Home> World
Advertisement

Video: ಸೈನಿಕರ ಮೃತದೇಹ ಪಡೆಯಲು ಶ್ವೇತ ಧ್ವಜ ತೋರಿಸಿದ ಪಾಕ್..!

ಪಾಕಿಸ್ತಾನದ ಕಡೆಯಿಂದ ಕದನ ವಿರಾಮ ಉಲ್ಲಂಘನೆ (ಸಿಎಫ್‌ವಿ) ಗೆ ಪ್ರತೀಕಾರವಾಗಿ ಭಾರತೀಯ ಸೇನೆಯಿಂದ ಮೃತಪಟ್ಟ ತನ್ನ ಸೈನಿಕರ ದೇಹವನ್ನು ಪಡೆಯಲು ಪಾಕಿಸ್ತಾನ ಸೇನೆಯು ಬಿಳಿ ಧ್ವಜವನ್ನು ಎತ್ತಬೇಕಾಯಿತು. ಈ ಬಿಳಿ ಧ್ವಜವು ಶರಣಾಗತಿಯನ್ನು ಸೂಚಿಸುತ್ತದೆ ಅಥವಾ ಒಪ್ಪಂದವನ್ನು ಬಯಸುತ್ತದೆ.

Video: ಸೈನಿಕರ ಮೃತದೇಹ ಪಡೆಯಲು ಶ್ವೇತ ಧ್ವಜ ತೋರಿಸಿದ ಪಾಕ್..!

ನವದೆಹಲಿ: ಪಾಕಿಸ್ತಾನದ ಕಡೆಯಿಂದ ಕದನ ವಿರಾಮ ಉಲ್ಲಂಘನೆ (ಸಿಎಫ್‌ವಿ) ಗೆ ಪ್ರತೀಕಾರವಾಗಿ ಭಾರತೀಯ ಸೇನೆಯಿಂದ ಮೃತಪಟ್ಟ ತನ್ನ ಸೈನಿಕರ ದೇಹವನ್ನು ಪಡೆಯಲು ಪಾಕಿಸ್ತಾನ ಸೇನೆಯು ಬಿಳಿ ಧ್ವಜವನ್ನು ಎತ್ತಬೇಕಾಯಿತು. ಈ ಬಿಳಿ ಧ್ವಜವು ಶರಣಾಗತಿಯನ್ನು ಸೂಚಿಸುತ್ತದೆ ಅಥವಾ ಒಪ್ಪಂದವನ್ನು ಬಯಸುತ್ತದೆ.

ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ಹಾಜಿಪುರ ಸೆಕ್ಟರ್‌ನಲ್ಲಿ ಸೆಪ್ಟೆಂಬರ್ 10-11 ರಂದು ಭಾರತೀಯ ಸೇನಾ ಪಡೆಗಳು ಸಿಪಾಯ್ ಗುಲಾಮ್ ರಸೂಲ್ ಅವರನ್ನು ಹತ್ಯೆಗೈದವು ಇವರು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಬಹವಾಲ್ ನಗರದವರು ಎಂದು ಸೇನಾ ಮೂಲಗಳು ತಿಳಿಸಿವೆ.

ಆರಂಭದಲ್ಲಿ, ಕದನ ವಿರಾಮ ಉಲ್ಲಂಘನೆಯನ್ನು ತೀವ್ರಗೊಳಿಸುವ ಮೂಲಕ ಪಾಕಿಸ್ತಾನದ ಸೈನಿಕರು ದೇಹವನ್ನು ಪಡೆದುಕೊಳ್ಳಲು ಪ್ರಯತ್ನಿಸಿದರು. ಆದರೆ  ಪಂಜಾಬಿ ಮುಸ್ಲಿಂ ಸೈನಿಕನನ್ನು ಪಡೆಯಲು ಯತ್ನಿಸುತ್ತಿದ್ದಾಗ, ಪಾಕಿಸ್ತಾನದ ಇನ್ನೊಬ್ಬ ಪಂಜಾಬಿ ಮುಸ್ಲಿಂ ಸೈನಿಕನನ್ನು ಹತ್ಯೆಗೈಯಲಾಯಿತು. ಸತತವಾಗಿ ಎರಡು ದಿನಗಳ ಕಲ ಪಾಕಿಸ್ತಾನ ಮೃತ ದೇಹಗಳನ್ನು ಪಡೆಯಲು ಯತ್ನಿಸಿದರು ಕೂಡ ಅವರಿಗೆ ವಶಪಡಿಸಿಕೊಳ್ಳಲು ಸಾಧ್ಯವಾಗಿಲ್ಲ  ಈ ಹಿನ್ನಲೆಯಲ್ಲಿ ಪಾಕಿಸ್ತಾನವು ಸೆಪ್ಟಂಬರ್ 13 ರಂದು ಬಿಳಿ ಧ್ವಜವನ್ನು ಮೇಲೆಕ್ಕೆತ್ತಿ ಶವಗಳನ್ನು ವಶಪಡಿಸಿಕೊಂಡಿದೆ. ಭಾರತೀಯ ಸೇನೆಯು ಸತ್ತವರನ್ನು ಗೌರವಿಸುತ್ತದೆ ಮತ್ತು ಅದಕ್ಕೆ ಅನುಮತಿ ನೀಡಿದೆ ಎಂದು ಮೂಲಗಳು ತಿಳಿಸಿವೆ. 

ಕೇರನ್ ಸೆಕ್ಟರ್‌ನಲ್ಲಿ ಜುಲೈ 30-31 ರಂದು ಕೊಲ್ಲಲ್ಪಟ್ಟ ತನ್ನ 5-7 ಸೈನಿಕರು ಮತ್ತು ಭಯೋತ್ಪಾದಕರ ಶವಗಳನ್ನು ವಾಪಸ್ ತೆಗೆದುಕೊಳ್ಳಲು ಪಾಕಿಸ್ತಾನ ಸೇನೆಯು ಪ್ರಯತ್ನಿಸಲಿಲ್ಲ ಎಂಬುದು ಗಮನಿಸಬೇಕಾದ ಸಂಗತಿ. ಕೊಲ್ಲಲ್ಪಟ್ಟವರು ಪಂಜಾಬ್ ಮೂಲದವರಲ್ಲ ಎಂದು ನಂಬಲಾಗಿದೆ.

ಕೇರನ್ ವಲಯದಲ್ಲಿ ಕೊಲ್ಲಲ್ಪಟ್ಟವರು ಕಾಶ್ಮೀರಿಗಳು ಅಥವಾ ನಾರ್ದರ್ನ್ ಲೈಟ್ ಕಾಲಾಳುಪಡೆ (ಎನ್‌ಎಲ್‌ಐ) ಯ ಸೈನಿಕರು ಆಗಿರಬೇಕು ಎಂದು ಮೂಲಗಳು ತಿಳಿಸಿವೆ.ಇದಕ್ಕೂ ಮೊದಲು ಕಾರ್ಗಿಲ್ ಯುದ್ಧದಲ್ಲಿ ಕೊಲ್ಲಲ್ಪಟ್ಟ ತನ್ನ ಸೈನಿಕರನ್ನು ಪಾಕಿಸ್ತಾನ ನಿರಾಕರಿಸಿತ್ತು. ಆಗ ಭಾರತೀಯ ಪಡೆಗಳು ಅವರ ಅಂತಿಮ ವಿಧಿ ವಿಧಾನಗಳನ್ನು ಪೂರೈಸಿದರು 

ಪಂಜಾಬಿ ಮುಸ್ಲಿಂ ಜನರಲ್‌ಗಳ ಪ್ರಾಬಲ್ಯವಿರುವ ಮತ್ತು ಆ ಪ್ರದೇಶದಿಂದ ಶೇಕಡಾ 70 ಕ್ಕಿಂತ ಹೆಚ್ಚು ಸೈನಿಕರನ್ನು ಹೊಂದಿರುವ ಪಾಕಿಸ್ತಾನ ಸೇನೆಯು ಯಾವಾಗಲೂ ಹತ್ಯೆಗೀಡಾದ ಪಂಜಾಬಿ ಸೈನಿಕರ ಶವಗಳನ್ನು ಹಿಂಪಡೆಯಲು ಪ್ರಯತ್ನಿಸುತ್ತದೆ  ಎಂದು ಮೂಲಗಳು ತಿಳಿಸಿವೆ.

Read More