Home> World
Advertisement

Corona vaccine: ಶಾಲೆ ತೆರೆಯುವ ಮೊದಲು ಎಲ್ಲಾ ಮಕ್ಕಳಿಗೂ ಲಸಿಕೆ ಹಾಕಲು ತಯಾರಿ

Corona Vaccine: ಕೆನಡಾದ ಆರೋಗ್ಯ ನಿಯಂತ್ರಕವು 12 ರಿಂದ 16 ವರ್ಷ ವಯಸ್ಸಿನವರಿಗೆ ಫಿಜರ್‌ನ ಕೋವಿಡ್ -19 ಲಸಿಕೆಯನ್ನು ಅನುಮೋದಿಸಲು ಸಿದ್ಧತೆ ನಡೆಸಿದೆ.
 

Corona vaccine: ಶಾಲೆ ತೆರೆಯುವ ಮೊದಲು ಎಲ್ಲಾ ಮಕ್ಕಳಿಗೂ ಲಸಿಕೆ ಹಾಕಲು ತಯಾರಿ

ಟೊರೊಂಟೊ: ಭಾರತದಲ್ಲಿ, ಮೂರನೇ ಹಂತದ ಲಸಿಕೆ ಅಭಿಯಾನದಡಿ ಮೇ 1ರಿಂದ 18 ವರ್ಷ ಮೇಲ್ಪಟ್ಟವರಿಗೆ ಕರೋನಾ ಲಸಿಕೆ ನೀಡಲಾಗುತ್ತಿದೆ. ಪ್ರಸ್ತುತ ಕಿರಿಯ ಹದಿಹರೆಯದವರಿಗೆ ಯಾವುದೇ ಲಸಿಕೆ ಇಲ್ಲ. ಆದರೆ ಕೆನಡಾದಲ್ಲಿ, ಮಕ್ಕಳಿಗಾಗಿ ಕೂಡ ಲಸಿಕೆ ತಯಾರಿಕೆಯನ್ನು ಮಾಡಲಾಗುತ್ತಿದೆ. ಮುಂದಿನ ಶಾಲಾ ಅಧಿವೇಶನ ಪ್ರಾರಂಭವಾಗುವ ಮೊದಲೇ ಮಕ್ಕಳಿಗೆ ಕರೋನಾ ಲಸಿಕೆ ನೀಡಲಾಗುವುದು ಎಂದು ಹೇಳಲಾಗಿದೆ.

12 ರಿಂದ 16 ವರ್ಷದವರಿಗೆ ಲಸಿಕೆ:

ವಾಸ್ತವವಾಗಿ, ಕೆನಡಾದ ಆರೋಗ್ಯ ನಿಯಂತ್ರಕವು 12 ರಿಂದ 16 ವರ್ಷ ವಯಸ್ಸಿನವರಿಗೆ ಫಿಜರ್‌ನ (Pfizer) ಕೋವಿಡ್ -19 ಲಸಿಕೆಯನ್ನು ಅನುಮೋದಿಸಲು ಸಿದ್ಧತೆ ನಡೆಸಿದೆ. ಮುಂಬರುವ ಪ್ರಕಟಣೆಗೆ ಮುಂಚಿತವಾಗಿ ಅದರ ಬಗ್ಗೆ ಮಾತನಾಡಲು ಅಧಿಕಾರವಿಲ್ಲದ ಕಾರಣ ಅಧಿಕಾರಿಯೊಬ್ಬರು ಅನಾಮಧೇಯತೆಯ ಸ್ಥಿತಿಯಲ್ಲಿ ಈ ಮಾಹಿತಿಯನ್ನು ನೀಡಿದರು. ಯುಎಸ್ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ಮುಂದಿನ ವಾರ ಈ ವಯಸ್ಸಿನ ಹದಿಹರೆಯದವರಿಗೆ ಫಿಜರ್ ಲಸಿಕೆಯನ್ನು ಅಧಿಕೃತಗೊಳಿಸುವ ನಿರೀಕ್ಷೆಯಿದೆ.

ಇದನ್ನೂ ಓದಿ- Lockdown In India: ಕರೋನಾ ಸೋಂಕಿನ ಸರಪಳಿ ಮುರಿಯಲು ಕಟ್ಟುನಿಟ್ಟಾದ ಲಾಕ್‌ಡೌನ್ ಅಗತ್ಯ- ಕೇಂದ್ರಕ್ಕೆ ಕೋವಿಡ್ ಟಾಸ್ಕ್ ಫೋರ್ಸ್ ಪತ್ರ

ಶಾಲೆ ಆರಂಭವಾಗುವುದರೊಳಗೆ ಲಸಿಕೆ ನೀಡಲು ತಯಾರಿ:
ಮುಂದಿನ ಶಾಲಾ ಅಧಿವೇಶನ ಪ್ರಾರಂಭವಾಗುವ ಮೊದಲು ಹದಿಹರೆಯದವರಿಗೆ ಇಲ್ಲಿ ಲಸಿಕೆ (Corona Vaccine) ಹಾಕಬಹುದು. ಕಂಪನಿಯು ಈ ಹಿಂದೆ ಲಸಿಕೆ ಪ್ರಯೋಗದ ಸಮಯದಲ್ಲಿ ನಮ್ಮ ಕಂಪನಿಯು ಚಿಕ್ಕ ಮಕ್ಕಳ ರಕ್ಷಣೆಗೂ ಒಟ್ಟು ನೀಡುತ್ತದೆ ಎಂದು ಹೇಳಿತ್ತು. 

ಇದನ್ನೂ ಓದಿ- Medicine For Covid-19 Treatment: ಕೊರೊನಾ ಚಿಕಿತ್ಸೆಗಾಗಿ Natco Pharma ಕಂಪನಿಯ Baricitinib ಮಾತ್ರೆಯ ತುರ್ತು ಬಳಕೆಗೆ ಅನುಮತಿ

ಲಸಿಕೆ ಪಡೆದ ಮಕ್ಕಳು, ಕರೋನಾದಿಂದ ಸುರಕ್ಷಿತ:
ಫಿಜರ್ ಮಾರ್ಚ್ ಅಂತ್ಯದಲ್ಲಿ 12 ರಿಂದ 15 ವರ್ಷಗಳ ಯುಎಸ್ನ 2,260 ಸ್ವಯಂಸೇವಕರ ಮೇಲೆ ನಡೆಸಿದ ಸಂಶೋಧನೆಯ ಪ್ರಾಥಮಿಕ ಫಲಿತಾಂಶಗಳನ್ನು ಬಿಡುಗಡೆ ಮಾಡಿದೆ. ಇದರಿಂದ, ಲಸಿಕೆ ತೆಗೆದುಕೊಂಡ ಯಾವುದೇ ಹದಿಹರೆಯದವರಲ್ಲಿ ಕೋವಿಡ್ -19 ಪ್ರಕರಣಗಳು ಕಂಡುಬಂದಿಲ್ಲ ಎಂದು ತಿಳಿದುಬಂದಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More