Home> World
Advertisement

Russia-Ukraine Conflict: Russia ಬಳಿ ಇರುವ ಮಹಾವಿನಾಶಕಾರಿ 5 ಶಸ್ತ್ರಾಸ್ತ್ರಗಳಿವು, ಇವುಗಳಿಗೆ US-NATO ಕೂಡ ಭಯಪಡುತ್ತವೆ

Russia-Ukraine Standoff - ಉಕ್ರೇನ್ ಮೇಲೆ ರಷ್ಯಾ (Russia-Ukraine Crisis) ದಾಳಿಗೆ ಕ್ಷಣಗಣನೆ ಆರಂಭಗೊಂಡಿದೆ ಎನ್ನಲಾಗಿದೆ. ಇಷ್ಟೆಲ್ಲಾ ಆದರೂ ಕೂಡ ಉಕ್ರೇನ್(Ukriane) ಅನ್ನು ರಕ್ಷಿಸುವ ಧೈರ್ಯವನ್ನು ಅಮೆರಿಕ (US) ಮತ್ತು ನ್ಯಾಟೋಪಡೆಗಳಿಂದ (NATO Forces) ಕೂಡಿ ಸಾಧ್ಯವಾಗುತ್ತಿಲ್ಲ. ಯಾವುದೇ ದೇಶದ ಹೆಸರನ್ನು ಕ್ಷಣಮಾತ್ರದಲ್ಲಿ ಅಳಿಸಿ ಹಾಕಬಲ್ಲ 5 ಮೆಗಾ ವಿಧ್ವಂಸಕ ಅಸ್ತ್ರಗಳು (Most Dangerous Weapons Of Russia) ರಷ್ಯಾ ಬಳಿ ಇರುವುದೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ.

Russia-Ukraine Conflict: Russia ಬಳಿ ಇರುವ ಮಹಾವಿನಾಶಕಾರಿ 5 ಶಸ್ತ್ರಾಸ್ತ್ರಗಳಿವು, ಇವುಗಳಿಗೆ  US-NATO ಕೂಡ ಭಯಪಡುತ್ತವೆ

ಕೀವ್, ಉಕ್ರೇನ್ : Most Dangerous Weapons Of Russia - ಉಕ್ರೇನ್ ಮೇಲೆ ರಷ್ಯಾ ದಾಳಿಗೆ ಕ್ಷಣಗಣನೆ  ಶೀಘ್ರದಲ್ಲಿಯೇ ಮುಗಿಯಲಿದೆ ಎನ್ನಲಾಗಿದೆ. ದಾಳಿಯನ್ನು ನಿಲ್ಲಿಸಲು NATO ಇದುವರೆಗೂ ರಷ್ಯಾಕ್ಕೆ ನೇರ ದಾಳಿಯ ಬೆದರಿಕೆ ಹಾಕುತ್ತಿಲ್ಲ. ವಾಸ್ತವದಲ್ಲಿ ಪುಟಿನ್ ಇರುವ ಐದು ವಿನಾಶಕಾರಿ ಅಸ್ತ್ರಗಳೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಮತ್ತೊಂದೆಡೆ, ಉಕ್ರೇನ್‌ ಗಾಗಿ ರಷ್ಯಾದ ಒಂದೇ ಒಂದು ಸ್ಫೋಟ ಸಾಕು ಎನ್ನಲಾಗುತ್ತಿದೆ. ಏಕೆಂದರೆ ರಷ್ಯಾದ ಬಳಿ ವಿಶ್ವದ ಅತಿದೊಡ್ಡ ಪರಮಾಣು ಬಾಂಬ್‌ ಇದೆ.

ರಷ್ಯಾದ ಮುತ್ತಿಗೆಗೆ ಹೆದರುತ್ತಿದೆ ಉಕ್ರೇನ್ (Russia-Ukraine Conflict Latest Update)

ಡೂಮ್ಸ್ಡೇ ದಿನದ ಮೊದಲು ಒಬ್ಬ ವ್ಯಕ್ತಿಯು ಏನು ಯೋಚಿಸುತ್ತಾನೆ? ಅವನ ರಾತ್ರಿಗಳು ಹೇಗೆ ಕಳೆಯುತ್ತವೆ? ನೀವು ಇದರ ಬಗ್ಗೆ ಅರ್ಥಮಾಡಿಕೊಳ್ಳಲು ಬಯಸಿದರೆ, ಉಕ್ರೇನ್ ಜನರನ್ನು ಕೇಳಿ. ಅವರ ಹೃದಯದ ಸ್ಥಿತಿಯನ್ನು ಅರ್ಥಮಾಡಿಕೊಳ್ಳಿ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಉಕ್ರೇನ್‌ಗೆ ಈ ವಿನಾಶದ ಕೋಷ್ಟಕವನ್ನು ತೋರಿಸಲು ಸಿದ್ಧತೆ ನಡೆಸಿದ್ದಾರೆ. ರಷ್ಯಾ ತನ್ನ ಹೆಚ್ಚಿನ ಸೈನ್ಯ, ಫಿರಂಗಿ ಮತ್ತು ವಿನಾಶಕಾರಿ ಶಸ್ತ್ರಾಸ್ತ್ರಗಳನ್ನು ಉಕ್ರೇನ್ ಗಡಿಯಲ್ಲಿ ನಿಯೋಜಿಸಿದೆ. ಯಾರೇ ಮುಂದೆ ಬಂದರೂ ಕೂಡ ಹೊಸಗಿ ಹಾಕಲಿದೆ ಎನ್ನುವುದನ್ನು ರಷ್ಯಾದ ಈ ಆಕ್ರಮಣಕಾರಿ ಸಿದ್ಧತೆಗಳು ಹೇಳುತ್ತಿವೆ.

ಉಕ್ರೇನ್ ಮುಂದೆ ಮುಂದೆ ಇರುವ ದೊಡ್ಡ ಭೀತಿ ಎಂದರೆ, ಈ ಅನಾಹುತವೆಂದರೆ ಅದರ ಮೇಲೆ ಎಲ್ಲಿಂದ ಕುಸಿಯಲಿದೆ ಎಂಬುದು ಅದಕ್ಕೆ ತಿಳಿಯುತ್ತಿಲ್ಲ. ರಷ್ಯಾದ ಮಾರಣಾಂತಿಕ ಯುದ್ಧನೌಕೆಗಳು ಸಮುದ್ರದಲ್ಲಿ ಬೆಂಕಿ ಉಗುಳುತ್ತಿವೆ. ರಷ್ಯಾದ ಶಕ್ತಿಯ ಮುಂದೆ ಉಕ್ರೇನ್ ಶೂನ್ಯವಾಗಿರುವ ಪ್ರದೇಶ ಇದು. ಇದೇ ವೇಳೆ, ಬೆಲಾರಸ್ ಕಡೆಯಿಂದ ಅದರ ಫಿರಂಗಿ ಮತ್ತು ಟ್ಯಾಂಕ್ ನ ಬೆಂಕಿಯ ಚೆಂಡುಗಳು ಉಕ್ರೇನ್ ಸೈನ್ಯ ಮತ್ತು ಜನರ ಮೇಲೆ ವಿಪತ್ತಿನಂತೆ ಬೀಳಲು ಸಿದ್ಧಗೊಂಡಿವೆ. ರಷ್ಯಾದ ವಾಯುಪಡೆಯ ಸುಖೋಯ್ 35 ನಂತಹ ವಿಮಾನಗಳು ಸಹ ಕ್ಷಿಪಣಿಗಳೊಂದಿಗೆ ಯಮದೂತರಂತೆ ಉಕ್ರೇನ್ ಮೇಲೆ ಕುಸಿದು ಬೀಳಲಿವೆ.

ಅಮೆರಿಕ ಮತ್ತು ನ್ಯಾಟೋ  ಪಡೆಗಳೂ ಕೂಡ ಧೈರ್ಯ ತೋರುತ್ತಿಲ್ಲ
ಇಷ್ಟೆಲ್ಲಾ ಆಗುತ್ತಿರುವುದನ್ನು ನೋಡುತ್ತಿದ್ದರೂ ಅಮೆರಿಕ ಮತ್ತು ನ್ಯಾಟೋ ಮಿತ್ರರಾಷ್ಟ್ರಗಳು ರಷ್ಯಾದಿಂದ ಬಹಿರಂಗವಾಗಿ ಬರುತ್ತಿರುವ ಧೈರ್ಯವನ್ನು ಎದುರಿಸುವ ಧೈರ್ಯ ತೋರುತ್ತಿಲ್ಲ. ಇದಕ್ಕೆ ಕಾರಣವೇನೆಂದರೆ, ರಷ್ಯಾ ಬಳಿ ಇರುವ  ಜಗತ್ತಿನಲ್ಲಿ 5 ಅಪಾಯಕಾರಿ ಶಸ್ತ್ರಾಸ್ತ್ರಗಳು. ತನ್ಮೂಲಕ ಅದು ಯಾವುದೇ ಶತ್ರುವನ್ನು ಸದೆಬಡಿಯುವ ಧೈರ್ಯ ಹೊಂದಿದೆ. ಈ ಆಯುಧಗಳ ನಿಯೋಜನೆಯು ಶತ್ರುಗಳಲ್ಲಿ ಭಯವನ್ನು ಹೆಚ್ಚಿಸುತ್ತದೆ.

ರಷ್ಯಾ ವಿಶ್ವದ ಅತಿದೊಡ್ಡ ಪರಮಾಣು ಬಾಂಬ್ ಅನ್ನು ಹೊಂದಿದೆ. ಇದನ್ನು 6 ದಶಕಗಳ ಹಿಂದೆಯೇ ಪರೀಕ್ಷೆಸಲಾಗಿದೆ. ರಷ್ಯಾ ಉಕ್ರೇನ್ ಮೇಲೆ ತನ್ನ ಅತಿದೊಡ್ಡ ಪರಮಾಣು ಬಾಂಬ್ ಸ್ಫೋಟಿಸಿದರೆ, ಸ್ಫೋಟದ ನಂತರ ಉಕ್ರೇನ್‌ನ ಆರು ಮಿಲಿಯನ್ ಜನರು ಒಂದೇ ಕ್ಷಣಕ್ಕೆ ಧರೆಗುರುಳಲಿದ್ದಾರೆ.

ರಷ್ಯಾ ವಿಶ್ವದ ಅತಿದೊಡ್ಡ ಪರಮಾಣು ಬಾಂಬ್ ಅನ್ನು ಹೊಂದಿದೆ
1961 ರಲ್ಲಿ, ಸೋವಿಯತ್ ಒಕ್ಕೂಟ, ಅಂದರೆ ಇಂದಿನ ರಷ್ಯಾ, ವಿಶ್ವದ ಅತಿದೊಡ್ಡ, ಶಕ್ತಿಯುತ ಮತ್ತು ಅಪಾಯಕಾರಿ ಹೈಡ್ರೋಜನ್ ಬಾಂಬ್ ಅನ್ನು ಪರಿಕ್ಷಿಸಿತ್ತು. ಆ ಸಮಯದಲ್ಲಿ ಈ ಸ್ಫೋಟವು ಇಡೀ ಜಗತ್ತಿಗೆಯೇ ಒಂದು ರಹಸ್ಯವಾಗಿತ್ತು. ಈ ಸ್ಫೋಟ ನಡೆಸಿದ ರಷ್ಯಾವನ್ನು ಹೊರತುಪಡಿಸಿ ವಿಶ್ವದ ಯಾವುದೇ ದೇಶಕ್ಕೆ ಆ ಕುರಿತು ಮಾಹಿತಿ ಇರಲಿಲ್ಲ.

ಜಪಾನ್‌ನ ಹಿರೋಶಿಮಾದಲ್ಲಿ  ಯುಎಸ್ ಎಸೆದಿದ್ದ ಅಣುಬಾಂಬ್ ಲಿಟಲ್ ಬಾಯ್ ಗಿಂತ ರಷ್ಯಾ ಬಳಿ ಇರುವ ಬಾಂಬ್ 3333 ಪಟ್ಟು ಹೆಚ್ಚು ಶಕ್ತಿಶಾಲಿಯಾಗಿದೆ ಎಂಬುದರಿಂದ ನೀವು ರಷ್ಯಾ ಶಕ್ತಿಯನ್ನು ಅಂದಾಜು ಮಾಡಬಹುದು. ಅಂದರೆ, ಹಿರೋಷಿಮಾದಲ್ಲಿ ಸಂಭವಿಸಿದ ವಿನಾಶಕ್ಕಿಂತ ಇದರ ವಿನಾಶವು 3333 ಪಟ್ಟು ಹೆಚ್ಚು ಎಂದರ್ಥ.

60 ಲಕ್ಷ ಜನರು ತಕ್ಷಣವೇ ಹತರಾಗಲಿದ್ದಾರೆ
ಈ ಬಾಂಬ್ ಎಷ್ಟು ಅಪಾಯಕಾರಿ ಎಂದರೆ, ಈ ಬಾಂಬ್ ಎರಡನೇ ಮಹಾಯುದ್ಧದಲ್ಲಿ ಬಳಸಲಾದ ಸಂಪೂರ್ಣ ಮದ್ದುಗುಂಡುಗಳಿಗಿಂತ 10 ಪಟ್ಟು ಹೆಚ್ಚು ಶಕ್ತಿಶಾಲಿಯಾಗಿದೆ ಎಂಬ ಅಂಶದಿಂದ ನೀವು ಅಳೆಯಬಹುದು. ಪರಮಾಣು ಬಾಂಬ್ ಮತ್ತು ಹೈಡ್ರೋಜನ್ ಬಾಂಬ್ ತಂತ್ರಜ್ಞಾನವನ್ನು ಮಿಶ್ರಣ ಮಾಡಿ ಈ ಬಾಂಬ್ ಅನ್ನು ಸಿದ್ಧಪಡಿಸಲಾಗಿದೆ. ಈ ಬಾಂಬ್ ಅನ್ನು ಜಾರ್ ಬಾಂಬ್ ಎಂದೂ ಕೂಡ ಕರೆಯುತ್ತಾರೆ. ಈ ಬಾಂಬ್ ಪೂರ್ಣ ಶಕ್ತಿಯಿಂದ ಸ್ಫೋಟಿಸಿದರೆ, ಏನೂ ಉಳಿಯುವುದಿಲ್ಲ. ಈ ಪರಮಾಣು ಬಾಂಬ್‌ನ ವಿನಾಶಕಾರಿ ಸಾಮರ್ಥ್ಯದ ದೃಷ್ಟಿಯಿಂದ, ಇದನ್ನು ಭೂಮಿ ಅಂತ್ಯದ ಆಯುಧ ಎಂದು ಕರೆಯಲಾಗುತ್ತದೆ.

ರಷ್ಯಾ ತನ್ನ ಶಕ್ತಿಯನ್ನು ತೋರಿಸಲು ಮಾತ್ರ ಈ ಬಾಂಬ್ ಅನ್ನು ಪರೀಕ್ಷಿಸಿದೆ. ಸ್ವಲ್ಪ ಯೋಚಿಸಿ, ಅಮೆರಿಕವು ಜಪಾನ್‌ನೊಂದಿಗೆ ಮಾಡಿದ ಕೆಲಸವನ್ನು ರಷ್ಯಾವು ಉಕ್ರೇನ್ ಅಥವಾ ಯಾವುದೇ ನ್ಯಾಟೋ ದೇಶದೊಂದಿಗೆ ಮಾಡಿದರೆ ಏನಾಗುತ್ತದೆ. ಅಂತಹ ಶಸ್ತ್ರಾಸ್ತ್ರಗಳು ರಷ್ಯಾದ ಶತ್ರುಗಳಲ್ಲಿ ಭಯವನ್ನು ಸೃಷ್ಟಿಸುತ್ತಿವೆ ಮತ್ತು ನ್ಯಾಟೋದಲ್ಲಿ ತೊಡಗಿರುವ ಮಹಾಶಕ್ತಿ ರಾಷ್ಟ್ರಗಳು ಸಹ ನೇರವಾಗಿ ರಷ್ಯಾದೊಂದಿಗೆ ಸ್ಪರ್ಧಿಸಲು ಬಯಸುವುದಿಲ್ಲ.

ಪುಟಿನ್ ಅವರ 5 ವಿನಾಶಕಾರಿ ಶಸ್ತ್ರಾಸ್ತ್ರಗಳು
ರಷ್ಯಾದ ಅಂತಹ ಒಂದು ಸೂಪರ್-ವಿನಾಶಕಾರಿ ಆಯುಧವೆಂದರೆ ಕಿಂಜಾಲ್ ಹೈಪರ್ಸಾನಿಕ್ ಕ್ಷಿಪಣಿಗಳು. ಈ ಹೈಪರ್ಸಾನಿಕ್ ಪರಮಾಣು ಕ್ಷಿಪಣಿಗಳನ್ನು ರಷ್ಯಾದ MiG 31 ಯುದ್ಧ ವಿಮಾನಗಳಿಗೆ  ಅಳವಡಿಸಲಾಗಿದೆ. ಈಗ ರಷ್ಯಾ ಈ ವಿಮಾನಗಳನ್ನು ಬಾಲ್ಟಿಕ್ ಸಮುದ್ರದ ಬಳಿ ಇರುವ ತನ್ನ ಕಲಿನಿನ್ಗ್ರಾಡ್ ನಗರದಲ್ಲಿ ನಿಯೋಜಿಸಿದೆ. ಕಲಿನಿನ್‌ಗ್ರಾಡ್‌ನಲ್ಲಿ ಕಿಂಜಲ್ ಕ್ಷಿಪಣಿಗಳನ್ನು ಹೊಂದಿದ MiG-31 ವಿಮಾನವನ್ನು ನಿಯೋಜಿಸುವುದು ಉಕ್ರೇನ್ ಮತ್ತು NATO ದೇಶಗಳಿಗೆ ಅತ್ಯಂತ ಅಪಾಯಕಾರಿ ಸಂಗತಿ ಎಂದೇ ವಿಶ್ಲೇಷಿಸಲಾಗುತ್ತಿದೆ.

ಕಿಂಜಾಲ್ ಕ್ಷಿಪಣಿಗಳು ಎಷ್ಟು ಶಕ್ತಿಶಾಲಿ?
- ಧ್ವನಿ ವೇಗಕ್ಕಿಂತ 10 ಪಟ್ಟು ವೇಗ ಹೊದಿವೆ
- ಪರಮಾಣು ಬಾಂಬ್‌ಗಳನ್ನು ಬೀಳಿಸುವ ಸಾಮರ್ಥ್ಯ ಹೊದಿವೆ
- 2000 ಕಿಮೀ ವ್ಯಾಪ್ತಿ ಹೊಂದಿದೆ 
- 500 ಕಿಲೋಟನ್ ಪರಮಾಣು ಸಿಡಿತಲೆ ಹೊತ್ತೊಯ್ಯುವ ಸಾಮರ್ಥ್ಯ ಹೊಂದಿವೆ.
- ಸೆಕೆಂಡಿಗೆ 3 ಕಿಮೀ ವೇಗದಲ್ಲಿ ದಾಳಿ ನಡೆಸುತ್ತವೆ
- ಆಧುನಿಕ ವಾಯು ರಕ್ಷಣಾ ವ್ಯವಸ್ಥೆಗಳನ್ನೂ ಕೂಡ ವಿಫಲಗೊಳಿಸುತ್ತವೆ
- ಅಮೇರಿಕಾ ನ್ಯಾಟೋಗೆ ಬಗ್ಗುವುದಿಲ್ಲ

ರಷ್ಯಾದ ಕ್ಷಿಪಣಿಗಳು ಪಾಶ್ಚಿಮಾತ್ಯ ದೇಶಗಳನ್ನು ನಾಶಮಾಡುತ್ತವೆ
ಕಿಂಜಲ್ ಕ್ಷಿಪಣಿಯನ್ನು ಕಲಿನಿನ್‌ಗ್ರಾಡ್‌ನಿಂದ ಉಡಾಯಿಸಿದರೆ, ಅದು ಪಶ್ಚಿಮ ಯುರೋಪಿಯನ್ ರಾಷ್ಟ್ರಗಳ ಹೆಚ್ಚಿನ ರಾಜಧಾನಿಗಳನ್ನು ಮತ್ತು ಟರ್ಕಿಯ ರಾಜಧಾನಿ ಅಂಕಾರಾವನ್ನು ನಾಶಪಡಿಸುವ ಶಕ್ತಿಯನ್ನು ಹೊಂದಿದೆ. ಅಷ್ಟ ಅಲ್ಲ, ಕಿಂಜಾಲ್ ನ ನ್ಯಾಟೋ ದೇಶಗಳ ಮೇಲೆ ದಾಳಿ ಮಾಡಲು ಕೇವಲ 7 ರಿಂದ 10 ನಿಮಿಷಗಳು ಬೇಕಾಗುತ್ತವೆ.

ಪುಟಿನ್‌ನ ಈ ಸೂಪರ್ ವಿನಾಶಕಾರಿ ಅಸ್ತ್ರಗಳು ಏಕೈಕ ಶಕ್ತಿಯಾಗಿದ್ದು, ಇದರಿಂದಾಗಿ ವಿಶ್ವದ ಮಹಾಶಕ್ತಿಗಳು ಉಕ್ರೇನ್ ಮೇಲೆ ದಾಳಿ ಮಾಡಲು ಸಿದ್ಧವಾಗಿರುವ ರಷ್ಯಾದ ಮುಂದೆ ನಿಸ್ಸಹಾಯಕವಾಗಿವೆ.

ರಷ್ಯಾದ 5 ಅತ್ಯಂತ ಅಪಾಯಕಾರಿ ಶಸ್ತ್ರಾಸ್ತ್ರಗಳು
>> ಜೋರ್ ಬಾಂಬ್ ಅಥವಾ ತ್ಸಾರ್ ಬಾಂಬ್ ವಿಶ್ವದ ಅತಿದೊಡ್ಡ ಪರಮಾಣು ಬಾಂಬ್ ಆಗಿದೆ. ಇದು ಸ್ಫೋಟಗೊಂಡ ತಕ್ಷಣ 60 ಲಕ್ಷ ಜನರು ತಕ್ಷಣ ಸಾಯುತ್ತಾರೆ ಮತ್ತು ಲಕ್ಷಾಂತರ ಜನರು ಚರ್ಮ ಮತ್ತು ಉಸಿರಾಟದ ಕಾಯಿಲೆಗಳಿಗೆ ಬಲಿಯಾಗುತ್ತಾರೆ.

>> ರಷ್ಯಾದ ಎರಡನೇ ವಿಧ್ವಂಸಕ ಹೈಪರ್ಸಾನಿಕ್ ಪರಮಾಣು ಕ್ಷಿಪಣಿ ಕಿಂಜಾಲ್ ಆಗಿದೆ, ಇದು ಅಮೇರಿಕಾ ಮತ್ತು ನ್ಯಾಟೋ ಬಳಿ ಇದಕ್ಕೆ ಯಾವುದೇ ಉತ್ತರವಿಲ್ಲ.

>> ರಷ್ಯಾದ ಮೂರನೇ ವಿಧ್ವಂಸಕ ಆಯುಧವೆಂದರೆ 2S7 ಪಿಯಾನ್ ಫಿರಂಗಿ, ಇದನ್ನು ಸೋವಿಯತ್ ಎಟಮಿಟ್ ಫಿರಂಗಿ ಎಂದೂ ಕರೆಯುತ್ತಾರೆ. ಇದು ಅಲ್ಪಾವಧಿಯ ಪರಮಾಣು ದಾಳಿಗೆ ಸಮರ್ಥವಾಗಿದೆ. ಈ ಪರಮಾಣುಗಳು 203 ಎಂಎಂ ಪರಮಾಣು ಬಾಂಬ್‌ನಿಂದ ದಾಳಿ ಮಾಡುತ್ತಾರೆ. ಇದರಿಂದ 37 ಕಿ.ಮೀ. ದಾಳಿ ಮಾಡಲು ಸಾಧ್ಯವಾಗುತ್ತದೆ.

ಇದನ್ನೂ ಓದಿ-Russia-Ukraine Crisis: ರಷ್ಯಾ ದಾಳಿಯ ಭೀತಿ, ಉಕ್ರೇನ್ ನಲ್ಲಿ AK-47 ಹಿಡಿದ 79ರ ಇಳಿವಯಸ್ಸಿನ ಅಜ್ಜಿ

ರಷ್ಯಾದ ನಾಲ್ಕನೇ ವಿನಾಶಕಾರಿ ಆಯುಧವೆಂದರೆ ಬೆಲ್ಗೊರೊಡ್ ನ್ಯೂಕ್ಲಿಯರ್ ಜಲಾಂತರ್ಗಾಮಿ, ಇದು ವಿಶ್ವದ ಅತಿದೊಡ್ಡ ಜಲಾಂತರ್ಗಾಮಿಯಾಗಿದೆ. ಈ ಜಲಾಂತರ್ಗಾಮಿ ನೌಕೆಯು ಪೋಸಿಡಾನ್ ಟಾರ್ಪಿಡೊವನ್ನು ಹೊಂದಿದೆ, ಇದು ರೇಡಿಯೊ ಸಕ್ರಿಯ ಸುನಾಮಿಯನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಜಲಾಂತರ್ಗಾಮಿ ನೌಕೆಯ ಉದ್ದ 604 ಅಡಿ ಮತ್ತು ತೂಕ 14 ಸಾವಿರ 700 ಟನ್. ಈ ರಷ್ಯಾದ ಜಲಾಂತರ್ಗಾಮಿ ನೌಕೆಯು ಯಾವುದೇ ಯುದ್ಧದ ನಕ್ಷೆಯನ್ನು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದೆ.

ಇದನ್ನೂ ಓದಿ-Russia-Ukraine Crisis: 'ನಾಳೆ ಬೆಳಗ್ಗೆ 5.30ಕ್ಕೆ ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಲಿದೆ'!

ರಷ್ಯಾದ ಐದನೇ ವಿಧ್ವಂಸಕ ಅಸ್ತ್ರ ಎಂದರೆ ಅದುವೇ T-14 ಅರ್ಮಾಟಾ ಟ್ಯಾಂಕ್ ಆಗಿದೆ, ಇದು ವಿಶ್ವದ ಅತ್ಯಂತ ಅಪಾಯಕಾರಿ ಟ್ಯಾಂಕ್ ಆಗಿದೆ. ಇದು ರಿಮೋಟ್ ಕಂಟ್ರೋಲ್‌ನಿಂದ ಕಾರ್ಯನಿರ್ವಹಿಸುತ್ತದೆ ಮತ್ತು ಸಿಬ್ಬಂದಿ ಸದಸ್ಯರಿಲ್ಲದೆ ಗುರಿಯನ್ನು ನಿಖರವಾಗಿ ಹೊಡೆಯಬಹುದು. ಅರ್ಮಾಟಾ ಟ್ಯಾಂಕ್ ಒಂದು ನಿಮಿಷದಲ್ಲಿ 10 ರಿಂದ 12 ಸುತ್ತುಗಳನ್ನು ಹಾರಿಸಬಹುದು. ಅರ್ಮಾಟಾ ಟ್ಯಾಂಕ್‌ಗಳು ವಿಮಾನ ವಿರೋಧಿ ಕ್ಷಿಪಣಿಗಳನ್ನು ಸಹ ಹೊಂದಿವೆ. ಇದನ್ನು ಹೆಲಿಕಾಪ್ಟರ್‌ಗಳು ಮತ್ತು ಸಣ್ಣ ಡ್ರೋನ್‌ಗಳಂತಹ ಕಡಿಮೆ ಹಾರುವ ವಸ್ತುಗಳ ಯುಗವೆಂದು ಪರಿಗಣಿಸಲಾಗಿದೆ.

ಇದನ್ನೂ ಓದಿ-ಭಾರತೀಯ ವಿದ್ಯಾರ್ಥಿಗಳಿಗೆ ಸ್ವದೇಶಕ್ಕೆ ಮರಳುವಂತೆ ಸೂಚಿಸಿ ಅಡ್ವೈಸರಿ ಜಾರಿಗೊಳಿಸಿದ ದೂತಾವಾಸ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More