Home> World
Advertisement

ವೇಗವಾಗಿ ಹರಡುತ್ತಿದೆ ಮಂಕಿಪಾಕ್ಸ್‌: ಭಾರತ ಎಚ್ಚರಿಕೆ ವಹಿಸಲು WHO ಸೂಚನೆ

ಮಂಕಿಪಾಕ್ಸ್‌ ಪ್ರಕರಣವು ಯುರೋಪ್ ಮತ್ತು ಉತ್ತರ ಅಮೆರಿಕಾದಲ್ಲಿ ಹೆಚ್ಚು ವ್ಯಾಪಕವಾಗಿ ಹರಡುತ್ತಿವೆ. 80 ಪ್ರತಿಶತ ಮಂಕಿಪಾಕ್ಸ್ ಪ್ರಕರಣಗಳು ಯುರೋಪ್‌ನಲ್ಲಿ ಕಂಡುಬಂದಿದೆ. ಮಂಕಿಪಾಕ್ಸ್‌ ಕಾಯಿಲೆಯ ಲಕ್ಷಣಗಳು ಯಾವುವು ಮತ್ತು ಅದು ಹೇಗೆ ಹರಡುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ.

ವೇಗವಾಗಿ ಹರಡುತ್ತಿದೆ ಮಂಕಿಪಾಕ್ಸ್‌: ಭಾರತ ಎಚ್ಚರಿಕೆ ವಹಿಸಲು WHO ಸೂಚನೆ

ಮಂಕಿಪಾಕ್ಸ್‌ಗೆ ಸಂಬಂಧಿಸಿದಂತೆ ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ. ವಿಶ್ವದ 75 ದೇಶಗಳಲ್ಲಿ ಮಂಕಿಪಾಕ್ಸ್‌ ಹರಡಿದ್ದು, ಈವರೆಗೆ 16 ಸಾವಿರ ಪ್ರಕರಣಗಳು ಪತ್ತೆಯಾಗಿದ್ದು, 5 ಮಂದಿ ಸಾವನ್ನಪ್ಪಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶಕ ಡಾ.ಟಾಡ್ರಾಯ್ಡ್ ಅಬ್ರಹಾಂ ಅವರು ಮಂಕಿಪಾಕ್ಸ್ ಅನ್ನು ಜಾಗತಿಕ ತುರ್ತು ಪರಿಸ್ಥಿತಿ ಎಂದು ಘೋಷಿಸಿದ್ದಾರೆ. ಈ ಘೋಷಣೆ ಮಾಡಲು ದೊಡ್ಡ ಕಾರಣವೆಂದರೆ ಜೂನ್ ಅಂತ್ಯದಿಂದ ಜುಲೈವರೆಗೆ, ರೋಗವು 77 ಪ್ರತಿಶತದಷ್ಟು ಹೆಚ್ಚು ಹರಡಿದೆ. ಅಷ್ಟೇ ಅಲ್ಲದೆ, ಈ ರೋಗವು ಮೊದಲು ಯಾವುದೇ ಪ್ರಕರಣ ಕಂಡುಬಂದಿಲ್ಲದ ದೇಶಗಳಲ್ಲಿಯೂ ಹರಡಿದೆ. 

ಮಂಕಿಪಾಕ್ಸ್‌ ಪ್ರಕರಣವು ಯುರೋಪ್ ಮತ್ತು ಉತ್ತರ ಅಮೆರಿಕಾದಲ್ಲಿ ಹೆಚ್ಚು ವ್ಯಾಪಕವಾಗಿ ಹರಡುತ್ತಿವೆ. 80 ಪ್ರತಿಶತ ಮಂಕಿಪಾಕ್ಸ್ ಪ್ರಕರಣಗಳು ಯುರೋಪ್‌ನಲ್ಲಿ ಕಂಡುಬಂದಿದೆ. ಮಂಕಿಪಾಕ್ಸ್‌ ಕಾಯಿಲೆಯ ಲಕ್ಷಣಗಳು ಯಾವುವು ಮತ್ತು ಅದು ಹೇಗೆ ಹರಡುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ.

ಇದನ್ನೂ ಓದಿ: COVID-19 vaccine: ಒಂದೇ ಒಂದು ಡೋಸ್ ಕೊರೊನಾ ಲಸಿಕೆ ತೆಗೆದುಕೊಳ್ಳದ 4 ಕೋಟಿ ಜನ!

ಮಂಕಿಪಾಕ್ಸ್‌ ಲಕ್ಷಣಗಳು: 
ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆಗಾಗಿ US ಆರೋಗ್ಯ ಸಂರಕ್ಷಣಾ ಸಂಸ್ಥೆ (CDC) ಹೇಳುವಂತೆ ಮೊಡವೆ ಅಥವಾ ಗುಳ್ಳೆಗಳಂತಹ ಹುಣ್ಣುಗಳು ಮತ್ತು ಜ್ವರ ತರಹದ ರೋಗಲಕ್ಷಣಗಳನ್ನು ಉಂಟುಮಾಡುವ ರೋಗವು ಮಂಕಿಪಾಕ್ಸ್‌ನ ಸಂಪರ್ಕದ ಮೂಲಕ ಹರಡಬಹುದು. ಇದು ಗಾಯಗಳು ಮತ್ತು ಉಸಿರಾಟದ ಸ್ರವಿಸುವಿಕೆಯೊಂದಿಗೆ ನೇರ ದೈಹಿಕ ಸಂಪರ್ಕದ ಮೂಲಕ ಹರಡಬಹುದು.

ಮಂಕಿಪಾಕ್ಸ್ ಹೇಗೆ ಹರಡುತ್ತದೆ?
ಗಮನಾರ್ಹವಾಗಿ ವ್ಯಕ್ತಿಯ ಮೈಯಲ್ಲಿ ಗಾಯಗಳು ಅಥವಾ ದ್ರವರೂಪದಲ್ಲಿ ಏನಾದರೂ ಇದಲ್ಲಿ, ಅವುಗಳನ್ನು ಬೇರೊಬ್ಬ ವ್ಯಕ್ತಿ ಸ್ಪರ್ಶಿಸಿದರೆ ಸಹ  ರೋಗ ಹರಡುವ ಸಾಧ್ಯತೆ ಇರುತ್ತದೆ. ಇದಲ್ಲದೆ, ಮಂಕಿಪಾಕ್ಸ್ ಜರಾಯುವಿನ ಮೂಲಕ ಭ್ರೂಣಕ್ಕೆ ಹೋಗಬಹುದು. ಸೋಂಕಿತ ಪ್ರಾಣಿಗಳ ಸಂಪರ್ಕದಿಂದ ಸಹ ಜನರಿಗೆ ಮಂಕಿಪಾಕ್ಸ್ ಹರಡಬಹುದು. ಸೋಂಕಿತ ಪ್ರಾಣಿಯ ಮಾಂಸವನ್ನು ತಿನ್ನುವುದರಿಂದ ಸಹ ಮಂಕಿಪಾಕ್ಸ್‌ ರೋಗ ಕಂಡುಬರುತ್ತದೆ. 

ಇದನ್ನೂ ಓದಿ: 31 ನೇ ವಯಸ್ಸಿನಲ್ಲಿ 48 ಮಕ್ಕಳ ತಂದೆಯಾದ ಈ ವ್ಯಕ್ತಿ

ಉತ್ತರ ಅಮೆರಿಕದ 44 ರಾಜ್ಯಗಳಲ್ಲಿ ಒಟ್ಟಾರೆಯಾಗಿ 2,500 ಮಂಕಿಪಾಕ್ಸ್ ಪ್ರಕರಣಗಳು ಕಂಡುಬಂದಿವೆ. ಈ ರಾಜ್ಯಗಳ ಎರಡು ಸ್ಥಳಗಳಲ್ಲಿ ಮಂಗನ ಕಾಯಿಲೆ ಹಿಂದೆಂದೂ ಕಂಡುಬಂದಿರಲಿಲ್ಲ. ಇನ್ನು ಭಾರತದಲ್ಲಿಯೂ ಇದುವರೆಗೆ 3 ಮಂಕಿಪಾಕ್ಸ್ ಪ್ರಕರಣಗಳು ದಾಖಲಾಗಿವೆ. ಈ ಎಲ್ಲಾ ಪ್ರಕರಣಗಳು ಕಂಡುಬಂದಿರುವುದು ಕೇರಳದಲ್ಲಿ. ಮಂಕಿಪಾಕ್ಸ್ ಅನ್ನು ಜಾಗತಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸುವ ಹಿಂದೆ WHO ನೀಡಿದ ದೊಡ್ಡ ಕಾರಣವೆಂದರೆ ಈಗ ಈ ರೋಗವು ವೇಗವಾಗಿ ಹರಡುವ ಅಪಾಯ ಹೆಚ್ಚಾಗಿದೆ. ಆದ್ದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಂಗನ ಕಾಯಿಲೆಯ ವಿರುದ್ಧ ಹೋರಾಡುವ ಅವಶ್ಯಕತೆಯಿದೆ. ಜನವರಿ 2020 ರಲ್ಲಿ, ವಿಶ್ವ ಆರೋಗ್ಯ ಸಂಸ್ಥೆಯು ಕೊರೊನಾ ವೈರಸ್ ಅನ್ನು ಜಾಗತಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಿತು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More