Home> World
Advertisement

ಕೀವ್‌ನಲ್ಲಿ 900ಕ್ಕೂ ಅಧಿಕ ನಾಗರಿಕರ ಮೃತದೇಹ ಪತ್ತೆ!

ಬಹುತೇಕ ಶವಗಳ ಮೇಲೆ ಗುಂಡಿನೇಟಿನ ಗುರುತುಗಳಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕೀವ್‌ನಲ್ಲಿ ರಷ್ಯಾದ ಪಡೆಗಳನ್ನು ಹಿಂಪಡೆದ ಬಳಿಕ ಅಲ್ಲಿನ ಪ್ರಾದೇಶಿಕ ಪೊಲೀಸ್‌ ಪಡೆಗಳು ಕಾರ್ಯಾಚರಣೆ ನಡೆಸುತ್ತಿದೆ. ಈ ಸಂದರ್ಭದಲ್ಲಿ  900ಕ್ಕೂ ಅಧಿಕ ಶವಗಳು ಪತ್ತೆಯಾಗಿವೆ.

ಕೀವ್‌ನಲ್ಲಿ 900ಕ್ಕೂ ಅಧಿಕ ನಾಗರಿಕರ ಮೃತದೇಹ ಪತ್ತೆ!

ಕೀವ್‌ (ಉಕ್ರೇನ್‌): ರಷ್ಯಾ ಮತ್ತು ಉಕ್ರೇನ್‌ ರಾಷ್ಟ್ರಗಳ ಯುದ್ಧ ಪ್ರಾರಂಭವಾಗಿ ಅನೇಕ ದಿನಗಳಾಗುತ್ತಾ ಬಂದಿದೆ. ಈ ಹಿಂಸಾಚಾರದಲ್ಲಿ ಅದೆಷ್ಟೋ ಜನರ ಪ್ರಾಣಪಕ್ಷಿ ಹಾರಿಹೋಗಿದೆ. ಇದೀಗ ಉಕ್ರೇನ್‌ನ ರಾಜಧಾನಿ ಕೀವ್‌ನಲ್ಲಿ ಸುಮಾರು 900 ಕ್ಕೂ ಹೆಚ್ಚು  ನಾಗರಿಕರ ಶವಗಳು ಪತ್ತೆಯಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ. 

ಇದನ್ನು ಓದಿ: 'ಎಲ್ಲಾ ಸರ್ಕಾರದಲ್ಲೂ ಪರ್ಸೆಂಟ್ ವಿಚಾರ ನಡೆಯುತ್ತಿದೆ, ಯಾವ ಸರಕಾರದಲ್ಲಿ ನಡೆಯುವುದಿಲ್ಲ ಹೇಳಿ?'

ಬಹುತೇಕ ಶವಗಳ ಮೇಲೆ ಗುಂಡಿನೇಟಿನ ಗುರುತುಗಳಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕೀವ್‌ನಲ್ಲಿ ರಷ್ಯಾದ ಪಡೆಗಳನ್ನು ಹಿಂಪಡೆದ ಬಳಿಕ ಅಲ್ಲಿನ ಪ್ರಾದೇಶಿಕ ಪೊಲೀಸ್‌ ಪಡೆಗಳು ಕಾರ್ಯಾಚರಣೆ ನಡೆಸುತ್ತಿದೆ. ಈ ಸಂದರ್ಭದಲ್ಲಿ  900ಕ್ಕೂ ಅಧಿಕ ಶವಗಳು ಪತ್ತೆಯಾಗಿವೆ. 

ಇನ್ನು ಕೀವ್ ಪ್ರಾದೇಶಿಕ ಪೊಲೀಸ್‌ ಪಡೆಯ ಮುಖ್ಯಸ್ಥ ಆಂಡ್ರಿ ನೆಬಿಟೋವ್‌ ಈ ಬಗ್ಗೆ ಮಾತನಾಡಿದ್ದು, ‘ಬಹುತೇಕ ಶವಗಳು ರಸ್ತೆಗಳಲ್ಲಿ ಅನಾಥವಾಗಿದ್ದವು. ಶೇ.95 ರಷ್ಟು ಮಂದಿ ಗುಂಡಿನೇಟಿನಿಂದಲೇ ಸತ್ತಿದ್ದಾರೆ. ಅವರ ದೇಹದ ಮೇಲೆ ಗುಂಡಿನ ಗುರುತುಗಳಿವೆ’ ಎಂದು ಹೇಳಿದ್ದಾರೆ.  

ಇನ್ನೊಂದೆಡೆ ಉಕ್ರೇನ್‌ ನಗರವಾದ ಕ್ರಾಮಟೋಸ್ಕ್‌ನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಸುಮಾರು ಏಳು ಮಂದಿ ಸಾವನ್ನಪ್ಪಿದ್ದು ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. 

ಮೂರು ಸಾವಿರಕ್ಕೂ ಅಧಿಕ ಸಾವು: ರಷ್ಯಾ ನಡೆಸಿದ ದಾಳಿಯಲ್ಲಿ ಇಲ್ಲಿಯವರೆಗೆ ಸುಮಾರು ಉಕ್ರೇನ್‌ನ 3000ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಒಟ್ಟಾರೆಯಾಗಿ ರಷ್ಯಾವನ್ನು ಉಕ್ರೇನ್‌ ನಾಶಪಡಿಸುವ ಉದ್ದೇಶ ಹೊಂದಿದೆ ಎಂದು ಉಕ್ರೇನ್ ಅಧ್ಯಕ್ಷ ಆರೋಪಿಸಿದ್ದಾರೆ. ಪೂರ್ವದ ಲುಗಾನ್ಸ್ಕ್‌ ವಲಯದಲ್ಲಿ ಇಬ್ಬರು , ಡೊನೆಟ್ಸ್ಕ್ ವಲಯದಲ್ಲಿ ಮೂವರು ಮೃತಪಟ್ಟಿದ್ದಾರೆ. ಡೊನೆಟ್ಸ್‌ ವಲಯದಲ್ಲಿ ಸಂಘರ್ಷ ಮುಂದುವರಿದಿದೆ. 

ಇದನ್ನು ಓದಿ: ಅನೈತಿಕ ಹಾಗೂ ಭ್ರಷ್ಟತೆಯೇ ಕಾಂಗ್ರೆಸ್ ಪಕ್ಷದ ಜೀವಾಳ: ಬಿಜೆಪಿ ಆಕ್ರೋಶ

ಸೇನೆಯ ದಾಳಿಯಿಂದ ಶುಕ್ರವಾರ ಐವರು ಮೃತಪಟ್ಟಿದ್ದಾರೆ. ರಷ್ಯಾ ಪಡೆಗಳು ಉಕ್ರೇನ್‌ ನಾಶಪಡಿಸುವ ಗುರಿ ಹೊಂದಿವೆ. ಡೊನ್‌ಬಾಸ್ ರಷ್ಯಾದ ಮುಖ್ಯ ಗುರಿಯಾಗಿದೆ ಎಂದು ಉಕ್ರೇನ್ ಅಧ್ಯಕ್ಷ ಆರೋಪಿಸಿದ್ದಾರೆ. ಈ ಬಗ್ಗೆ ಹೇಳಿಕೆ ನೀಡಿದ್ದು, ಪೂರ್ವದ ಲುಗಾನ್ಸ್ಕ್‌ ವಲಯದಲ್ಲಿ ಇಬ್ಬರು , ಡೊನೆಟ್ಸ್ಕ್ ವಲಯದಲ್ಲಿ ಮೂವರು ಮೃತಪಟ್ಟಿದ್ದಾರೆ. ಡೊನೆಟ್ಸ್‌ ವಲಯದಲ್ಲಿ ಸಂಘರ್ಷ ಮುಂದುವರಿದಿದೆ ಎಂದು ತಿಳಿಸಿದ್ದಾರೆ.

ಕ್ಷಿಪಣಿ ದಾಳಿ ಎಚ್ಚರಿಕೆ: 
ಈ ಮಧ್ಯೆ ರಷ್ಯಾದ ರಕ್ಷಣಾ ಸಚಿವಾಲಯವು ಉಕ್ರೇನ್ ಮೇಲೆ ಕ್ಷಿಪಣಿ ದಾಳಿಯನ್ನು ತೀವ್ರಗೊಳಿಸುವ ಸಾಧ್ಯತೆಯಿದೆ ಎಂದು ಉಕ್ರೇನ್‌ ಸಚಿವಾಲಯ ಎಚ್ಚರಿಕೆ ನೀಡಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More