Home> World
Advertisement

ವಿಶ್ವಸಂಸ್ಥೆಯಲ್ಲಿ ಪಾಕ್, ತವಾಂಗ್‌ನಲ್ಲಿ ಚೀನಾ… ಶತ್ರುಗಳನ್ನು ಸದೆಬಡಿದು ಜಗತ್ತಿಗೆ ತನ್ನ ಶಕ್ತಿ ತೋರಿಸಿದ ಭಾರತ!

ಭಾರತವನ್ನು ಕೆಣಕಿದರೆ ಪರಿಣಾಮ ಏನಾಗುತ್ತದೆ ಎಂಬುದು ಇದೀಗ ಚೀನಾ ಮತ್ತು ಪಾಕಿಸ್ತಾನಕ್ಕೆ ಅರ್ಥವಾಗಿದೆ. ಈ ಎರಡೂ ದೇಶಗಳು ಭಾರತದ ವಿರುದ್ಧ ಹೊಂಚು ಹಾಕಿ ಹಗೆತನ ಸಾಧಿಸಲು ಅವಕಾಶಗಳನ್ನು ಹುಡುಕುತ್ತಲೇ ಇರುತ್ತವೆ. ಆದರೆ ಭಾರತ ತಕ್ಕ ಉತ್ತರ ನೀಡುವ ಮೂಲಕ ತಿರುಗೇಟು ನೀಡಿದೆ.

ವಿಶ್ವಸಂಸ್ಥೆಯಲ್ಲಿ ಪಾಕ್, ತವಾಂಗ್‌ನಲ್ಲಿ ಚೀನಾ… ಶತ್ರುಗಳನ್ನು ಸದೆಬಡಿದು  ಜಗತ್ತಿಗೆ ತನ್ನ ಶಕ್ತಿ ತೋರಿಸಿದ ಭಾರತ!

ನವದೆಹಲಿ: ಭಾರತವನ್ನು ಕೆಣಕಿದರೆ ಪರಿಣಾಮ ಏನಾಗುತ್ತೆ ಅನ್ನೋದಕ್ಕೆ ಪಾಕಿಸ್ತಾನ ಮತ್ತು ಚೀನಾಗೆ ಉತ್ತರ ಸಿಕ್ಕಿದೆ. ಎರಡೂ ದೇಶಗಳು ಭಾರತದ ವಿರುದ್ಧ ಹೊಂಚು ಹಾಕಿ ಭಾರತದ ವಿರುದ್ಧ ಕ್ಯಾತೆ ತೆಗೆಯಲು ಅವಕಾಶಗಳನ್ನು ಹುಡುಕುತ್ತಲೇ ಇರುತ್ತವೆ. ಪಾಕಿಸ್ತಾನ ಮತ್ತು ಚೀನಾದ ಹೇಡಿತನ ಈಗ ಎಲ್ಲರಿಗೂ ತಿಳಿದಿದೆ. ಇತ್ತೀಚಿನ ದಿನಗಳಲ್ಲಿ ಭಾರತ ಎರಡೂ ದೇಶಗಳ ಷಡ್ಯಂತ್ರಗಳನ್ನು ಸಮರ್ಥವಾಗಿ ವಿಫಲಗೊಳಿಸಿದೆ.

ಅರುಣಾಚಲ ಪ್ರದೇಶದ ತವಾಂಗ್‌ನ ನೈಜ ನಿಯಂತ್ರಣ ರೇಖೆಯಲ್ಲಿ (LAC)   ಭಾರತ ಚೀನಾವನ್ನು ಸೋಲಿಸಿದೆ. ಇನ್ನೊಂದೆಡೆ ವಿಶ್ವಸಂಸ್ಥೆಯಲ್ಲಿ ಭಾರತ ಪಾಕಿಸ್ತಾನದ ವಾಸ್ತವವನ್ನು ಹೇಳುವ ಮೂಲಕ ವಿಶ್ವದ ಕಣ್ಣು ತೆರೆಸಿದೆ. ಹೀಗಾಗಿ ಭಾರತದ ವಿರುದ್ಧ ಕತ್ತಿಮಸೆಯಲು ಚೀನಾ ಮತ್ತು ಪಾಕಿಸ್ತಾನ ಒಟ್ಟಾಗಿವೆ. ಪ್ರತಿನಿತ್ಯ ಸುಳ್ಳು ಆರೋಪಗಳನ್ನು ಮಾಡಿ ಭಾರತದ ವಿರುದ್ಧ ದ್ವೇಷ ಕಾರುತ್ತಿವೆ.  

ತವಾಂಗ್‌ನಲ್ಲಿ ಚೀನಾಕ್ಕೆ ಕಪಾಳಮೋಕ್ಷ!

ತವಾಂಗ್‌ನಲ್ಲಿ ಚೀನಾ ಸೈನಿಕರ ಹೇಡಿತನದ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂಸತ್ತಿಗೆ ತಿಳಿಸಿದ್ದಾರೆ. ಅರುಣಾಚಲ ಪ್ರದೇಶದ ನೈಜ ನಿಯಂತ್ರಣ ರೇಖೆಯಲ್ಲಿ (LAC) ಯಥಾಸ್ಥಿತಿಯನ್ನು ಬದಲಾಯಿಸುವ ಚೀನಾದ ಪ್ರಯತ್ನವನ್ನು ಭಾರತೀಯ ಸೇನೆಯು ಬಲವಾಗಿ ವಿರೋಧಿಸಿತು. ಒಳನುಸುಳುವಿಕೆ ಯತ್ನದಲ್ಲಿ ತೊಡಗಿದ್ದ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯ ಸೈನಿಕರನ್ನು ಭಾರತೀಯ ಸೈನಿಕರು ಹಿಂದಕ್ಕೆ ತಳ್ಳಿದರು. ಚೀನೀಯರ ಆಕ್ರಮಣವನ್ನು ಭಾರತೀಯ ಸೈನಿಕರು ಸಮರ್ಥವಾಗಿ ಎದುರಿಸಿದ್ದಾರೆಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಉಕ್ರೇನ್ ಮೇಲೆ ಕ್ಷೀಪಣಿ ದಾಳಿ ಆರಂಭಿಸಿದ ರಷ್ಯಾ...!

ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ ನಡೆದಿದ್ದೇನು?

ಡಿಸೆಂಬರ್ 9ರಂದು ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನ ಯಾಂಗ್ತ್ಸೆ ಸೆಕ್ಟರ್‌ನಲ್ಲಿ ಚೀನೀ ಪಡೆಗಳು ನೈಜ ನಿಯಂತ್ರಣ ರೇಖೆ(ಎಲ್‌ಎಸಿ)ಯಾದ್ಯಂತ  ಅತಿಕ್ರಮಣ ಮಾಡಿದ್ದವು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಲೋಕಸಭೆಗೆ ತಿಳಿಸಿದರು. ಚೀನಾದ ಪಡೆಗಳು ಏಕಪಕ್ಷೀಯವಾಗಿ ಯಥಾಸ್ಥಿತಿಯನ್ನು ಬದಲಾಯಿಸಲು ಪ್ರಯತ್ನಿಸಿದವು. ನಮ್ಮ ಸೇನೆಯು ಧೈರ್ಯದಿಂದ PLAಯ ಒಳನುಸುಳುವಿಕೆಯನ್ನು ತಡೆಯಿತು. ಅವರನ್ನು ಸಮರ್ಥವಾಗಿ ಹಿಮ್ಮೆಟ್ಟಿಸುವ ಮೂಲಕ ಭಾರತೀಯ ಸೈನಿಕರು ಶಕ್ತಿ ಪ್ರದರ್ಶಿಸಿದ್ದಾರೆಂದು ಖುಷಿ ಹಂಚಿಕೊಂಡಿದ್ದಾರೆ.

 ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಬಣ್ಣ ಬಯಲು!

ವಿದೇಶಾಂಗ ಸಚಿವ ಎಸ.ಜೈಶಂಕರ್ ವಿಶ್ವಸಂಸ್ಥೆಯ ವೇದಿಕೆಯಲ್ಲಿ ಪಾಕಿಸ್ತಾನದ ಭಯೋತ್ಪಾದಕ ಉದ್ದೇಶವನ್ನು ವಿಶ್ವದ ಮುಂದೆ ಇಟ್ಟಿದ್ದಾರೆ. ಜಗತ್ತು ಪಾಕಿಸ್ತಾನವನ್ನು ಭಯೋತ್ಪಾದನೆಯ ಕೇಂದ್ರವಾಗಿ ನೋಡುತ್ತಿದೆ ಎಂದು ಅವರು ಹೇಳಿದರು. ನಾವು ಎರಡೂವರೆ ವರ್ಷಗಳಿಂದ ಕೋವಿಡ್‌ನೊಂದಿಗೆ ಹೋರಾಡುತ್ತಿದ್ದೇವೆ. ಭಯೋತ್ಪಾದನೆ ಎಲ್ಲಿಂದ ಪ್ರಾರಂಭವಾಗುತ್ತದೆ ಎಂಬುದನ್ನು ಜಗತ್ತು ಮರೆತಿಲ್ಲವೆಂದು ಹೇಳಿದ್ದಾರೆ.

ಇದನ್ನೂ ಓದಿ: ಕೊರೊನಾ ಮಹಾಮಾರಿ ಇನ್ನೂ ಮುಗಿದಿಲ್ಲ, 10 ಲಕ್ಷ ಸಾವು ಸಂಭವಿಸುವ ಸಾಧ್ಯತೆ..! ಶಾಕಿಂಗ್ ರಿಪೋರ್ಟ್ ಇಲ್ಲಿದೆ

ವಿಶ್ವಸಂಸ್ಥೆಯಲ್ಲಿ ಜೈಶಂಕರ್ ಹೇಳಿಕೆಯಿಂದ ಪಾಕಿಸ್ತಾನದ ನಾಯಕರು ಕೆರಳಿದ್ದಾರೆ. ಪಾಕಿಸ್ತಾನದ ಈಗಿನ ಸರ್ಕಾರದ ಮಂತ್ರಿಗಳು ಒಬ್ಬೊಬ್ಬರಾಗಿ ಭಾರತದ ವಿರುದ್ಧ ವಿಷ ಉಗುಳುವುದರಲ್ಲಿ ನಿರತರಾಗಿದ್ದಾರೆ. ಆದರೆ ವಾಸ್ತವವೆಂದರೆ ಭಯೋತ್ಪಾದಕರ ಕಾರ್ಖಾನೆಯನ್ನು ಸೃಷ್ಟಿಸುತ್ತಿರುವ ಏಕೈಕ ದೇಶ ಪಾಕಿಸ್ತಾನವಾಗಿದೆ ಮತ್ತು ಭಾರತವು ಪ್ರಪಂಚದ ಪ್ರತಿಯೊಂದು ವೇದಿಕೆಯಿಂದ ಅದನ್ನು ಯಾವಾಗಲೂ ವಿರೋಧಿಸುತ್ತಿದೆ. ಚೀನಾ ಮತ್ತು ಪಾಕಿಸ್ತಾನ ನಡೆಸುತ್ತಿರುವ ಮಸಲತ್ತಿಗೆ ಭಾರತದಿಂದ ತಕ್ಕ ಉತ್ತರ ಸಿಕ್ಕಿದೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More