Home> World
Advertisement

Knowledge Story: ಜೀನ್ಸ್ ಮೇಲಿನ ಸಣ್ಣ ಪಾಕೆಟ್ ಇರೋದು ಏಕೆ ಗೊತ್ತಾ?

ನೀವು ಜೀನ್ಸ್ ಧರಿಸುತ್ತಿದ್ದರೆ ಅದರ ಬಲಭಾಗದಲ್ಲಿ ಚಿಕ್ಕ ಕಿಸೆ(Small Pocket In Jeans) ಏಕಿರಬಹುದೆಂದು ಎಂದಾದರೂ ಯೋಚಿಸಿದ್ದೀರಾ..? ಜೀನ್ಸ್ ಪ್ಯಾಂಟಿನಲ್ಲಿ ಈ ಚಿಕ್ಕ ಪಾಕೆಟ್ ಹೇಗೆ ಬಂತು..? ಅಂತಾ ಬಹುತೇಕರಿಗೆ ತಿಳಿದಿರುವುದಿಲ್ಲ.

Knowledge Story: ಜೀನ್ಸ್ ಮೇಲಿನ ಸಣ್ಣ ಪಾಕೆಟ್ ಇರೋದು ಏಕೆ ಗೊತ್ತಾ?

ನವದೆಹಲಿ: ಜೀನ್ಸ್‌ ಎಂದಿಗೂ ‘ಔಟ್ ಆಫ್ ಫ್ಯಾಶನ್’ ಆಗಲು ಸಾಧ್ಯವಿಲ್ಲ. ಬಹುಶಃ ಈ ಜಗತ್ತು ಇರುವವರೆಗೂ ಜೀನ್ಸ್ ಫ್ಯಾಶನ್(Jeans Fashion) ಎಂಬುದು ಜೀವಂತವಾಗಿರುತ್ತದೆ. ನೀವು ಎಲ್ಲಾ ರೀತಿಯ ಕಾರ್ಯಕ್ರಮಗಳಲ್ಲಿ ಜೀನ್ಸ್ ಧರಿಸಬಹುದು. ಇಂದು ಬಹುತೇಕ ಜನರು ದಿನನಿತ್ಯ ಜೀನ್ಸ್ ಧರಿಸಲು ಇಷ್ಟಪಡುತ್ತಾರೆ. ಮಹಿಳೆಯರು, ಯುವಕರಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಜೀನ್ಸ್ ಮೋಹಕ್ಕೊಳಗಾಗಿದ್ದಾರೆ. ಜೀನ್ಸ್ ಅನ್ನು ಯಾವುದೇ ಬಟ್ಟೆಗಳೊಂದಿಗೆ ಧರಿಸಬಹುದು. ಇತ್ತೀಚಿನ ದಿನಗಳಲ್ಲಿ ಜೀನ್ಸ್ ವಿವಿಧ ವಿನ್ಯಾಸಗಳು, ಬಣ್ಣಗಳು ಮತ್ತು ಶೈಲಿಗಳಲ್ಲಿ ಬರುತ್ತಿದೆ. ಈ ಎಲ್ಲಾ ಕಾರಣಗಳಿಂದ ಇಂದು ಹೆಚ್ಚಿನ ಪ್ರಮಾಣದಲ್ಲಿ ಜೀನ್ಸ್ ಧರಿಸಲಾಗುತ್ತಿದೆ.

ನಿಮಗೆ ಗೊತ್ತೆ ಜೀನ್ಸ್ ಬಂದ ಪ್ರಾರಂಭದ ಕಾಲದಲ್ಲಿ ಅದರ ಬಗ್ಗೆ ಹೆಚ್ಚಿನವರಿಗೆ ಒಳ್ಳೆಯ ಅಭಿಪ್ರಾಯವಿರಲಿಲ್ಲ. ಸಮಯ ಕಳೆದಂತೆ ಮಹಿಳೆಯರೂ ಜೀನ್ಸ್ ಧರಿಸಲು ಆರಂಭಿಸಿದರು. ಈಗ ಜೀನ್ಸ್ ಇಲ್ಲದೆ ಜೀವನೇ ಇಲ್ಲವೆಂಬ ಪರಿಸ್ಥಿತಿ ಇದೆ. ನೀವು ಜೀನ್ಸ್ ಧರಿಸುತ್ತಿದ್ದರೆ ಅದರ ಬಲಭಾಗದಲ್ಲಿ ಚಿಕ್ಕ ಕಿಸೆ(Small Pocket In Jeans) ಏಕಿರಬಹುದೆಂದು ಎಂದಾದರೂ ಯೋಚಿಸಿದ್ದೀರಾ..? ಜೀನ್ಸ್ ಪ್ಯಾಂಟಿನಲ್ಲಿ ಈ ಚಿಕ್ಕ ಪಾಕೆಟ್ ಹೇಗೆ ಬಂತು..? ಅಂತಾ ಬಹುತೇಕರಿಗೆ ತಿಳಿದಿರುವುದಿಲ್ಲ. ಜನರು ಇದನ್ನು  ವಿವಿಧ ಉದ್ದೇಶಗಳಿಗಾಗಿ ಬಳಸುತ್ತಾರೆ. ಅಲ್ಲದೆ ಜೀನ್ಸ್ ಪಾಕೆಟ್ ನ ಮೂಲೆಗಳಲ್ಲಿ ಸಣ್ಣ ಬಟನ್ ಗಳು ಕೂಡ ವೆ. ನಾವು ಇವು ಫ್ಯಾಶನ್ ಬಟನ್ ಎಂದು ಅಂದುಕೊಂಡಿರುತ್ತೇವೆ. ಆದರೆ ಈ ಬಟನ್ ಗಳು ಫ್ಯಾಷನ್ ಗಾಗಿ ಇಟ್ಟಿಲ್ಲ. ಇದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: Viral Online Marriage: Facebook ನಲ್ಲಿ ಹುಟ್ಟಿದ ಪ್ರೀತಿ, Video Call ಮೂಲಕ ವಿವಾಹ, ಮಿಲನ ಇನ್ನೂ ಬಾಕಿ

ಸಣ್ಣ ಪಾಕೆಟ್ಸ್ ಹಾಕಲು ಇದು ಕಾರಣ

fallbacks

ವಾಸ್ತವವಾಗಿ ಜೀನ್ಸ್ ಅನ್ನು ಗಣಿಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗಾಗಿ ಕಂಡುಹಿಡಿಯಲಾಯಿತು. ಆ ಸಮಯದಲ್ಲಿ ಪಾಕೆಟ್ ವಾಚ್(Pocket watch) ಟ್ರೆಂಡ್ ಇತ್ತು. ಹೀಗಿರುವಾಗ ಕಾರ್ಮಿಕರು ಮುಂಬದಿಯ ಜೇಬಿನಲ್ಲಿ ಇಟ್ಟರೆ ಒಡೆದುಹೋಗುವ ಭೀತಿ ಎದುರಾಗುತ್ತಿತ್ತು. ಈ ಸಮಸ್ಯೆಗೆ ಪರಿಹಾರವಾಗಿ ಸಣ್ಣ ಪಾಕೆಟ್ ಅನ್ನು ಜೀನ್ಸ್ ನಲ್ಲಿ ಸೃಷ್ಟಿಮಾಡಲಾಯಿತು. ಕ್ರಮೇಣ ಇದು ಜೀನ್ಸ್‌ ನ ಪ್ರಮುಖ ಭಾಗವಾಯಿತು ಮತ್ತು ಇಂದಿನ ಯುಗದಲ್ಲಿ ಅದು ಫ್ಯಾಶನ್ ಆಗಿ ಮಾರ್ಪಟ್ಟಿದೆ. ಜೀನ್ಸ್ ತಯಾರಕ ಲೆವಿ ಸ್ಟ್ರಾಸ್ (ಲೆವಿಸ್) ಪ್ರಕಾರ, ಇದು ವಾಚ್ ಪಾಕೆಟ್ ಮತ್ತು ಮೊದಲ ಜೀನ್ಸ್ ನಲ್ಲಿ 4 ಪಾಕೆಟ್‌ಗಳನ್ನು ಹಾಕಲಾಗಿತ್ತು ಎಂದು ತಿಳಿಸಿದೆ.     

ಸಣ್ಣ ಪಾಕೆಟ್ ಗುಂಡಿಗಳು

ಪಾಕೆಟ್‌ನ ಬದಿಯಲ್ಲಿರುವ ಸಣ್ಣ ಗುಂಡಿಗಳ ರಹಸ್ಯವು ಜೀನ್ಸ್‌ ನ ಇತಿಹಾಸ(Jeans History)ದೊಂದಿಗೆ ಸಹ ಸಂಬಂಧಿಸಿದೆ. ವಾಸ್ತವವಾಗಿ ಜೀನ್ಸ್‌ ನ ಬಟ್ಟೆಯು ಒರಟು ಮತ್ತು ಕಠಿಣವಾಗಿರುವುದರಿಂದ ಸುಲಭವಾಗಿ ಹರಿದು ಹೋಗುವುದಿಲ್ಲ. ಆದರೆ ಕಾರ್ಮಿಕರು ಅದರ ಜೇಬಿನ ಬಗ್ಗೆ ತಕರಾರು ಹೊಂದಿದ್ದರು. ಪ್ಯಾಂಟಿನ ಜೇಬುಗಳು ಬೇಗ ಹರಿದ ಪರಿಣಾಮ ಏನಾದರೂ ಮಾಡುವಂತೆ ಕೇಳಿಕೊಂಡಿದ್ದರು. ಟೇಲರ್ ಜಾಕೋಬ್ ಡೇವಿಸ್, ಜೀನ್ಸ್‌ ನ ಪಾಕೆಟ್‌ಗಳ ಬದಿಗಳಲ್ಲಿ ಸಣ್ಣ ಲೋಹದ ಗುಂಡಿಗಳನ್ನು ಅಳವಡಿಸಿದನು. ಈ ಗುಂಡಿಗಳನ್ನು ರಿವೆಟ್(Rivets Pocket) ಎಂದು ಕರೆಯಲಾಗುತ್ತದೆ. ಇದರೊಂದಿಗೆ ಇನ್ನೊಂದು ಕುತೂಹಲಕಾರಿ ಕಥೆಯಿದೆ. ವಾಸ್ತವವಾಗಿ ಜೀನ್ಸ್ ಗೆ ಈ ಗುಂಡಿಗಳನ್ನು ಹಾಕಲು ಜಾಕೋಬ್ ಬಳಿ ಹಣವಿರಲಿಲ್ಲ. ಆಗ ಅವರು ಲೆವಿಸ್ ಸ್ಟ್ರಾಸ್(Levi Strauss) ಅವರಿಗೆ ಪತ್ರ ಬರೆಯುವ ಮೂಲಕ ಈ ಆವಿಷ್ಕಾರದ ಬಗ್ಗೆ ತಿಳಿಸಿದರು. ಬಳಿಕ ಲೆವಿಸ್ ಲೋಹದ ಭಾಗಗಳನ್ನು ತಾಮ್ರದ ಗುಂಡಿಗಳೊಂದಿಗೆ ಬದಲಾಯಿಸಿದರು.  

ಇದನ್ನೂ ಓದಿ: Trending News: ನಗರಕ್ಕಪ್ಪಳಿಸಿದ ಭೀಕರ ಬಿರುಗಾಳಿ, ಬಳಿಕ ನಡೆದ ಚೇಳುಗಳ ದಾಳಿಗೆ 500 ಜನ ಅಸ್ವಸ್ಥ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More