Home> World
Advertisement

Russia Ukraine war updates : ಉಕ್ರೇನ್‌ನ ಖಾರ್ಕಿವ್‌ನಲ್ಲಿ ಎತ್ತ ನೋಡಿದರೂ ವಿನಾಶ, ಮಿಲಿಟರಿ ಅಕಾಡೆಮಿ ಮತ್ತು ವಾಯುಪಡೆ ವಿಶ್ವವಿದ್ಯಾಲಯದ ಮೇಲೆ ದಾಳಿ

Kharkiv Attack:  ಉಕ್ರೇನ್ ಸೇನೆಯ ಪ್ರಕಾರ, ರಷ್ಯಾದ ಸೇನೆಯ ಶೆಲ್ ದಾಳಿ ತೀವ್ರಗೊಂಡಿದೆ. ವೈಮಾನಿಕ ದಾಳಿಯಲ್ಲಿ ಕ್ಷಿಪಣಿ ದಾಳಿ ನಡೆಸಲಾಗುತ್ತಿದೆ. ಖಾರ್ಕಿವ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರಿ ವಿನಾಶ ಸಂಭವಿಸಿದೆ. ಈ ಸಂದರ್ಭದಲ್ಲಿ, ಪೊಲೀಸ್ ಪ್ರಧಾನ ಕಚೇರಿ, ಮಿಲಿಟರಿ ಅಕಾಡೆಮಿ ಸೇರಿದಂತೆ ಹಲವು ಸಂಸ್ಥೆಗಳು ಧ್ವಂಸಗೊಂಡಿವೆ. 

Russia Ukraine war updates : ಉಕ್ರೇನ್‌ನ ಖಾರ್ಕಿವ್‌ನಲ್ಲಿ ಎತ್ತ ನೋಡಿದರೂ ವಿನಾಶ, ಮಿಲಿಟರಿ ಅಕಾಡೆಮಿ ಮತ್ತು ವಾಯುಪಡೆ ವಿಶ್ವವಿದ್ಯಾಲಯದ ಮೇಲೆ ದಾಳಿ

ಖಾರ್ಕಿವ್: ಉಕ್ರೇನ್‌ನ (Ukraine)ಹಲವು ನಗರಗಳಲ್ಲಿ ರಷ್ಯಾ (Russia) ಏಕಕಾಲದಲ್ಲಿ ದಾಳಿಯನ್ನು ತೀವ್ರಗೊಳಿಸಿದೆ. ಉಕ್ರೇನ್ ಮತ್ತು ರಷ್ಯಾ ನಡುವೆ ನಡೆಯುತ್ತಿರುವ ಯುದ್ಧದ ಏಳನೇ ದಿನ ಇಂದು. ಖಾರ್ಕಿವ್ (Kharkiv) ಮತ್ತು ಕೈವ್ (Kyiv) ಅನ್ನು ನಿರ್ದಿಷ್ಟವಾಗಿ ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುತ್ತಿದೆ. ಬಂಕರ್‌ಗೆ ತೆರಳುವಂತೆ ಸ್ಥಳೀಯರಿಗೆ ಸೂಚನೆ ನೀಡಲಾಗಿದೆ. ಖಾರ್ಕಿವ್‌ನಲ್ಲಿನ ವಿನಾಶದ ವೀಡಿಯೊಗಳು ಹೊರಬರುತ್ತಿವೆ. ಎರಡನೇ ದೊಡ್ಡ ನಗರವಾದ ಖಾರ್ಕಿವ್‌ನಲ್ಲಿ ರಷ್ಯಾದ ಪ್ಯಾರಾಟ್ರೂಪರ್‌ಗಳು ಬಂದಿಳಿದಿದ್ದಾರೆ ಎಂದು ಉಕ್ರೇನಿಯನ್ ಸೇನೆ ಹೇಳಿದೆ. ದಾಳಿಯನ್ನು ತೀವ್ರಗೊಳಿಸಿರುವ ರಷ್ಯಾದ ಸೈನಿಕರು ಪ್ಯಾರಾಚೂಟ್ ಮೂಲಕ ಖಾರ್ಕಿವ್ ಪ್ರವೇಶಿಸಿದ್ದಾರೆ. ಇತ್ತೀಚಿನ ದಾಳಿಯಲ್ಲಿ ಉಕ್ರೇನಿಯನ್ ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. 

ಖಾರ್ಕಿವ್ ಮೇಲೆ ಭಾರೀ ಶೆಲ್ ದಾಳಿ :

ಉಕ್ರೇನಿಯನ್ ಸೇನೆಯ ಪ್ರಕಾರ, ರಷ್ಯಾ ಪಡೆಗಳ ಶೆಲ್ ದಾಳಿ ತೀವ್ರಗೊಂಡಿದೆ. ಖಾರ್ಕಿವ್ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ವಾಯುದಾಳಿ ಸೈರನ್ ಮೊಳಗುತ್ತಿದ್ದಂತೆಯೇ ವೈಮಾನಿಕ ದಾಳಿ ಆರಂಭವಾಗಿದೆ ( ukraine Russia war  live updates). ಇತ್ತೀಚಿನ ದಾಳಿಯ ಸಂದರ್ಭದಲ್ಲಿ, ರಷ್ಯಾ ಖಾರ್ಕಿವ್‌ನಲ್ಲಿರುವ ಪೊಲೀಸ್ ಪ್ರಧಾನ ಕಚೇರಿ ಯ ಮೇಲೆ ದಾಳಿ ಮಾಡಿದೆ. ಮಾತ್ರವಲ್ಲ ಉಕ್ರೇನ್ ಮಿಲಿಟರಿ ಅಕಾಡೆಮಿಯ ಮೇಲೆ ಕೂಡಾ ಕ್ಷಿಪಣಿ ದಾಳಿ ನಡೆಸಿದೆ. ಖಾರ್ಕಿವ್‌ನಲ್ಲಿ ಕ್ಷಿಪಣಿ ದಾಳಿ ಮುಂದುವರಿದಿದೆ (Kharkiv Attack) . ಖಾರ್ಕಿವ್‌ನ ಏರ್ ಫೋರ್ಸ್ ವಿಶ್ವವಿದ್ಯಾಲಯವನ್ನೂ ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ. ಈ ದಾಳಿಯ ವೇಳೆ ತೈಲ ಟ್ಯಾಂಕರ್ ಸ್ಫೋಟಗೊಂಡಿದೆ. ಖಾರ್ಸನ್ ವಿಮಾನ ನಿಲ್ದಾಣದ ಬಳಿಯೂ ಭಾರೀ ಸ್ಫೋಟ ಸಂಭವಿಸಿದೆ.

ಇದನ್ನೂ ಓದಿ :  Russia-Ukraine ನಡುವೆ ಭಯಾನಕ ಯುದ್ಧದ ಸಂಕೇತ! ರಾಜಧಾನಿ ಕೀವ್ ನತ್ತ ಸಾಗುತ್ತಿದೆ 40 ಮೈಲಿ ಉದ್ದ ರಷ್ಯಾ ಬೆಂಗಾವಲು ಪಡೆ

ಮಾಧ್ಯಮ ವರದಿಗಳ ಪ್ರಕಾರ, ಅಧಿಕೃತ ಹೇಳಿಕೆಯ ಪ್ರಕಾರ, ರಷ್ಯಾದ ಪಡೆಗಳು ಪ್ರಾದೇಶಿಕ ಮಿಲಿಟರಿ ಆಸ್ಪತ್ರೆಯ ಮೇಲೆ ದಾಳಿ ನಡೆಸಿದೆ (Russia Ukraine conflict) . ಇತ್ತೀಚಿನ ದಿನಗಳಲ್ಲಿ ಉಕ್ರೇನ್‌ನಲ್ಲಿ ಕಂಡುಬರುವ ಹೆಚ್ಚಿನ ಹಿಂಸಾಚಾರದ ಕೇಂದ್ರಬಿಂದು ಖಾರ್ಕಿವ್ ಆಗಿದೆ. ಮಂಗಳವಾರ, ಕ್ಷಿಪಣಿಯೊಂದು  ಉಕ್ರೇನ್‌ ನಲ್ಲಿ ಅಪ್ಪಳಿಸಿದೆ. ಸ್ಥಳೀಯ ಕಾಲಮಾನ 08.00 ರ ಸುಮಾರಿಗೆ USಯುಕ್ರೇನ್ ನ  ಎರಡನೇ ಅತಿದೊಡ್ಡ ನಗರದಲ್ಲಿರುವ ಸ್ಥಳೀಯ ಸರ್ಕಾರದ ಪ್ರಧಾನ ಕಚೆರಿಯ ಮೇಲೆ ದಾಳಿ ನಡೆಸಿದೆ. ಇದಾದ ನಂತರ ಸುತ್ತಲಿನ ಪರಿಸರದಲ್ಲಿ ಎಲ್ಲಿ ನೋಡಿದರೂ ಬೆಂಕಿಯೇ ಕಾಣಿಸಿಕೊಂಡಿದೆ. 

ಇದನ್ನೂ ಓದಿ :  ರಷ್ಯಾದ ಕ್ಷಿಪಣಿ ದಾಳಿಗೆ ಹೊತ್ತಿ ಉರಿದ ಉಕ್ರೇನ್ ಸರ್ಕಾರದ ಮುಖ್ಯಕಚೇರಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More