Home> World
Advertisement

‘You Are Next’: ಸಲ್ಮಾನ್ ರಶ್ದಿ ಬಳಿಕ ಹ್ಯಾರಿ ಪಾಟರ್ ಲೇಖಕಿಗೆ ಬಂತು ಕೊಲೆ ಬೆದರಿಕೆ

ಟ್ವಿಟರ್‌ನಲ್ಲಿ ರಶ್ದಿ ಮೇಲಿನ ದಾಳಿಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಘಟನೆಯಿಂದ ನನಗೆ ತೀವ್ರ ದುಃಖವಾಗಿದೆ ಎಂದು ಹೇಳಿದ್ದರು. 

‘You Are Next’: ಸಲ್ಮಾನ್ ರಶ್ದಿ ಬಳಿಕ ಹ್ಯಾರಿ ಪಾಟರ್ ಲೇಖಕಿಗೆ ಬಂತು ಕೊಲೆ ಬೆದರಿಕೆ

ಇತ್ತೀಚೆಗೆಯಷ್ಟೇ ಖ್ಯಾತ ಬರಹಗಾರ ಸಲ್ಮಾನ್ ರಶ್ದಿ ಅವರ ಮೇಲೆ ಮಾರಣಾಂತಿಕ ದಾಳಿ ನಡೆದಿದೆ. ಇದೀಗ ಹ್ಯಾರಿ ಪಾಟರ್ ಲೇಖಕಿ ಜೆಕೆ ರೌಲಿಂಗ್‌ಗೆ ಸಹ ಕೊಲೆ ಬೆದರಿಕೆಗಳು ಬಂದಿದ್ದು, ‘ಯು ಆರ್ ನೆಕ್ಸ್ಟ್’ ಎಂಬ ಸಂದೇಶ ರವಾನಿಸಲಾಗಿದೆ. ಸಲ್ಮಾನ್ ರಶ್ದಿ ಮೇಲಿನ ದಾಳಿಯನ್ನು ರೌಲಿಂಗ್ ಖಂಡಿಸಿದ್ದರು. ಇದಕ್ಕೆ ರೌಲಿಂಗ್ ಟ್ವಿಟರ್‌ನಲ್ಲಿ ಬಳಕೆದಾರರಿಂದ ಬೆದರಿಕೆ ಸಂದೇಶದ ಸ್ಕ್ರೀನ್‌ಶಾಟ್ ಬಂದಿದೆ.

ಇದನ್ನೂ ಓದಿ: ಬಿಜೆಪಿ ವಿರುದ್ಧ ಕಾಂಗ್ರೆಸ್ ಸೇರಿ 11 ವಿಪಕ್ಷಗಳಿಂದ ಮಾಸ್ಟರ್ ಪ್ಲಾನ್! ಏನು ಗೊತ್ತಾ?

ಟ್ವಿಟರ್‌ನಲ್ಲಿ ರಶ್ದಿ ಮೇಲಿನ ದಾಳಿಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಘಟನೆಯಿಂದ ನನಗೆ ತೀವ್ರ ದುಃಖವಾಗಿದೆ ಎಂದು ಹೇಳಿದ್ದರು. 

ಸಲ್ಮಾನ್ ರಶ್ದಿ ಮೇಲಿನ ದಾಳಿಯಿಂದ ನನಗೆ ಅತೀವ ದುಃಖವಾಗಿದೆ” ಎಂದು ಜೆಕೆ ರೌಲಿಂಗ್ ಹೇಳಿದ್ದರು. ಕಾದಂಬರಿಕಾರರು ಬೇಗ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದರು. ಇದಕ್ಕೆ ರೌಲಿಂಗ್ ಅವರ ಟ್ವೀಟ್‌ಗೆ ಬಳಕೆದಾರರು ಬೆದರಿಕೆಯ ಕಾಮೆಂಟ್ ಮಾಡಿದ್ದಾರೆ. ಬಳಕೆದಾರ, 'ನೀವು ಮುಂದಿನವರು, ಚಿಂತಿಸಬೇಡಿ’ ಎಂದು ಬರೆದಿದ್ದಾರೆ. ಈ ಮೆಸೇಜ್ ಬರುತ್ತಿದ್ದಂತೆ ರೌಲಿಂಗ್ ಟ್ವಿಟರ್ ಸಪೋರ್ಟ್ ಟೀಮ್ ನ್ನು ಟ್ಯಾಗ್ ಮಾಡಿದ್ದು, ಅಪಾಯದ ಮುನ್ಸೂಚನೆಯನ್ನು ಅರಿತು ಸಹಾಯಕ್ಕೆ ಮನವಿ ಮಾಡಿದ್ದಾರೆ.

ಮಾಹಿತಿಯ ಪ್ರಕಾರ, ರೌಲಿಂಗ್‌ಗೆ ಜೀವ ಬೆದರಿಕೆ ಹಾಕಿರುವ ಟ್ವಿಟ್ಟರ್ ಹ್ಯಾಂಡಲ್ ವ್ಯಕ್ತಿ, ನ್ಯೂಜೆರ್ಸಿ ದಾಳಿಕೋರ ಹಾದಿ ಮಟರ್ ನನ್ನು ಹೊಗಳಿದ್ದಾನೆ. ಪಶ್ಚಿಮ ನ್ಯೂಯಾರ್ಕ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬರಹಗಾರ ಸಲ್ಮಾನ್ ರಶ್ದಿಯವರನ್ನು ಮಟರ್ ಹಲವು ಬಾರಿ ಇರಿದಿದ್ದು, ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. 

ಇದನ್ನೂ ಓದಿ: ಮನೆಯ ಮೇಲೆ ಪಾಕ್ ಧ್ವಜ ಹಾರಿಸಿದ ವ್ಯಕ್ತಿ ಬಂಧನ..!

ರಶ್ದಿಯ ಮೇಲೆ ಚಾಕುವಿನಿಂದ ದಾಳಿ ಮಾಡಿದ ಆರೋಪಿ ಹಾದಿ ಮಟರ್ ತನ್ನ ಅಪರಾಧವನ್ನು ಒಪ್ಪಿಕೊಂಡಿಲ್ಲ. ನ್ಯೂಜೆರ್ಸಿ ನಿವಾಸಿಯಾದ ಮಟರ್ (24) ಎಂಬಾತನ ಮೇಲೆ ಕೊಲೆ ಯತ್ನ ಮತ್ತು ಹಲ್ಲೆ ಆರೋಪ ಹೊರಿಸಲಾಗಿದೆ. ಆದರೆ ಆತ ತನ್ನ ತಪ್ಪನ್ನು ಒಪ್ಪಿಕೊಂಡಿಲ್ಲ. ಸದ್ಯ ಆತನನ್ನು ಚೌಟಕ್ವಾ ಕೌಂಟಿ ಜೈಲಿನಲ್ಲಿ ಇರಿಸಲಾಗಿದೆ ಎಂದು ನ್ಯೂಯಾರ್ಕ್ ರಾಜ್ಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More