ಲಿ ಇನ್ನೂ ಅನೇಕ ವೈರಸ್ ಗಳು ಹೊರಹೊಮ್ಮಲಿವೆ ಎಂದು ಎಚ್ಚರಿಕೆ ನೀಡಿದ್ದಾರೆ. 

ಇದನ್ನು ಓದಿ- Coronavirus new variant: ಗಂಭೀರ ಹೇಳಿಕೆ ನೀಡಿದ WHO.. ಇಲ್ಲಿದೆ ವಿವರ

ಆಫ್ರಿಕಾದಲ್ಲಿ ಹರಡುತ್ತಿದೆ ಹೊಸ ವೈರಸ್
ಎಬೋಲಾ ರೋಗವನ್ನು ಕಂಡುಹಿಡಿದ ವಿಜ್ಞಾನಿಯೊಬ್ಬರು ಮುಂದಿನ ದಿನಗಳಲ್ಲಿ, ಕೊವಿಡ್-19 ಗಿಂತಲೂ ಹೆಚ್ಚು ಮಾರಕವಾಗಿರುವ ವೈರಸ್ ಗಳು ಬರಲಿವೆ ಎಂದು ಹೇಳಿದ್ದಾರೆ.  ಪ್ರೊಫೆಸರ್ ಡಾ. ಜೀನ್-ಜಾಕ್ವೆಸ್ ಮುಯೆಂಬೆ ಟ್ಯಾಂಫಮ್, ಅವರು 1976 ರಲ್ಲಿ ಎಬೋಲಾ ಆವಿಷ್ಕಾರಕ್ಕೆ ಸಹಕರಿಸಿದ್ದರು. ಭವಿಷ್ಯದಲ್ಲಿ ಅಸಂಖ್ಯ  ವೈರಸ್‌ಗಳು ಬರಲಿವೆ ಎಂದು ಅವರು ಹೇಳಿದ್ದಾರೆ. ಅವುಗಳಲ್ಲಿ ಕೆಲವು ಪ್ರಸ್ತುತ COVID-19 ಗಿಂತಲೂ ಹೆಚ್ಚು ಅಪಾಯಕಾರಿಯಾಗಿರಲಿವೆ. ಈ ವೈರಸ್‌ಗಳು ಆಫ್ರಿಕಾದ ಉಷ್ಣವಲಯದ ಮಳೆಕಾಡುಗಳಲ್ಲಿಈ ವೈರಸ್ ಗಳು ಈಗಾಗಲೇ ಹುಟ್ಟಿಕೊಂಡಿವೆ ಎಂದು ಅವರು ಹೇಳಿದ್ದಾರೆ. CNN ಗೆ ನೀಡಿದ ಸಂದರ್ಶನವೊಂದರಲ್ಲಿ ಈ ಎಚ್ಚರಿಕೆಯನ್ನು ನೀಡಿರುವ ಟ್ಯಾಂಫಮ್,  ಹೊಸ ರೋಗಕಾರಕಗಳು (Pathogens) ಹೊರಹೊಮ್ಮುವ ಜಗತ್ತಿನಲ್ಲಿ ನಾವು ವಾಸಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ಮಾನವೀಯತೆಗೆ ಬಹಳ ಅಪಾಯಕಾರಿಯಾದ ವೈರಸ್‌ಗಳು ಆಫ್ರಿಕಾದ ಮಳೆಕಾಡು ಪ್ರದೇಶಗಳಲ್ಲಿ ಅಸಂಖ್ಯ ರೀತಿಯಲ್ಲಿ ಹುಟ್ಟಿಕೊಳ್ಳುತ್ತಿವೆ ಎಂದು ಅವರು ಹೇಳಿದ್ದಾರೆ.

ಇದನ್ನು ಓದಿ- ಹೊಸ ಪ್ರಭೇಧದ ಕೋವಿಡ್ ವೈರಸ್ ಪತ್ತೆ; ತತ್ತರವಾದ ಜಗತ್ತು- ಇಲ್ಲಿವೆ ಪ್ರಮುಖ ಬೆಳವಣಿಗೆಗಳ ಸಾರ

ಅಪಾರ ಹಾನಿ ಸೃಷ್ಟಿಸಿದ್ದ ಎಬೋಲಾ
ಎಬೋಲಾ ಪತ್ತೆಯಾದ ಸಂದರ್ಭದಲ್ಲಿ, ಡಾ. ಜೀನ್ ಈ ಕಾಯಿಲೆಯಿಂದ ಬಳಲುತ್ತಿರುವ ಜನರ ರಕ್ತದ ಮಾದರಿಗಳನ್ನು ತೆಗೆದುಕೊಳ್ಳುವಲ್ಲಿ ಮುಂಚೂಣಿಯಲ್ಲಿದ್ದರು. ಎಬೋಲಾ ಬಹಳ ಮಾರಣಾಂತಿಕ ಕಾಯಿಲೆಯಾಗಿದ್ದು ಅದು ರಕ್ತಸ್ರಾವಕ್ಕೆ (haemorrhages) ಕಾರಣವಾಗುತ್ತದೆ ಮತ್ತು ಅದರ ಪ್ರಮಾಣ ತುಂಬಾ ಹೆಚ್ಚಾಗಿರುತ್ತದೆ. ಅದರ ಹರಡುವಿಕೆಯ ಆರಂಭದಲ್ಲಿ, ಸೋಂಕಿತ ರೋಗಿಗಳಲ್ಲಿ ಶೇ. 88 ರಷ್ಟು ಜನರು ಸಾವನ್ನಪ್ಪಿದರು. ಈ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಯ ಶೇ. 80 ರಷ್ಟು ಸಿಬ್ಬಂದಿ ಕೂಡ ಪ್ರಾಣ ಕಳೆದುಕೊಂಡಿದ್ದರು. ಯಂಬುಕು ಮಿಷನ್ ಆಸ್ಪತ್ರೆಯಲ್ಲಿ  (Yambuku Mission Hospital)ಎಬೋಲಾ ಸೋಂಕನ್ನು ಪತ್ತೆಹಚ್ಚಲಾಗಿತ್ತು.

ಇದನ್ನು ಓದಿ- ಸರ್ಕಾರದ ಚಿಂತೆ ಹೆಚ್ಚಿಸಿದ ಕರೋನವೈರಸ್‌ನ ಹೊಸ ರೂಪಾಂತರ

ಮಾದರಿಗಳನ್ನು ಯುರೋಪ್ ಮತ್ತು ಯುಎಸ್ಗೆ ವರ್ಗಾಯಿಸಿದ ನಂತರ, ವಿಜ್ಞಾನಿಗಳು ಎಬೋಲಾ ಎಂಬ ದುನ್ದಾಕಾರದ  ವೈರಸ್ ಅನ್ನು ಪತ್ತೆಹಚ್ಚಿದ್ದರು. ಎಬೋಲಾ ವೈರಸ್ ಬಗ್ಗೆ ಅನೇಕ ಜನರಿಗೆ ತಿಳಿದಿದೆ ಆದರೆ ಅದಕ್ಕೆ ಎಬೋಲಾ ಎಂದು ಏಕೆ ಹೆಸರಿಸಲಾಗಿದೆ ಎಂಬುದು ತಿಳಿದಿಲ್ಲ. ಮಾಹಿತಿಗಾಗಿ, ಈ  ವೈರಸ್ ಪತ್ತೆಯಾದ ಸ್ಥಳದ ಹತ್ತಿರದಲ್ಲಿ ಎಬೋಲಾ ನದಿ ಹರಿಯುತ್ತಿತ್ತು ಎಂದು ವಿಜ್ಞಾನಿಗಳು ಹೇಳುತ್ತಾರೆ. ಇದನ್ನು ಜೈರ್ ಎಂದೂ ಕರೆಯುತ್ತಾರೆ. ನಂತರದ ದಿನಗಳಲ್ಲಿ ವಿಜ್ಞಾನಿಗಳು ಈ ವೈರಸ್ ಗೆ ಎಬೋಲಾ ಎಂಬ ಹೆಸರನ್ನಿಟ್ಟಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More