Home> World
Advertisement

Swiss Bank ಇನ್ಮುಂದೆ ಭಾರತ ಸರ್ಕಾರದ ಜೊತೆಗೆ ಈ ಮಾಹಿತಿಯನ್ನೂ ಕೂಡ ಹಂಚಿಕೊಳ್ಳಲಿದೆ, ' Black Money' ಹೊಂದಿದವರಲ್ಲಿ ನಡುಕ ಆರಂಭ

Swiss Bank Account Holders Indians Name  - ಸ್ವಿಟ್ಜರ್ಲೆಂಡ್ ಮೂರನೇ ಬಾರಿಗೆ ಈ ವಿವರಗಳನ್ನು ಭಾರತದೊಂದಿಗೆ ಹಂಚಿಕೊಳ್ಳಲಿದೆ. ಈ ಹಿಂದೆ, ಅದು ಇಂತಹ  ಮಾಹಿತಿಯನ್ನು ಸೆಪ್ಟೆಂಬರ್ 2019 ಮತ್ತು ಸೆಪ್ಟೆಂಬರ್ 2020 ರಲ್ಲಿ ಹಂಚಿಕೊಂಡಿತ್ತು

Swiss Bank ಇನ್ಮುಂದೆ ಭಾರತ ಸರ್ಕಾರದ ಜೊತೆಗೆ ಈ ಮಾಹಿತಿಯನ್ನೂ ಕೂಡ  ಹಂಚಿಕೊಳ್ಳಲಿದೆ, ' Black Money' ಹೊಂದಿದವರಲ್ಲಿ ನಡುಕ ಆರಂಭ

Swiss Bank Account Holders Indians Name - ಸ್ವಿಸ್ ಬ್ಯಾಂಕಿನಲ್ಲಿ (Swiss Bank)  ಖಾತೆ ಹೊಂದಿರುವ ಭಾರತೀಯರ ಮಾಹಿತಿಯನ್ನು ಸ್ವಿಟ್ಜರ್ಲೆಂಡ್ (Switzerland) ಈ ತಿಂಗಳು ಭಾರತ ಸರ್ಕಾರಕ್ಕೆ ಹಸ್ತಾಂತರಿಸಲಿದೆ. ಇದರಲ್ಲಿ ಇದೇ ಮೊದಲ ಬಾರಿಗೆ ಯುರೋಪಿಯನ್ ದೇಶದಲ್ಲಿ ಭಾರತೀಯರ (India) ಒಡೆತನದ ಆಸ್ತಿಯ ಮಾಹಿತಿಯನ್ನು ಒಳಗೊಂಡಿರಲಿದೆ. ಅಧಿಕಾರಿಗಳು ಭಾನುವಾರ ಈ ಮಾಹಿತಿ ಹಂಚಿಕೊಂಡಿದ್ದಾರೆ. ಸ್ವಿಟ್ಜರ್ಲೆಂಡ್ ಮೂರನೇ ಬಾರಿಗೆ ಈ ವಿವರಗಳನ್ನು ಭಾರತದೊಂದಿಗೆ ಹಂಚಿಕೊಳ್ಳಲಿದೆ. ಈ ಹಿಂದೆ, ಅದು ಈ ಮಾಹಿತಿಯನ್ನು ಸೆಪ್ಟೆಂಬರ್ 2019 ಮತ್ತು ಸೆಪ್ಟೆಂಬರ್ 2020 ರಲ್ಲಿ ಹಂಚಿಕೊಂಡಿತ್ತು.

ವಿದೇಶದಲ್ಲಿ ಅಡಗಿದೆ ಎನ್ನಲಾದ ಕಪ್ಪು ಹಣದ (Black Money) ವಿರುದ್ಧ ಭಾರತ ಸರ್ಕಾರದ (Modi Government) ಹೋರಾಟದ ಮಹತ್ವದ ಹೆಜ್ಜೆಯಲ್ಲಿ, ಭಾರತವು ಈ ತಿಂಗಳು ಸ್ವಿಟ್ಜರ್‌ಲ್ಯಾಂಡ್‌ನಲ್ಲಿರುವ ಭಾರತೀಯರ ಮಾಲೀಕತ್ವದ ಫ್ಲಾಟ್‌ಗಳು, ಅಪಾರ್ಟ್‌ಮೆಂಟ್‌ಗಳು ಮತ್ತು ಮನೆಗಳ ಸಂಪೂರ್ಣ (Real Estate Assets)ವಿವರಗಳನ್ನು ಪಡೆಯಲಿದೆ. ಭಾರತವು ಇಂತಹ ಆಸ್ತಿಗಳಿಂದಾಗುವ ಗಳಿಕೆಯ ಬಗ್ಗೆ ಮಾಹಿತಿಯನ್ನು ಸಹ ಪಡೆಯಲಿದೆ. ಇದು ಆ ಸ್ವತ್ತುಗಳಿಗೆ ಸಂಬಂಧಿಸಿದ ತೆರಿಗೆ ಹೊಣೆಗಾರಿಕೆಗಳ ಮೇಲೆ ತನ್ನ ಗಮನ ಕೇಂದ್ರೀಕರಿಸಲು ಭಾರತಕ್ಕೆ ಸಹಾಯ ಮಾಡಲಿದೆ. 

ಸ್ವಿಟ್ಜರ್‌ಲ್ಯಾಂಡ್‌ ವತಿಯಿಂದ ಮಾಡಲಾಗುತ್ತಿರುವ ಈ ಕೆಲಸ ಜಾಗತಿಕ ಆರ್ಥ ವ್ಯವಸ್ಥೆಯ  (Global Economy System) ದೃಷ್ಟಿಯಿಂದ ಭಾರಿ ಮಹತ್ವದ ಕೆಲಸವಾಗಿದೆ. ಏಕೆಂದರೆ ಇದರಿಂದ ಅದು ತನ್ನ ಬ್ಯಾಂಕಿಂಗ್ ವ್ಯವಸ್ಥೆ ಕಪ್ಪು ಹಣಕ್ಕೆ ಸುರಕ್ಷಿತ ತಾಣವಾಗಿದೆ ಎಂಬ ದೀರ್ಘಕಾಲದ ಅಪಾದನೆಯನ್ನು ತೊಡೆದು ಹಾಕಿ, ಸ್ವಿಟ್ಜರ್ಲ್ಯಾಂಡ್ ಜಾಗತಿಕ ಆರ್ಥಿಕತೆಯ ಒಂದು ಪ್ರಮುಖ ಕೇಂದ್ರವಾಗಿದೆ ಎಂಬುದನ್ನು ಪುನಃಸ್ಥಾಪಿಸುವಲ್ಲಿ ಶ್ರಮಿಸುತ್ತಿದೆ ಎಂಬುದನ್ನು ಎತ್ತಿ ತೋರಿಸುತ್ತದೆ. ಸ್ವಿಟ್ಜರ್‌ಲ್ಯಾಂಡ್‌ನಲ್ಲಿರುವ ಭಾರತೀಯರ ಬ್ಯಾಂಕ್ ಖಾತೆಗಳು ಮತ್ತು ಇತರ ಸ್ವತ್ತುಗಳ ಬಗ್ಗೆ ಭಾರತವು ಮೂರನೇ ಬಾರಿಗೆ ವಿವರಗಳನ್ನು ಪಡೆಯುತ್ತಿದೆ. ಆದರೆ ಭಾರತದೊಂದಿಗೆ ಹಂಚಿಕೊಳ್ಳುತ್ತಿರುವ ಮಾಹಿತಿಯು ಸ್ಥಿರ ಆಸ್ತಿಯ ಮಾಹಿತಿಯನ್ನು ಒಳಗೊಂಡಿರುವುದು ಇದೇ ಮೊದಲ ಬಾರಿಯಾಗಿದೆ.

ಆಸ್ತಿಗಳ ಮಾಹಿತಿಯನ್ನು ಹಂಚಿಕೊಳ್ಳಲು ಸಿದ್ಧವಾಗಿದೆ ಸ್ವಿಸ್ ಸರ್ಕಾರ
ಈ ಕುರಿತು ಹೇಳಿಕೆ ನೀಡಿರುವ ಅಧಿಕಾರಿಗಳು, ಒಂದೆಡೆ ಸ್ವಿಟ್ಜರ್ಲ್ಯಾಂಡ್ ಸರ್ಕಾರ  ರಿಯಲ್ ಎಸ್ಟೇಟ್  ಮಾಹಿತಿಯನ್ನು ಹಂಚಿಕೊಳ್ಳಲು ಸಿದ್ಧವಾಗಿದ್ದರೂ ಕೂಡ ಲಾಭಕಾರಿಯಲ್ಲದ ಸಂಸ್ಥೆಗಳು ಮತ್ತು ಇತರೆ ಸಂಸ್ಥೆಗಳ ಕೊಡುಗೆಗಳ ಮಾಹಿತಿ ಹಾಗೂ ಡಿಜಿಟಲ್ ಕರೆನ್ಸಿಗಳಲ್ಲಿನ ಹೂಡಿಕೆಗಳ ವಿವರಗಳು ಇತ್ಯಾದಿಗಳು  ಸ್ವಯಂಚಾಲಿತ ಮಾಹಿತಿ ವಿನಿಮಯದ ಈ ಸಂರಚನೆಯಿಂದ ಹೊರಗುಳಿಯಲಿವೆ ಎಂದು ಹೇಳಿದ್ದಾರೆ. ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಹೂಡಿಕೆಗಳನ್ನು ಆಕರ್ಷಿಸುವ ವ್ಯವಹಾರದಲ್ಲಿ ತೊಡಗಿರುವ ತಜ್ಞರು ಮತ್ತು ಸ್ವಿಸ್ ಆಸ್ತಿಗೆ ಹರಿಯುವ ಎಲ್ಲಾ ಹಣದ ಅಕ್ರಮದ ಬಗೆಗಿನ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಮತ್ತು ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಸೇರಿದಂತೆ ದೇಶವನ್ನು ಆದ್ಯತೆಯ ಹೂಡಿಕೆ ತಾಣವನ್ನಾಗಿ ಮಾಡಲು ಇದು ಸಹಾಯ ಮಾಡುತ್ತದೆ ಎಂದು ಅವರು ಹೇಳುತ್ತಾರೆ.

ಇದನ್ನೂ ಓದಿ-Government Scheme: ಅದ್ಭುತ ಸರ್ಕಾರಿ ಯೋಜನೆ, ನಿತ್ಯ ಕೇವಲ ರೂ.200 ಉಳಿತಾಯ ಮಾಡಿ 20 ಲಕ್ಷ ರೂ.ಗಳ ಮಾಲೀಕರಾಗಿ

ಇದಕ್ಕೂ ಮೊದಲು ಎರಡು ಬಾರಿ ಭಾರತಕ್ಕೆ ಈ ಮಾಹಿತಿ ಲಭಿಸಿದೆ
AEOI ಅಂದರೆ,ಸ್ವಯಂಚಾಲಿತ ಮಾಹಿತಿ ವಿನಿಮಯ  ಅಡಿಯಲ್ಲಿ ಭಾರತವು ಮೊದಲ ಬಾರಿಗೆ ಸೆಪ್ಟೆಂಬರ್ 2019 ರಲ್ಲಿ ಸ್ವಿಟ್ಜರ್ಲೆಂಡ್‌ನಿಂದ ಇಂತಹ ವಿವರಗಳನ್ನು ಪಡೆದುಕೊಂಡಿತ್ತು. ಆ ವರ್ಷ, ಭಾರತವು 75 ದೇಶಗಳಲ್ಲಿನ  ಇಂತಹ ವಿವರಗಳ ಮಾಹಿತಿ ಪಡೆದಿತ್ತು. ಇದರ ನಂತರ, ಸೆಪ್ಟೆಂಬರ್ 2020 ರಲ್ಲಿ, ಭಾರತವು ಇತರ 85 ದೇಶಗಳಲ್ಲಿ ತನ್ನ ನಾಗರಿಕರ ಮತ್ತು ಘಟಕಗಳ ಸ್ವಿಸ್ ಬ್ಯಾಂಕ್ ಖಾತೆಗಳ ವಿವರಗಳನ್ನು ಎರಡನೇ ಬಾರಿಗೆ ಪಡೆದುಕೊಂಡಿತ್ತು. ಈ ವರ್ಷದಿಂದ, ಫೆಡರಲ್ ಕೌನ್ಸಿಲ್, ಸ್ವಿಟ್ಜರ್ಲೆಂಡ್‌ನ ಅತ್ಯುನ್ನತ ಆಡಳಿತ ಮಂಡಳಿ, 'ಪಾರದರ್ಶಕತೆ ಮತ್ತು ತೆರಿಗೆ ಉದ್ದೇಶಗಳಿಗಾಗಿ ಮಾಹಿತಿ ವಿನಿಮಯದ ಜಾಗತಿಕ ವೇದಿಕೆ' ಯ ಪ್ರಮುಖ ಶಿಫಾರಸನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ. ಇದರ ಅಡಿಯಲ್ಲಿ ಸ್ವಿಸ್ ಅಧಿಕಾರಿಗಳು ವಿದೇಶಿಯರ ಪ್ರಮುಖ ಶಿಫಾರಸನ್ನು ಜಾರಿಗೆ ತರಲು ನಿರ್ಧರಿಸಿದ್ದಾರೆ  ಮತ್ತು ದೇಶದಲ್ಲಿ ವಿದೇಶಿಗರ ಮೂಲಕ ಮಾಡಲಾದ  ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿನ ಹೂಡಿಕೆಯ ಬಗ್ಗೆ ವಿವರಗಳನ್ನು ಹಂಚಿಕೊಳ್ಳಲಿದ್ದಾರೆ.

ಇದನ್ನೂ ಓದಿ-SBI Alert : ನಾಳೆ ಸ್ಥಗಿತಗೊಳ್ಳಲಿದೆ ಬ್ಯಾಂಕ್ ಸೇವೆ , ಯಾವುದೇ ವಹಿವಾಟು ನಡೆಸುವುದು ಸಾಧ್ಯವಿಲ್ಲ , ಸಂಪೂರ್ಣ ಮಾಹಿತಿ ಇಲ್ಲಿದೆ

ಡಿಜಿಟಲ್ ಕರೆನ್ಸಿಗಳಲ್ಲಿ ಮಾಡಲಾಗಿರುವ ಹೂಡಿಕೆಯ ವಿವರ ಬರಲು ವಿಳಂಬವಾಗಲಿದೆ
ಆದರೆ, ಇದುವರೆಗೆ ಜಾಗತಿಕ ವೇದಿಕೆ ಮಾಡಿರುವ  ಕೆಲ ಇತರ ಶಿಫಾರಸುಗಳನ್ನು ಇನ್ನೂ ಅಂಗೀಕರಿಸಲಾಗಿಲ್ಲ, ಡಿಜಿಟಲ್ ಕರೆನ್ಸಿ ಖಾತೆಗಳ ಮಾಹಿತಿ ಮತ್ತು ಲಾಭರಹಿತ ಸಂಸ್ಥೆಗಳು ಮತ್ತು ಇತರ ಸಂಸ್ಥೆಗಳಿಗೆ ದೇಣಿಗೆಗಳು ಇದರಲ್ಲಿ ಶಾಮೀಲಾಗಿವೆ. ಸ್ವಿಟ್ಜರ್‌ಲ್ಯಾಂಡ್ ಪ್ರಸ್ತುತ ಭಾರತ ಅಥವಾ ಯಾವುದೇ ಇತರ ದೇಶಗಳೊಂದಿಗೆ ಈ ವಿವರಗಳನ್ನು ಹಂಚಿಕೊಳ್ಳುವುದಿಲ್ಲ ಎನ್ನಲಾಗಿದೆ. ಡಿಜಿಟಲ್ ಕರೆನ್ಸಿ ಖಾತೆಗಳು ಮತ್ತು ಲಾಭೋದ್ದೇಶವಿಲ್ಲದವರಿಗೆ ದೇಣಿಗೆಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಲು ಸ್ವಿಟ್ಜರ್ಲೆಂಡ್ ಮನವೊಲಿಸಲು ಜಾಗತಿಕವಾಗಿ ತೀವ್ರ ಪ್ರಯತ್ನಗಳು ನಡೆಯುತ್ತಿವೆ ಎಂಬುದು ಇಲ್ಲಿ ಗಮನಾರ್ಹ.

ಇದನ್ನೂ ಓದಿ-ಪ್ಯಾನ್ ಕಾರ್ಡ್ ಬಳಕೆದಾರರ ಗಮನಕ್ಕೆ! ಮರೆತು ಕೂಡ ಈ ತಪ್ಪನ್ನು ಮಾಡಬೇಡಿ, ಬೀಳಲಿದೆ 10 ಸಾವಿರ ದಂಡ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More