Home> World
Advertisement

ರಷ್ಯಾದ ಮೇಲಿನ ಅಮೆರಿಕ ನಿರ್ಬಂಧಗಳು ಭಾರತೀಯ ವಾಯುಪಡೆಯ ಮೇಲೆ ಹೇಗೆ ಪರಿಣಾಮ ಬೀರುತ್ತವೆ?

ಉಕ್ರೇನ್ ಮೇಲಿನ ರಷ್ಯಾ ದಾಳಿಯ ನಂತರ ಅಮೆರಿಕ ಹೇರಿದ ನಿರ್ಬಂಧಗಳ ಬಗ್ಗೆ ಏರ್ ಮಾರ್ಷಲ್ ಸಂದೀಪ್ ಸಿಂಗ್ ಅವರು ರಷ್ಯಾದೊಂದಿಗಿನ ನಮ್ಮ ಸಂಬಂಧಗಳು ಹಾಗೇ ಇರುತ್ತವೆ ಎಂದು ಹೇಳಿದ್ದಾರೆ. ರಷ್ಯಾ ಮತ್ತು ಅಮೆರಿಕದೊಂದಿಗೆ ಭಾರತದ ಸಂಬಂಧ ಗಟ್ಟಿಯಾಗಿದೆ ಎಂದು ಬಣ್ಣಿಸಿದ್ದಾರೆ.

ರಷ್ಯಾದ ಮೇಲಿನ ಅಮೆರಿಕ ನಿರ್ಬಂಧಗಳು ಭಾರತೀಯ ವಾಯುಪಡೆಯ ಮೇಲೆ ಹೇಗೆ ಪರಿಣಾಮ ಬೀರುತ್ತವೆ?

ನವದೆಹಲಿ: ಉಕ್ರೇನ್ ಮೇಲೆ ಸೇನಾ ದಾಳಿ ನಡೆಸುತ್ತಿರುವ ರಷ್ಯಾ(Russian Ukraine War) ಮೇಲೆ ಅಮೆರಿಕ ಹೇರಿರುವ ನಿರ್ಬಂಧಗಳಿಂದ ಭಾರತೀಯ ವಾಯುಸೇನೆಗೆ ಹೆಚ್ಚಿನ ತೊಂದರೆಯಾಗುವುದಿಲ್ಲ. ಭಾರತವು ಉಭಯ ದೇಶಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದೆ ಎಂದು ವಾಯುಪಡೆಯ ಉಪಾಧ್ಯಕ್ಷ ಏರ್ ಮಾರ್ಷಲ್ ಸಂದೀಪ್ ಸಿಂಗ್(Air Marshal Sandeep Singh) ಹೇಳಿದ್ದಾರೆ. ಈ ಸಮಯದಲ್ಲಿ ಭೌಗೋಳಿಕ ರಾಜಕೀಯ ಪರಿಸ್ಥಿತಿ ಕಷ್ಟಕರವಾಗಿದೆ ಎಂದು ನಮಗೆ ತಿಳಿದಿದೆ. ರಷ್ಯಾದೊಂದಿಗಿನ ನಮ್ಮ ಸಂಬಂಧಗಳು ಮೊದಲಿದ್ದ ಹಾಗೆಯೇ ಇರುತ್ತವೆ ಅಂತಾ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ಏರ್ ಮಾರ್ಷಲ್ ಸಂದೀಪ್ ಸಿಂಗ್(Air Marshal Sandeep Singh), ಫೆಬ್ರವರಿ 24ರಂದು ರಷ್ಯಾ ಉಕ್ರೇನ್ ವಿರುದ್ಧ ಮಿಲಿಟರಿ ದಾಳಿಯನ್ನು ಪ್ರಾರಂಭಿಸಿತು. ಈ ದಾಳಿಯ ನಂತರ ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯ ದೇಶಗಳು ರಷ್ಯಾದ ಮೇಲೆ ಕಠಿಣ ಆರ್ಥಿಕ ಮತ್ತು ಇತರ ನಿರ್ಬಂಧಗಳನ್ನು ವಿಧಿಸಿವೆ. ಯುದ್ಧಪರಿಸ್ಥಿತಿ ಮುಂದುವರೆದಿದೆ. ಸದ್ಯಕ್ಕೆ ಯುದ್ಧಪೀಡಿತ ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುವ ಪ್ರಯತ್ನಗಳು ನಡೆಯುತ್ತಿವೆ ಅಂತಾ ಹೇಳಿದ್ದಾರೆ.  

ಇದನ್ನೂ ಓದಿ: ಭಾರತೀಯ ವಿದ್ಯಾರ್ಥಿಗಳು ವೈದ್ಯಕೀಯ ವಿದ್ಯಾಭ್ಯಾಸಕ್ಕಾಗಿ ಉಕ್ರೇನ್ ಅನ್ನೇ ಏಕೆ ಆಯ್ಕೆ ಮಾಡುತ್ತಾರೆ?

ಉಭಯ ದೇಶಗಳೊಂದಿಗೆ ಗಟ್ಟಿ ಸಂಬಂಧ

ರಷ್ಯಾದ ಮೇಲೆ ಅಮೆರಿಕದ ನಿರ್ಬಂಧ(US Sanctions On Russia)ಗಳಿಂದ ಭಾರತೀಯ ವಾಯುಪಡೆಯ ಮೇಲೆ ಯಾವುದೇ ರೀತಿಯ ಪರಿಣಾಮ ಬೀರಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ವ್ಯಾಪಕ ಮಾತುಕತೆಯಾಗುತ್ತಿವೆ. ನಾವು ಕೂಡ ಈ ಬಗ್ಗೆ ಚರ್ಚಿಸುತ್ತಿದ್ದೇವೆ. ನಾವು ಬಹಳ ಬಲವಾದ ಸ್ಥಾನವನ್ನು ಹೊಂದಿದ್ದೇವೆ ಮತ್ತು ಉಭಯ ದೇಶಗಳೊಂದಿಗಿನ ನಮ್ಮ ಸಂಬಂಧಗಳು ಗಟ್ಟಿಯಾಗಿವೆ ಅಂತಾ ಸಿಂಗ್ ಹೇಳಿದ್ದಾರೆ.

ಹೆಚ್ಚು ಪರಿಣಾಮ ಬೀರುವುದಿಲ್ಲ

ನಾವು ಪರಿಸ್ಥಿತಿಯನ್ನು ಮೌಲ್ಯಮಾಪನ ಮಾಡುತ್ತಿದ್ದೇವೆ ಎಂದು ಹೇಳಿರುವ ಅವರು, ಕೆಲವು ತೊಂದರೆಗಳು ಇರುವುದರಲ್ಲಿ ಸಂದೇಹವಿಲ್ಲ. ಆದರೆ ಅವು ನಮ್ಮ ಮೇಲೆ ಹೆಚ್ಚು ಪರಿಣಾಮ ಬೀರಬಾರದೆಂದು ನಾವು ಭಾವಿಸುತ್ತೇವೆ. ಇದರಿಂದ ನಮ್ಮ ಮೇಲೆ ಹೆಚ್ಚಿನ ಪರಿಣಾಮ(Indian Air Force) ಬೀರುವುದಿಲ್ಲವೆಂದು ನಮಗೆ ಖಾತ್ರಿಯಿದೆ. ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ನಾಗರಿಕರನ್ನು ಸ್ಥಳಾಂತರಿಸಲು 3 ವಿಮಾನಗಳು ತೆರಳಿವೆ ಎಂದು ಭಾರತೀಯ ವಾಯುಪಡೆಯ ಉಪಮುಖ್ಯಸ್ಥರು ತಿಳಿಸಿದ್ದಾರೆ.

ಇದನ್ನೂ ಓದಿ: ರಷ್ಯಾದ ಕ್ಷಿಪಣಿ ದಾಳಿಗೆ ಹೊತ್ತಿ ಉರಿದ ಉಕ್ರೇನ್ ಸರ್ಕಾರದ ಮುಖ್ಯಕಚೇರಿ

ತೆರವು ಕಾರ್ಯಾಚರಣೆ ಮುಂದುವರಿಯುತ್ತದೆ

ಭಾರತೀಯರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ನಾವು ಪ್ರತಿದಿನ 4 ವಿಮಾನಗಳನ್ನು ಕಳುಹಿಸಿಕೊಡುತ್ತಿದ್ದೇವೆ. ಉಕ್ರೇನ್(Ukraine)ನಲ್ಲಿ ಸಿಲುಕಿರುವ ಎಲ್ಲಾ ಭಾರತೀಯರನ್ನು ವಾಪಸ್ ಕರೆತರುವವರೆಗೂ ಹಗಲು ರಾತ್ರಿ ತೆರವು ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಅವರು ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More