Home> World
Advertisement

ಯುವತಿಗೆ ಒಂದೇ ಸಲ ಕರೋನಾ ವ್ಯಾಕ್ಸಿನ್ ನ ಆರು ಡೋಸ್ ಕೊಟ್ಟ ನರ್ಸಮ್ಮ..!

23 ವರ್ಷದ ಇಟೆಲಿಯ ಯುವತಿಗೆ ಫೈಜರ್ ಬಯೋಟೆಕ್ ಕಂಪನಿಯ ಫೈಜರ್ ವ್ಯಾಕ್ಸಿನ್ 6 ಡೋಸ್ ನೀಡಲಾಗಿದೆ. ಅದು ಕೂಡಾ ಒಂದೇ ಸಲಕ್ಕೆ.  ವ್ಯಾಕ್ಸಿನ್ ಸೆಂಟರ್ ನಲ್ಲಿರುವ ನರ್ಸ್ ಮಾಡಿದ ತಪ್ಪಿಗೆ ಈ ಯುವತಿ ಬೆಲೆ ತೆರಬೇಕಾಗಿದೆ.

ಯುವತಿಗೆ ಒಂದೇ ಸಲ ಕರೋನಾ ವ್ಯಾಕ್ಸಿನ್ ನ ಆರು ಡೋಸ್ ಕೊಟ್ಟ ನರ್ಸಮ್ಮ..!

ರೋಮ್ :  ಇದು ಕರೋನಾ ವ್ಯಾಕ್ಸಿನ್ ಗೆ (Coroan Vaccine) ಸಂಬಂಧಿಸಿದ ವಿಚಿತ್ರ ಸುದ್ದಿ. ಸಾಮಾನ್ಯವಾಗಿ ಕರೋನಾ ಲಸಿಕೆಯ ಒಂದು ಅಥವಾ ಎರಡು ಡೋಸ್ ಗಳನ್ನು ಚುಚ್ಚಲಾಗುತ್ತದೆ. ಆದರೆ, ಇಟೆಲಿಯ ರಾಜಧಾನಿ ರೋಮ್ ನಿಂದ  (Rome) ಒಂದು ವಿಚಿತ್ರ ಸುದ್ದಿ ಬಂದಿದೆ. ಅಲ್ಲಿ ಒಬ್ಬಳು ಯುವತಿಗೆ ಒಂದೇ ಬಾರಿಗೆ 6 ಡೋಸ್ ನೀಡಲಾಗಿದೆ.

ಈ ಪ್ರಮಾದಕ್ಕೆ ಕಾರಣ  ಇದು :

23 ವರ್ಷದ ಇಟೆಲಿಯ ಯುವತಿಗೆ ಫೈಜರ್ ಬಯೋಟೆಕ್ ಕಂಪನಿಯ ಫೈಜರ್ ವ್ಯಾಕ್ಸಿನ್ (Pfizer) 6 ಡೋಸ್ ನೀಡಲಾಗಿದೆ. ಅದು ಕೂಡಾ ಒಂದೇ ಸಲಕ್ಕೆ.  ವ್ಯಾಕ್ಸಿನ್ ಸೆಂಟರ್ ನಲ್ಲಿರುವ ನರ್ಸ್ ಮಾಡಿದ ತಪ್ಪಿಗೆ ಈ ಯುವತಿ ಬೆಲೆ ತೆರಬೇಕಾಗಿದೆ. ಆಗಿದ್ದು ಇಷ್ಟೇ..ಸಾಮಾನ್ಯವಾಗಿ ವ್ಯಾಕ್ಸಿನ್ ವಯಲ್ ಓಪನ್ ಮಾಡಿದ ಮೇಲೆ ನಿರ್ದಿಷ್ಟ ಪ್ರಮಾಣದಲ್ಲಿ ಸಿರಂಜ್ ಗೆ ತುಂಬಿ ಜನರಿಗೆ ವ್ಯಾಕ್ಸಿನ್ (Vaccine) ಚುಚ್ಚಲಾಗುತ್ತದೆ. ಫೈಜರ್ ನ  ಒಂದು ವಯಲ್ ನಲ್ಲಿ ಆರು ಡೋಸ್ ವ್ಯಾಕ್ಸಿನ್ ಇರುತ್ತದೆ. ಈ ನರ್ಸ್ ಮಾಡಿದಿಷ್ಟೇ. ಫೈಜರ್ ವಯಲ್  ಓಪನ್ ಮಾಡಿ ಶೀಶೆಯಲ್ಲಿ ಒಂದು ಡೋಸ್ ಬದಲಿಗೆ, ಸಂಪೂರ್ಣ ಶೀಸೆಯಲ್ಲಿರುವ ವ್ಯಾಕ್ಸಿನನ್ನೆ ಸಿರಿಂಜ್ ಗೆ ತುಂಬಿ ಯುವತಿಗೆ ಚುಚ್ಚಿ ಬಿಟ್ಟಿದ್ದಾಳೆ ನರ್ಸಮ್ಮ. ಆ ಒಂದು ಶೀಶೆ ಅಥವಾ ವಯಲ್ ನಲ್ಲಿ ಆರು ಡೋಸ್ ಆಗುವಷ್ಟು ವ್ಯಾಕ್ಸಿನ್ ಇರುತ್ತದೆ. ಅಂದರೆ, ರೋಮ್ ನಗರದ  ಆ ಯುವತಿಗೆ ಒಂದೇ ಸಲ ಆರು ಡೋಸ್ ಪ್ರಮಾಣದಲ್ಲಿ ಇಂಜಕ್ಷನ್ ಚುಚ್ಚಲಾಗಿದೆ.

ಇದನ್ನೂ ಓದಿ : ಹೊರ ಬಿತ್ತು ಘನಘೋರ ಸತ್ಯ.! ಚೀನಾ ತಯಾರಿಸುತ್ತಿತ್ತು ಕರೋನಾ ವೈರಸ್ ಜೆನೆಟಿಕ್ ಅಸ್ತ್ರ.!

ಅಡ್ಡ ಪರಿಣಾಮ ಏನೂ ಆಗಲಿಲ್ಲ:
ವಿಶೇಷವೆಂದರೆ 6  ಡೋಸ್ ಪಡೆದ ಮೇಲೂ ಯುವತಿ ಆರೋಗ್ಯವಾಗಿದ್ದಾಳೆ. ವ್ಯಾಕ್ಸಿನ್ ಓವರ್ ಡೋಸ್ ನ ಯಾವುದೇ ಅಡ್ಡ ಪರಿಣಾಮ (Side effect) ಹುಡುಗಿ ಮೇಲಾಗಿಲ್ಲ.  ವ್ಯಾಕ್ಸಿನ್ ಓವರ್ ಡೋಸ್ ಆಗಿದೆ ಎಂದು ಗೊತ್ತಾದ ತಕ್ಷಣ ಯುವತಿಗೆ ಕೂಡಲೇ ದ್ರವ ಆಹಾರ ಮತ್ತು ಪ್ಯಾರಾಸೆಟಮಾಲ್ ನೀಡಲಾಗಿತ್ತು. 

ಇದನ್ನೂ ಓದಿ : Colonial Pipeline Cyber Attack: USನಲ್ಲಿ ಇದುವರೆಗಿನ ಅತಿ ದೊಡ್ಡ ಸೈಬರ್ ದಾಳಿ, Emergency ಘೋಷಿಸಿದ ಬಿಡೆನ್ ಸರ್ಕಾರ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More