Home> World
Advertisement

Satya Nadella: ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ಪುತ್ರ ವಿಧಿವಶ

ಮೈಕ್ರೋಸಾಫ್ಟ್ ಕಂಪನಿಯ ಸಿಇಒ ಸತ್ಯ ನಾಡೆಲ್ಲಾ ಅವರ ಪುತ್ರ ಜೈನ್ ನಾಡೆಲ್ಲಾ ಸೋಮವಾರ ಬೆಳಗ್ಗೆ ನಿಧನರಾಗಿದ್ದಾರೆ. ಸ್ವತಃ ಕಂಪನಿಯೇ ಈ ಮಾಹಿತಿಯನ್ನು ಇ-ಮೇಲ್ ಮೂಲಕ ತಮ್ಮ ಉದ್ಯೋಗಿಗಳಿಗೆ ತಿಳಿಸಿದೆ.

Satya Nadella: ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ಪುತ್ರ ವಿಧಿವಶ

ನವದೆಹಲಿ: ಸಾಫ್ಟ್ ವೇರ್ ದೈತ್ಯ  ಮೈಕ್ರೋಸಾಫ್ಟ್(Microsoft Corp) ಸಿಇಒ ಸತ್ಯ ನಾಡೆಲ್ಲಾ ಅವರ ಪುತ್ರ ವಿಧಿವಶರಾಗಿದ್ದಾರೆ. ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸತ್ಯ ನಾಡೆಲ್ಲಾ(Satya Nadella) ಅವರ ಪುತ್ರ ಜೈನ್ ನಾಡೆಲ್ಲಾ ಸೋಮವಾರ ಬೆಳಿಗ್ಗೆ ನಿಧನರಾದರು ಎಂದು ಕಂಪನಿಯು ಮಾಹಿತಿ ನೀಡಿದೆ. ಜೈನ್ ನಾಡೆಲ್ಲಾ ಅವರಿಗೆ ಕೇವಲ 26 ವರ್ಷ ವಯಸ್ಸಾಗಿತ್ತು ಮತ್ತು ಹುಟ್ಟಿನಿಂದಲೇ ಅವರಿಗೆ ಸೆರೆಬ್ರಲ್ ಪಾಲ್ಸಿ ಎಂಬ ಕಾಯಿಲೆ (Cerebral Palsy) ಇತ್ತು ಎಂದು ವರದಿಯಾಗಿದೆ.

ಇ-ಮೇಲ್ ಸಂದೇಶದ ಮೂಲಕ ಸಂತಾಪ

ಮೈಕ್ರೋಸಾಫ್ಟ್ ಕಂಪನಿಯು ತನ್ನ ಉದ್ಯೋಗಿಗಳಿಗೆ ಇ-ಮೇಲ್ ಮೂಲಕ ಸತ್ಯ ನಾಡೆಲ್ಲಾ ಪುತ್ರ ನಿಧನರಾಗಿರುವ ಮಾಹಿತಿಯನ್ನು ಹಂಚಿಕೊಂಡಿದೆ. ಸಾಫ್ಟ್‌ವೇರ್ ಕಂಪನಿಯು ತನ್ನ ಕಾರ್ಯನಿರ್ವಾಹಕ ಸಿಬ್ಬಂದಿಗೆ ಇ-ಮೇಲ್ ಮೂಲಕ ಜೈನ್ ನಾಡೆಲ್ಲಾ(Zain Nadella) ನಿಧನರಾಗಿದ್ದಾರೆ ಎಂದು ತಿಳಿಸಿದೆ. ಈ ಸಂದೇಶದಲ್ಲಿ ಸಂತಾಪ ಸೂಚಿಸಿರುವ ಕಂಪನಿ ನಾಡೆಲ್ಲಾ ಕುಟುಂಬಕ್ಕಾಗಿ ಪ್ರಾರ್ಥಿಸುವಂತೆ ಮನವಿ ಮಾಡಿದೆ.  

ಇದನ್ನೂ ಓದಿ: Video Viral:ಉಕ್ರೇನ್ ಬಂಕರ್‌ನಲ್ಲಿ ಅಡಗಿರುವ ಭಾರತೀಯ ವಿದ್ಯಾರ್ಥಿ.. ಸಾಕು ನಾಯಿ ಜತೆ ಸ್ಥಳಾಂತರಕ್ಕೆ ಮನವಿ

2014ರಲ್ಲಿ ಮೈಕ್ರೋಸಾಫ್ಟ್ ಕಂಪನಿ(Microsoft Corp)ಸಿಇಒ ಆಗಿ ಅಧಿಕಾರ ವಹಿಸಿಕೊಂಡಾಗಿನಿಂದ ಸತ್ಯ ನಾಡೆಲ್ಲಾ(Satya Nadella) ಅವರು ವಿಕಲಾಂಗ ಬಳಕೆದಾರರಿಗೆ ಉತ್ತಮ ಸೇವೆ ನೀಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದು, ಹೊಸ ಉತ್ಪನ್ನಗಳನ್ನು ವಿನ್ಯಾಸಗೊಳಿಸಲು ಒತ್ತು ನೀಡುತ್ತಿದ್ದಾರೆ.

ಕಳೆದ ವರ್ಷ ವಿಕಲಾಂಗ ಬಳಕೆದಾರರಿಗೆ ಉತ್ತಮ ಸೇವೆ ನೀಡಲು ಮಕ್ಕಳ ಆಸ್ಪತ್ರೆಯ(Children’s Hospital)  ಸಹಯೋಗದೊಂದಿಗೆ ಸಿಯಾಟಲ್ ಚಿಲ್ಡ್ರನ್ಸ್ ಸೆಂಟರ್ ಫಾರ್ ಇಂಟಿಗ್ರೇಟಿವ್ ಬ್ರೈನ್ ರಿಸರ್ಚ್‌ನ ಭಾಗವಾಗಿ ‘ಜೈನ್ ನಾಡೆಲ್ಲಾ ಎಂಡೋವ್ಡ್ ಚೇರ್ ಇನ್ ಪೀಡಿಯಾಟ್ರಿಕ್ ನ್ಯೂರೋಸೈನ್ಸ್’(Zain Nadella Endowed Chair in Pediatric Neurosciences) ಅನ್ನು ಸಹ ನಾಡೆಲ್ಲಾ ಸ್ಥಾಪಿಸಿದ್ದರು.

ಇದನ್ನೂ ಓದಿ: Ukraine Russia War : ಉಕ್ರೇನ್‌ಗೆ ಮುಂದಿನ 24 ಗಂಟೆ ತುಂಬಾ ಕಷ್ಟಕರ ಎಂದ ಅಧ್ಯಕ್ಷ ಝೆಲೆನ್ಸ್ಕಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More