Home> World
Advertisement

ಒಂದೆಡೆ ರಷ್ಯಾ-ಉಕ್ರೇನ್‌ ವಾರ್‌; ಇನ್ನೊಂದೆಡೆ ಝೆಲೆನ್ಸ್ಕಿ-ಪುಟಿನ್‌ ಮಗಳ ಲವ್‌! ಇದೇನು ಕಹಾನಿ!

ಪುಟಿನ್‌ ಮಗಳು ಕ್ಯಾಥರಿನಾ ಟಿಕೊನೊವಾ ಈ ಹಿಂದೆ ನರ್ತಕಿಯಾಗಿ ಕೆಲಸ ಮಾಡುತ್ತಿದ್ದರು. ಕ್ಯಾತೆರಿನಾ ಹಾಗೂ ಉಕ್ರೇನ್‌ ಅಧ್ಯಕ್ಷ ಝೆಲೆನ್ಸ್ಕಿ ಡೇಟಿಂಗ್‌ ನಡೆಸುತ್ತಿದ್ದಾರೆ ಎಂಬೆಲ್ಲಾ ಸುದ್ದಿ ಹರಿದಾಡಿದವು. 

ಒಂದೆಡೆ ರಷ್ಯಾ-ಉಕ್ರೇನ್‌ ವಾರ್‌; ಇನ್ನೊಂದೆಡೆ ಝೆಲೆನ್ಸ್ಕಿ-ಪುಟಿನ್‌ ಮಗಳ ಲವ್‌! ಇದೇನು ಕಹಾನಿ!

ರಷ್ಯಾ ಉಕ್ರೇನ್‌ ಯುದ್ಧ ಮುಂದುವರೆಯುತ್ತಲೇ ಇದೆ. ಎರಡೂ ರಾಷ್ಟ್ರಗಳು ಸಂಧಾನದ ಮಾತುಕತೆಗೂ ಮುಂದಾಗುತ್ತಿಲ್ಲ. ಈಗಾಗಲೇ ಅದೆಷ್ಟೋ ಮಂದಿ ಪ್ರಾಣ ಉಳಿಸಿಕೊಂಡರೆ ಸಾಕಪ್ಪಾ ಎನ್ನುತ್ತಾ ದೇಶ ತೊರೆದಿದ್ದಾರೆ. ಆದರೆ ಈ ಎಲ್ಲದರ ಮಧ್ಯೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರ ಮಗಳು ಮತ್ತು ಉಕ್ರೇನ್‌ ಅಧ್ಯಕ್ಷ ಝೆಲೆನ್ಸ್ಕಿ ನಡುವೆ ಪ್ರೇಮಾಂಕುರವಾಗಿದೆ. ಅವರಿಬ್ಬರು ಮದುವೆಯಾಗಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಡುತ್ತಿದೆ. 

ಇದನ್ನು ಓದಿ: Monkeypox: ಬ್ರಿಟನ್ ನಲ್ಲಿ ಮಂಗನ ಕಾಯಿಲೆಯ ಸಮುದಾಯ ಹರಡುವಿಕೆ ಆರಂಭ, ಕಟ್ಟೆಚ್ಚರ ಮೋಡ್ ನಲ್ಲಿ ಸರ್ಕಾರ

ಪುಟಿನ್‌ ಮಗಳು ಕ್ಯಾತೆರಿನ್‌ ಟಿಕೊನೊವಾ ಈ ಹಿಂದೆ ಬ್ಯಾಲೆಟ್‌ ಡ್ಯಾನ್ಸರ್‌ ಆಗಿದ್ದರು. ಕ್ಯಾತೆರಿನ್‌ ಹಾಗೂ ಉಕ್ರೇನ್‌ ಅಧ್ಯಕ್ಷ ಝೆಲೆನ್ಸ್ಕಿ ಡೇಟಿಂಗ್‌ ನಡೆಸಿ, ಇದೀಗ ಮದುವೆಯೂ ಆಗಿದ್ದಾರೆ ಎಂಬೆಲ್ಲಾ ಸುದ್ದಿ ಹರಿದಾಡಿದ್ದವು. ಅಷ್ಟೇ ಅಲ್ಲದೆ, ಅನೇಕರು ಹಾಗಾದ್ರೆ ಯುದ್ಧ ನಿಲ್ಲುತ್ತಾ ಎಂಬ ಪ್ರಶ್ನೆಯನ್ನೂ ಸಹ ಕೇಳಿದ್ದರು. ಆದರೆ ಇಲ್ಲಿರುವ ಕಥೆಯೇ ಬೇರೆ. 

́ಪುಟಿನ್‌ ಮಗಳು ಕ್ಯಾತೆರಿನ್‌ ಪ್ರೀತಿಸಿದ್ದು, ಇಗೋರ್‌ ಝೆಲೆನ್ಸ್ಕಿ ಎಂಬಾತನನ್ನು.ಈತನೂ ಬ್ಯಾಲೆಟ್‌ ಡ್ಯಾನ್ಸರ್‌ ಆಗಿದ್ದ. ಅಷ್ಟೇ ಅಲ್ಲದೆ, ಪುಟಿನ್‌ ಸಂಪುಟದಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಆದರೆ ಉಕ್ರೇನ್‌ ವಿರುದ್ಧ ಯುದ್ಧ ಸಾರಿದ ಬಳಿಕ ಕೋಪಗೊಂಡು ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ. ಇನ್ನು ಕ್ಯಾತೆರಿನ್‌ ಮತ್ತು ಝೆಲೆನ್ಸ್ಕಿ ಡ್ಯಾನ್ಸ್‌ ಅಭ್ಯಾಸ ಮಾಡುತ್ತಿದ್ದ ಸಂದರ್ಭದಲ್ಲಿ ಪರಸ್ಪರ ಪ್ರೀತಿಸಿದ್ದಾರೆ. ಬಳಿಕ ಮದುವೆಯೂ ಆಗಿದ್ದಾರೆ. ಇದಕ್ಕೂ ಮುಂಚೆ ಜರ್ಮನಿ ಮೂಲದವರಾಗಿದ್ದ ಇಗೋರ್‌ನನ್ನು ಭೇಟಿ ಮಾಡಲೆಂದು ಆಗಾಗ ಕ್ಯಾತೆರಿನ್‌ ಜರ್ಮನ್‌ಗೆ ಭೇಟಿ ನೀಡುತ್ತಿದ್ದಳು. ಈ ಮೂಲಕ ಅವರ ರಹಸ್ಯಮಯ ಲವ್‌ಸ್ಟೋರಿ ಬಹಿರಂಗವಾಗಿತ್ತು.

ಆದರೆ ಕೆಲ ಮಾಧ್ಯಮಗಳು ಪುಟಿನ್‌ ಮಗಳು ಕ್ಯಾತೆರಿನ್‌ , ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್ಸ್ಕಿಯನ್ನು ಪ್ರೇಮಿಸುತ್ತಿದ್ದಾರೆ ಎಂದು ವರದಿ ಮಾಡಿವೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಕ್ಯಾತೆರಿನ್‌, "ನಾನು ಪ್ರೀತಿಸಿರುವುದು ಇಗೋರ್‌ ಝೆಲೆನ್ಸ್ಕಿಯನ್ನು. ಉಕ್ರೇನ್‌ ಅಧ್ಯಕ್ಷರನ್ನಲ್ಲ" ಎಂದು ಸ್ಪಷ್ಟನೆ ನೀಡಿದ್ದಾರೆ. 

ಇದನ್ನು ಓದಿ: Shocking: ಪಂಜರದಲ್ಲಿರುವ ಸಿಂಹದ ಜೊತೆಗೆ ಚೆಲ್ಲಾಟ, ನೋಡುತ್ತಲೇ ನಡೆದ್ಹೋಯ್ತು ಈ ಘಟನೆ

ಉಕ್ರೇನ್‌ ಮೇಲೆ ರಷ್ಯಾ ಯುದ್ಧ ಸಾರಿದ ಬಳಿಕ, ಅಧ್ಯಕ್ಷ ಪುಟಿನ್‌ ವೈಯಕ್ತಿಕ ಜೀವನದ ಬಗ್ಗೆ ಅನೇಕ ವಿಷಯಗಳು ಬಹಿರಂಗವಾಗಲು ಪ್ರಾರಂಭವಾಗಿದೆ. ಇದೀಗ ಪುಟಿನ್‌ ಮಗಳು ಕ್ಯಾಥರಿನಾ ಟಿಕೊನೊವಾ ಮತ್ತು ಇಗೋರ್‌ ಝೆಲೆನ್ಸ್ಕಿ ಪ್ರೇಮದ ವಿಷಯವೂ ಹೊರಬಂದಿದ್ದು, ಎಷ್ಟು ಸತ್ಯಕ್ಕೆ ಸಮೀಪವಾಗಿದೆ ಎಂಬುದು ತಿಳಿದಿಲ್ಲ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More