Home> World
Advertisement

Russia-Ukraine War : ಉಕ್ರೇನ್‌ ರೈಲ್ವೆ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ : 50ಕ್ಕೂ ಮಿಕ್ಕಿ ಸಾವು

ಉಕ್ರೇನ್​ನಿಂದ ಬೇರೆಡೆಗೆ ಸ್ಥಳಾಂತರವಾಗಲು ರೈಲು ನಿಲ್ದಾಣದಲ್ಲಿ ಮಹಿಳೆಯರು ಮಕ್ಕಳು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದರು ಎನ್ನಲಾಗಿದೆ. 

Russia-Ukraine War : ಉಕ್ರೇನ್‌ ರೈಲ್ವೆ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ : 50ಕ್ಕೂ ಮಿಕ್ಕಿ ಸಾವು

ಕೀವ್(ಉಕ್ರೇನ್): ಉಕ್ರೇನ್‌ ಮೇಲೆ ರಷ್ಯಾ ಕರುಣೆ ತೋರಿಸುವಂತೆ ಕಾಣುತ್ತಿಲ್ಲ. ಇದೀಗ ಮತ್ತೆ ಪೂರ್ವ ಉಕ್ರೇನ್​ನ ರೈಲು ನಿಲ್ದಾಣವೊಂದರ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸಿದ್ದು, ಸುಮಾರು 50ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. 

ಇದನ್ನು ಓದಿ: Booster Dose: ಏ.10 ರಿಂದ 18 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್‌ ಡೋಸ್‌ ನೀಡಲು ಕೇಂದ್ರ ನಿರ್ಧಾರ

ಉಕ್ರೇನ್​ನಿಂದ ಬೇರೆಡೆಗೆ ಸ್ಥಳಾಂತರವಾಗಲು ರೈಲು ನಿಲ್ದಾಣದಲ್ಲಿ ಮಹಿಳೆಯರು ಮಕ್ಕಳು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದರು ಎನ್ನಲಾಗಿದೆ. ಉಕ್ರೇನ್ ನಗರವಾದ ಕ್ರಾಮಾಟೋರ್ಸ್ಕ್‌ನಲ್ಲಿರುವ ರೈಲು ನಿಲ್ದಾಣದ ಮೇಲೆ ರಷ್ಯಾ ಪಡೆ ಕ್ಷಿಪಣಿ ದಾಳಿ ನಡೆಸಿದೆ ಎಂದು ಉಕ್ರೇನ್ ಆರೋಪಿಸುತ್ತಿದ್ದು, ಈ ದಾಳಿಗೂ ತನಗೂ ಸಂಬಂಧವಿಲ್ಲ ಎಂದು ರಷ್ಯಾ ಸ್ಪಷ್ಟನೆ ನೀಡಿದೆ. 

ನಾಗರಿಕರನ್ನು ನಾವು ಗುರಿಯಾಗಿಸಿಕೊಂಡಿಲ್ಲ. ನಾಗರಿಕರ ಮೇಲೆ ದಾಳಿಗಳನ್ನು ನಡೆಸುತ್ತಿಲ್ಲ ಎಂದೇ ರಷ್ಯಾ ಹೇಳುತ್ತಿದೆ. ರೈಲು ನಿಲ್ದಾಣದ ಮೇಲೆ ದಾಳಿಯಂಥಹ ಸಾಕ್ಷ್ಯಗಳಿದ್ದರೂ, ರಷ್ಯಾ ನಾಗರಿಕರ ಮೇಲಿನ ದಾಳಿಯನ್ನು ಒಪ್ಪಿಕೊಳ್ಳುತ್ತಿಲ್ಲ ಎಂದು ಹೇಳಲಾಗುತ್ತಿದೆ. ಕ್ರಾಮಾಟೋರ್ಸ್ಕ್‌ನ ದಾಳಿಯ ಬಗ್ಗೆ ಕೆಲವೊಂದು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. 

ಇದನ್ನು ಓದಿ: ಲೇಟ್ ನೈಟ್ ಪಾರ್ಟಿ ಮಾಡುತ್ತಿದ್ದ 84 ಜನಕ್ಕೆ ಬಿಗ್ ಶಾಕ್ ನೀಡಿದ ಸಿಸಿಬಿ ಪೊಲೀಸರು

ಉಕ್ರೇನ್‌ನ ಉತ್ತರದಲ್ಲಿದ್ದ ರಷ್ಯಾದ ಪಡೆಗಳನ್ನು ಹಿಂತೆಗೆದುಕೊಂಡಿದ್ದು, ಅವುಗಳಲ್ಲಿ ಕೆಲವನ್ನು ಪೂರ್ವ ಡಾನ್‌ಬಾಸ್ ಪ್ರದೇಶಕ್ಕೆ ವರ್ಗಾಯಿಸಲಾಗುವುದು ಎಂದು ಬ್ರಿಟನ್​ನ ರಕ್ಷಣಾ ಸಚಿವಾಲಯ ಶುಕ್ರವಾರ ತಿಳಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More