Home> World
Advertisement

ಇಸ್ರೇಲ್ ಮೇಲೆ ಹಮಾಸ್ ದಾಳಿ, ತುರ್ತುಸಭೆ ಕರೆದ ನೆತನ್ಯಾಹು, ಯುದ್ಧ ಘೋಷಣೆ!

Hamas Attack On Israel: ಇಸ್ರೇಲ್ ಮೇಲೆ ಏಕಾಏಕಿ ಇಂದು ಹಮಾಸ್ ಉಗ್ರರು ದಾಳಿ ನಡೆಸಿದ್ದಾರೆ. World News In Kannada
 

ಇಸ್ರೇಲ್ ಮೇಲೆ ಹಮಾಸ್ ದಾಳಿ, ತುರ್ತುಸಭೆ ಕರೆದ ನೆತನ್ಯಾಹು, ಯುದ್ಧ ಘೋಷಣೆ!

Hamas Attack On Israel: ಇಸ್ರೇಲ್ ಮೇಲೆ ಏಕಾಏಕಿ ಇಂದು ಹಮಾಸ್ ಉಗ್ರರು ದಾಳಿ ನಡೆಸಿದ್ದಾರೆ. ಹಮಾಸ್ ಭಯೋತ್ಪಾದಕ ದಾಳಿಯ ಬಳಿಕ ಇಸ್ರೇಲ್ ರಕ್ಷಣಾ ಸಚಿವ ಯೋವ್ ಗಲಾಂಟ್ ತಮ್ಮ ಅಧಿಕೃತ ಹೇಳಿಕೆಯನ್ನು ನೀಡಿದ್ದಾರೆ. ಈ ಕುರಿತು ಮಾಹಿತಿ ನೀಡಿದ ಅವರು, ಹಮಾಸ್ ಭಯೋತ್ಪಾದಕರು ಇಂದು ಬೆಳಗ್ಗೆ ಗಂಭೀರ ತಪ್ಪು ಎಸಗಿದ್ದಾರೆ  ಮತ್ತು ಇಸ್ರೇಲ್ ವಿರುದ್ಧ ಯುದ್ಧವನ್ನು ಆರಂಭಿಸಿದ್ದಾರೆ. ಇಸ್ರೇಲ್ ಭದ್ರತಾ ಸಂಸ್ಥೆಗಳ ಸೈನಿಕರು ಎಲ್ಲೆಡೆ ಹಮಾಸ್ ಉಗ್ರರ ವಿರುದ್ಧ ಹೋರಾಡುತ್ತಿದ್ದಾರೆ. ಸುರಕ್ಷತಾ ಸೂಚನೆಗಳನ್ನು ಅನುಸರಿಸಲು ನಾನು ಇಸ್ರೇಲ್‌ನ ಎಲ್ಲಾ ನಾಗರಿಕರಿಗೆ ಕರೆ ನೀಡುತ್ತೇನೆ. ಇಸ್ರೇಲ್ ಈ ಯುದ್ಧವನ್ನು ಗೆಲ್ಲುತ್ತದೆ ಎಂದು ಹೇಳಿದ್ದಾರೆ.
ಇನ್ನೊಂದೆಡೆ ಇಸ್ರೇಲ್ ಮೇಲೆ ದಾಳಿಯ ಕುರಿತು ಪ್ರತಿಕ್ರಿಯೆ ನೀಡಿರುವ ಅಮೆರಿಕಾ, ಇಸ್ರೇಲ್ ಮೇಲಿನ ಉಗ್ರರ ದಾಳಿಯ ಬಳಿಕ ಅಲ್ಲಿನ ಪರಿಸ್ಥಿತಿಯ ಬಗ್ಗೆ ನಮಗೆ ಮಾಹಿತಿ ದೊರೆತಿದೆ, ಪರಿಸ್ಥಿತಿಯ ಗಂಭೀರತೆಯನ್ನು ಪರಿಗಣಿಸಿ ನಾವು ಅತ್ತ ಗಮನಹರಿಸುತ್ತಿದ್ದೇವೆ ಎಂದು ಹೇಳಿದೆ. ಇಸ್ರೇಲ್‌ನಲ್ಲಿರುವ ಯುಎಸ್ ರಾಯಭಾರ ಕಚೇರಿಯು 'ಅಮೆರಿಕನ್ ನಾಗರಿಕರು ಈ ದಾಳಿಯ ಬಗ್ಗೆ ಎಚ್ಚರದಿಂದಿರಬೇಕು ಮತ್ತು ಸುರಕ್ಷಿತ ಸ್ಥಳದಲ್ಲಿ ಆಶ್ರಯ ಪಡೆಯಬೇಕು ಎಂದು ಅದು ಸೂಚನೆ ನೀಡಿದೆ.

ಹಿನ್ನೆಲೆ
ಮಧ್ಯಪ್ರಾಚ್ಯದಲ್ಲಿ ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವಿನ ಪರಿಸ್ಥಿತಿ ಮತ್ತೊಮ್ಮೆ ಹದಗೆಟ್ಟಿದೆ. ಹಮಾಸ್ ಭಯೋತ್ಪಾದಕರು ಶನಿವಾರ (7 ಅಕ್ಟೋಬರ್ 2023) ಮುಂಜಾನೆ ಗಾಜಾ ಪಟ್ಟಿಯ ಮೇಲೆ ದಾಳಿ ನಡೆಸಿದ್ದಾರೆ. ಮೊದಲಿಗೆ ಅವರು ಇಸ್ರೇಲ್‌ನ ಮೇಲೆ ಸಾವಿರಾರು ರಾಕೆಟ್‌ ಸೆಲ್ ಗಳನ್ನು ಹಾರಿಸಿದ್ದಾರೆ ಮತ್ತು ನಂತರ ಅವರು ನಿರಂತರವಾಗಿ ಭೂದಾಳಿ ಮಾಡುವ ಮೂಲಕ ಇಸ್ರೇಲ್‌ಗೆ ಪ್ರವೇಶಿಸಿದ್ದಾರೆ. 

ಕೆಲವು ಭಯೋತ್ಪಾದಕರು ಪ್ಯಾರಾಗ್ಲೈಡರ್ ಬಳಸಿ ಗಡಿ ಪ್ರವೇಶಿಸಿದರೆ,  ಕೆಲವು ಭಯೋತ್ಪಾದಕರು ರಸ್ತೆಯ ಮೂಲಕ ಇಸ್ರೇಲ್‌ಗೆ ಪ್ರವೇಶಿಸಿದ್ದಾರೆ ಮತ್ತು ಅವರು ಕಂಡವರನ್ನೆಲ್ಲ ಹೊಡೆದುರುಳಿಸುಟ್ಟಿದ್ದಾರೆ. ಈ ಹಠಾತ್ ದೊಡ್ಡ ಪ್ರಮಾಣದ ದಾಳಿಯ ನಂತರ, ಇಸ್ರೇಲ್ನಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಪ್ರಧಾನಿ ಬೆಂಜಮಿನ್ ನೆತನ್ಯಾಹು ಕೂಡಲೇ ತುರ್ತು ಸಭೆ ಕರೆದು ದೇಶದಲ್ಲಿ ಯುದ್ಧ ಸಾರಿದ್ದಾರೆ.

ಮಾಧ್ಯಮ ವರದಿಗಳ ಪ್ರಕಾರ, ಪ್ಯಾಲೆಸ್ತೀನ್‌ನ ಭಯೋತ್ಪಾದಕ ಸಂಘಟನೆ ಹಮಾಸ್ ಇಸ್ರೇಲ್ ಮೇಲೆ 5 ಸಾವಿರಕ್ಕೂ ಹೆಚ್ಚು ರಾಕೆಟ್‌ಗಳನ್ನು ಹಾರಿಸಿದೆ ಎನ್ನಲಾಗಿದೆ. ಪ್ಯಾಲೆಸ್ತೀನ್ ಭಯೋತ್ಪಾದಕರು ಗಾಜಾ ಪಟ್ಟಿಯ ಮೂಲಕ ಇಸ್ರೇಲ್ ಮೇಲೆ ದಾಳಿ ನಡೆಸಿ ಅದರ ಗಡಿಯನ್ನು ಪ್ರವೇಶಿಸಿದ್ದಾರೆ.

ಇದನ್ನೂ ಓದಿ-Nobel Peace Prize 2023: ಈ ದೇಶದ ಜೈಲಿನಲ್ಲಿ ಸೆರೆಯಾಗಿರುವ ನರೆಗೀಸ್ ಮೊಹಮ್ಮದಿಗೆ 2023ರ ನೋಬೆಲ್ ಶಾಂತಿ ಪುರಸ್ಕಾರ

ಇಸ್ರೇಲಿ ನಾಗರಿಕರಿಗೆ ಮನೆಯಲ್ಲಿಯೇ ಇರಲು ಆದೇಶ ನೀಡಲಾಗಿದೆ
CNN ಪ್ರಕಾರ, ರಾಕೆಟ್ ದಾಳಿಯ ನಂತರ, ಪ್ರಧಾನಿ ನೆತನ್ಯಾಹು ಅವರ ಕಚೇರಿಯು ಟೆಲ್ ಅವಿವ್‌ನಲ್ಲಿ ಪ್ರಧಾನ ಮಂತ್ರಿ ಮತ್ತು ರಕ್ಷಣಾ ಸಚಿವರು ಉನ್ನತ ಮಟ್ಟದ ಸಭೆಯನ್ನು ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ. ದೇಶದ ಎಲ್ಲಾ ನಾಗರಿಕರಿಗೆ ಎಚ್ಚರಿಕೆ ನೀಡಲಾಗಿದೆ. ಎಲ್ಲರೂ ಮನೆಯೊಳಗೆ ಇರುವಂತೆ ಕೋರಲಾಗಿದೆ. ಹಮಾಸ್ ದಾಳಿ ಬಳಿಕ ಮಾಧ್ಯಮಗಳ ಮುಂದೆ ಕಾಣಿಸಿಕೊಂಡ ಇಸ್ರೇಲ್ ರಕ್ಷಣಾ ಸಚಿವರು ವಿಡಿಯೋ ಬಿಡುಗಡೆ ಮಾಡಿದ್ದಾರೆ.

ಇದನ್ನೂ ಓದಿ-ಏಕಕಾಲಕ್ಕೆ ಹಲವು ಶಾಲಾ ವಿದ್ಯಾರ್ಥಿನಿಯರ ಮೇಲೆ ಪಾರ್ಶ್ವವಾಯು ದಾಳಿ, ವಿಡಿಯೋ ಬೆಚ್ಚಿಬೀಳಿಸುವಂತಿದೆ!

ವಿಡಿಯೋ ಸಂದೇಶದಲ್ಲಿ ಮಾತನಾಡಿರುವ ಅವರು, ಹಮಾಸ್ ಭಯೋತ್ಪಾದಕರು ಇಂದು ಬೆಳಗ್ಗೆ ಗಂಭೀರ ತಪ್ಪು ಎಸಗಿದ್ದಾರೆ ಮತ್ತು ಇಸ್ರೇಲ್ ವಿರುದ್ಧ ಯುದ್ಧವನ್ನು ಆರಂಭಿಸಿದ್ದಾರೆ. ಇಸ್ರೇಲಿ ಭದ್ರತಾ ಸಂಸ್ಥೆಗಳ ಸೈನಿಕರು ಎಲ್ಲೆಡೆ ಶತ್ರುಗಳ ವಿರುದ್ಧ ಹೋರಾಡುತ್ತಿದ್ದಾರೆ. ಸುರಕ್ಷತಾ ಸೂಚನೆಗಳನ್ನು ಅನುಸರಿಸಲು ನಾನು ಇಸ್ರೇಲ್‌ನ ಎಲ್ಲಾ ನಾಗರಿಕರಿಗೆ ಕರೆ ನೀಡುತ್ತೇನೆ. ಇಸ್ರೇಲ್ ಈ ಯುದ್ಧವನ್ನು ಗೆಲ್ಲುತ್ತದೆ. ಈ ದಾಳಿಯ ನಂತರ ಅಮೆರಿಕವು ಪರಿಸ್ಥಿತಿಯನ್ನು ನಿರಂತರವಾಗಿ ಗಮನಿಸುತ್ತಿದೆ ಎಂದು ಹೇಳಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Read More