Home> World
Advertisement

ಮಿಲಿಟರಿ ಹಿಡಿತಕ್ಕೆ ಒಳಗಾಗಲಿದೆಯೇ ಪಾಕಿಸ್ತಾನ? ನೆರೆ ರಾಷ್ಟ್ರದಲ್ಲಿ ಏನಾಗುತ್ತಿದೆ..! ಇಲ್ಲಿದೆ ಸ್ಪೋಟಕ ಮಾಹಿತಿ

 ಪಾಕ್ ನ ಸರ್ಕಾರಿ ಸ್ವಾಮ್ಯದ ವಾಯುವಾಹಕ, ವಿದ್ಯುತ್ ನಿಯಂತ್ರಕ ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಅನ್ನು ನಡೆಸುವಂತಹ ಹುದ್ದೆಗಳಲ್ಲಿ ಗಳಲ್ಲಿ ಈಗ ಒಂದು ಡಜನ್‌ಗಿಂತಲೂ ಹೆಚ್ಚು ಮಾಜಿ ಮತ್ತು ಹಾಲಿ ಮಿಲಿಟರಿ ಅಧಿಕಾರಿಗಳು ಪಾಕ್ ನಲ್ಲಿನ ಸಾಂಕ್ರಾಮಿಕ ರೋಗದ ನಿರ್ವಹಣೆ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಈ ಎಲ್ಲ ನೇಮಕಗಳು ಕಳೆದ ಎರಡು ತಿಂಗಳಲ್ಲಿ ನಡೆದಿವೆ.

ಮಿಲಿಟರಿ ಹಿಡಿತಕ್ಕೆ ಒಳಗಾಗಲಿದೆಯೇ ಪಾಕಿಸ್ತಾನ? ನೆರೆ ರಾಷ್ಟ್ರದಲ್ಲಿ ಏನಾಗುತ್ತಿದೆ..! ಇಲ್ಲಿದೆ ಸ್ಪೋಟಕ ಮಾಹಿತಿ

ನವದೆಹಲಿ: ಪಾಕ್ ನ ಸರ್ಕಾರಿ ಸ್ವಾಮ್ಯದ ವಾಯುವಾಹಕ, ವಿದ್ಯುತ್ ನಿಯಂತ್ರಕ ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಅನ್ನು ನಡೆಸುವಂತಹ ಹುದ್ದೆಗಳಲ್ಲಿ ಗಳಲ್ಲಿ ಈಗ ಒಂದು ಡಜನ್‌ಗಿಂತಲೂ ಹೆಚ್ಚು ಮಾಜಿ ಮತ್ತು ಹಾಲಿ ಮಿಲಿಟರಿ ಅಧಿಕಾರಿಗಳು ಪಾಕ್ ನಲ್ಲಿನ ಸಾಂಕ್ರಾಮಿಕ ರೋಗದ ನಿರ್ವಹಣೆ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಈ ಎಲ್ಲ ನೇಮಕಗಳು ಕಳೆದ ಎರಡು ತಿಂಗಳಲ್ಲಿ ನಡೆದಿವೆ.

ಆ ಮೂಲಕ ನಿಧಾನವಾಗಿ ಪಾಕ್ ನಲ್ಲಿ ಮಿಲಿಟರಿ ಆಡಳಿತವು ಇಮ್ರಾನ್ ಖಾನ್ (Imran Khan )ಸರ್ಕಾರದ ಮೇಲೆ ಹಿಡಿತ ಸಾಧಿಸುತ್ತಿದೆ ಎನ್ನಲಾಗುತ್ತಿದೆ.

ನಿಧಾನಗತಿಯ ಆರ್ಥಿಕತೆ, ಹೆಚ್ಚಿನ ಗ್ರಾಹಕ ಬೆಲೆಗಳು ಮತ್ತು ಅವರ ಆಪ್ತ ಸಹಾಯಕರನ್ನು ಒಳಗೊಂಡ ಭ್ರಷ್ಟಾಚಾರದ ತನಿಖೆಯಿಂದಾಗಿ ಪ್ರಧಾನಿ ಇಮ್ರಾನ್ ಖಾನ್ ಅವರ ಪ್ರಭಾವ ಮತ್ತು ಜನಪ್ರಿಯತೆಯು ಕ್ಷೀಣಿಸುತ್ತಿರುವುದರಿಂದಾಗಿ ಮಿಲಿಟರಿ ಪ್ರಭಾವ ತೀವ್ರಗೊಂಡಿದೆ. ಸಂಸತ್ತಿನಲ್ಲಿ ಶೇ 46 ಸ್ಥಾನಗಳನ್ನು ಹೊಂದಿರುವ ಖಾನ್ ಅವರ ಪಕ್ಷಕ್ಕೆ ಸೈನ್ಯದ ಬೆಂಬಲವು ನಿರ್ಣಾಯಕವೆಂದು ವಿಶ್ಲೇಷಕರು ಬಹಳ ಹಿಂದೆಯೇ ಹೇಳಿದ್ದಾರೆ.

ಅಷ್ಟಕ್ಕೂ ಪಾಕಿಸ್ತಾನಕ್ಕೆ ಮಿಲಿಟರಿ ಆಡಳಿತ ಇದೇನೂ ಹೊಸದೇನಲ್ಲ, ಪಾಕಿಸ್ತಾನದಲ್ಲಿ ಮಿಲಿಟರಿ ಅತ್ಯಂತ ಶಕ್ತಿಶಾಲಿ ಸಂಸ್ಥೆಯಾಗಿದೆ ಮತ್ತು ಏಳು ದಶಕಗಳ ಇತಿಹಾಸದ ಬಹುಪಾಲು ಭಾಗಗಳಿಗೆ ನೇರವಾಗಿ ದೇಶವನ್ನು ಆಳಿದೆ.ಇನ್ನು 2018ರಲ್ಲಿ ಇಮ್ರಾನ್ ಖಾನ್ ಅಧಿಕಾರ ವಹಿಸಿಕೊಂಡಾಗ ನೀಡಿದ ನವ ಪಾಕಿಸ್ತಾನದ ಘೋಷಣೆ ಇನ್ನೂ ಹಾಗೆ ಉಳಿದಿದೆ.

'ಹೆಚ್ಚಿನ ಸಂಖ್ಯೆಯ ಪ್ರಸ್ತುತ ಮತ್ತು ನಿವೃತ್ತ ಮಿಲಿಟರಿ ಅಧಿಕಾರಿಗಳನ್ನು ಪ್ರಮುಖ ಹುದ್ದೆಗಳಲ್ಲಿ ನೇಮಿಸುವ ಮೂಲಕ, ದೇಶದಲ್ಲಿ ನೀತಿಯನ್ನು ಅಭಿವೃದ್ಧಿಪಡಿಸುವಲ್ಲಿ ಮತ್ತು ಕಾರ್ಯಗತಗೊಳಿಸುವಲ್ಲಿ ನಾಗರಿಕರಿಗೆ ಕಡಿಮೆ ಜಾಗವನ್ನು ಸರ್ಕಾರ ನೀಡುತ್ತಿದೆ.ಆಡಳಿತದಲ್ಲಿ ಮಿಲಿಟರಿಯ ಬಹಿರಂಗ ಮತ್ತು ರಹಸ್ಯ ಪಾತ್ರವು ಬೆಳೆಯುತ್ತಲೇ ಇದೆ ಎಂದು ಅಟ್ಲಾಂಟಿಕ್ ಕೌನ್ಸಿಲ್‌ನ ಅನಿವಾಸಿ ಹಿರಿಯ ಸಹವರ್ತಿ ಉಜೈರ್ ಯೂನಸ್ ಹೇಳಿದ್ದಾರೆ.

ಪಾಕಿಸ್ತಾನದ ಅನೇಕರು ರಾಜ್ಯ ದೂರದರ್ಶನದಲ್ಲಿ ಕೊರೊನಾ ಕುರಿತ ಗೋಷ್ಠಿಯಲ್ಲಿ ಸಮವಸ್ತ್ರಧಾರಿ ಪ್ರಸ್ತುತ ಸೇನಾಧಿಕಾರಿಗಳನ್ನು ಕಾಣಬಹುದು.ನಿವೃತ್ತ ಲೆಫ್ಟಿನೆಂಟ್ ಜನರಲ್ ಅಸಿಮ್ ಸಲೀಮ್ ಬಜ್ವಾ ಈಗ ಖಾನ್ ಅವರ ಸಂವಹನ ಸಲಹೆಗಾರರಾಗಿದ್ದಾರೆ ಮತ್ತು ಚೀನಾದ ಬೆಲ್ಟ್-ಅಂಡ್-ರೋಡ್ ಇನಿಶಿಯೇಟಿವ್‌ನ ಭಾಗವಾಗಿ ಪಾಕಿಸ್ತಾನದ ಹೂಡಿಕೆಗಳಲ್ಲಿ ಸುಮಾರು  60 ಬಿಲಿಯನ್  ಡಾಲರ್ ಅನುಷ್ಠಾನವನ್ನು ನೋಡಿಕೊಳ್ಳುತ್ತಿದ್ದಾರೆ.

Read More