Home> World
Advertisement

Russia-Ukraine Crisis: ಉಕ್ರೇನ್ ಗೆ 350 ಮಿಲಿಯನ್ ಡಾಲರ್ ನೆರವು ನೀಡಲು ಮುಂದಾದ ಅಮೇರಿಕಾ

ರಷ್ಯಾದ ಅಪ್ರಚೋದಿತ ಮತ್ತು ನ್ಯಾಯಸಮ್ಮತವಲ್ಲದ ಯುದ್ಧದಿಂದ ಉಕ್ರೇನ್ ದೇಶವನ್ನು ರಕ್ಷಿಸುವ ನಿಟ್ಟಿನಲ್ಲಿ ಈಗ ಅಮೆರಿಕಾದ ರಕ್ಷಣಾ ಇಲಾಖೆಯು ಉಕ್ರೇನ್‌ಗೆ ಹೆಚ್ಚುವರಿ 350 ಮಿಲಿಯನ್ ಡಾಲರ್ ಮೊತ್ತದ ತತಕ್ಷಣದ ಮಿಲಿಟರಿ ಸಹಾಯವನ್ನು ನೀಡುವುದಾಗಿ ಯುಎಸ್ ಸ್ಟೇಟ್ ಸೆಕ್ರೆಟರಿ ಆಂಟೋನಿ ಬ್ಲಿಂಕೆನ್ ಘೋಷಿಸಿದ್ದಾರೆ.

 Russia-Ukraine Crisis: ಉಕ್ರೇನ್ ಗೆ 350 ಮಿಲಿಯನ್ ಡಾಲರ್ ನೆರವು ನೀಡಲು ಮುಂದಾದ ಅಮೇರಿಕಾ

ನವದೆಹಲಿ: ರಷ್ಯಾದ ಅಪ್ರಚೋದಿತ ಮತ್ತು ನ್ಯಾಯಸಮ್ಮತವಲ್ಲದ ಯುದ್ಧದಿಂದ ಉಕ್ರೇನ್ ದೇಶವನ್ನು ರಕ್ಷಿಸುವ ನಿಟ್ಟಿನಲ್ಲಿ ಈಗ ಅಮೆರಿಕಾದ ರಕ್ಷಣಾ ಇಲಾಖೆಯು ಉಕ್ರೇನ್‌ಗೆ ಹೆಚ್ಚುವರಿ 350 ಮಿಲಿಯನ್ ಡಾಲರ್ ಮೊತ್ತದ ತತಕ್ಷಣದ ಮಿಲಿಟರಿ ಸಹಾಯವನ್ನು ನೀಡುವುದಾಗಿ ಯುಎಸ್ ಸ್ಟೇಟ್ ಸೆಕ್ರೆಟರಿ ಆಂಟೋನಿ ಬ್ಲಿಂಕೆನ್ ಘೋಷಿಸಿದ್ದಾರೆ.

ಇದನ್ನೂ ಓದಿ-Ukraine-Russia War: ಭಾರತಕ್ಕೆ ಧನ್ಯವಾದ ಹೇಳಿದ ರಷ್ಯಾ, ಕಾರಣ ಇಲ್ಲಿದೆ

ಇದೇ ವೇಳೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯ ರಾಷ್ಟ್ರವಾಗಿರುವ ರಷ್ಯಾ ಶನಿವಾರದಂದು ತನ್ನ ವೀಟೋ ಅಧಿಕಾರವನ್ನು ಬಳಸಿ ಉಕ್ರೇನ್ (Ukraine Russia War) ವಿರುದ್ಧದ ಆಕ್ರಮಣವನ್ನು ಖಂಡಿಸುವ ನಿರ್ಣಯವನ್ನು ನಿರ್ಬಂಧಿಸಲು ಯುಎಸ್ ವ್ಲಾಡಿಮಿರ್ ಪುಟಿನ್ ಮತ್ತು ಅವರ ಉನ್ನತ ಅಧಿಕಾರಿಗಳ ಮೇಲೆ ವೈಯಕ್ತಿಕ ನಿರ್ಬಂಧಗಳನ್ನು ವಿಧಿಸಿತು.

ಇದನ್ನೂ ಓದಿ: Worlds Most Powerful Militaries : ಜಗತ್ತಿನ ಅತೀ ಬಲಿಷ್ಠ ಮಿಲಿಟರಿ ಯಾವುದು? ಭಾರತ ಯಾವ ಸ್ಥಾನದಲ್ಲಿದೆ? ಇಲ್ಲಿದೆ ನೋಡಿ

ಏತನ್ಮಧ್ಯೆ, ರಷ್ಯಾ ಪ್ರಬಲ ಮಿತ್ರರಾಷ್ಟ್ರವಾಗಿರುವ ಭಾರತ, ಚೀನಾ ಮತ್ತು ಯುಎಇ ಈ ನಿರ್ಣಯದಿಂದ ದೂರವಿದ್ದು, ಹಿಂಸಾಚಾರವನ್ನು ತಕ್ಷಣವೇ ನಿಲ್ಲಿಸಲು ಮತ್ತು ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಕೋರಿದೆ.ಈಗ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ ಮತ್ತು ಚೀನಾ ದೇಶಗಳು ಮತದಾನದಿಂದ ದೂರ ಉಳಿದಿರುವ ಹಿನ್ನಲೆಯಲ್ಲಿ ಅಮೆರಿಕಾದ ನಿರ್ಣಯಕ್ಕೆ ತೀವ್ರ ಹಿನ್ನಡೆಯಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Read More