Home> World
Advertisement

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ: ಗೂಗಲ್​​ನಿಂದ ವಿಶೇಷ ಡೂಡಲ್​​!

ಗೂಗಲ್ ತನ್ನ ಹೋಂ ಪೇಜ್ ನಲ್ಲಿ 'ಮಹಿಳೆ' ಎಂಬ ಪದವನ್ನು 11 ವಿವಿಧ ಭಾಷೆಗಳಲ್ಲಿ ಬರೆದು ಡೂಡಲ್ ಮೂಲಕ ಶುಭಾಶಯ ಕೋರಿದೆ.

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ: ಗೂಗಲ್​​ನಿಂದ ವಿಶೇಷ ಡೂಡಲ್​​!

ನವದೆಹಲಿ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಗೂಗಲ್ ವಿಶೇಷ ಡೂಡಲ್ ಮೂಲಕ ಮಹಿಳೆಯರಿಗೆ ಗೌರವ ಸಲ್ಲಿಸಿದೆ. 

ಗೂಗಲ್ ತನ್ನ ಹೋಂ ಪೇಜ್ ನಲ್ಲಿ 'ಮಹಿಳೆ' ಎಂಬ ಪದವನ್ನು 11 ವಿವಿಧ ಭಾಷೆಗಳಲ್ಲಿ ಬರೆದು ಡೂಡಲ್ ಮೂಲಕ ಶುಭಾಶಯ ಕೋರಿದೆ. ಇದರಲ್ಲಿ ಹಿಂದಿ, ಅರೇಬಿಕ್, ಫ್ರೆಂಚ್, ಬಾಂಗ್ಲಾ, ರಷಿಯನ್, ಜಪಾನೀಸ್, ಜರ್ಮನ್, ಇಟಾಲಿಯನ್, ಇಂಗ್ಲೀಷ್ ಮತ್ತು ಪೋರ್ಚುಗೀಸ್ ಭಾಷೆಗಳಲ್ಲಿ 'ಮಹಿಳೆ' ಎಂಬ ಪದವನ್ನು ಬರೆದಿದೆ. 

ಅಷ್ಟೇ ಅಲ್ಲದೆ, ಡೂಡಲ್ ನಲ್ಲಿ ಮಹಿಳಾ ವಿಜ್ಞಾನಿಗಳು, ಕಲಾವಿದರು, ಅಥ್ಲೀಟ್​ಗಳು, ಲೇಖಕಿಯರು ಸೇರಿದಂತೆ 14 ಮಹಿಳಾ ಸಾಧಕಿಯರ ಸ್ಫೂರ್ತಿದಾಯಕ ನುಡಿಗಳನ್ನು ಸ್ಲೈಡ್ ಷೋ ಮೂಲಕ ಪ್ರಸ್ತುತಪಡಿಸಲಾಗಿದೆ.  ಅದರಲ್ಲಿ ಭಾರತೀಯ ಬಾಕ್ಸರ್ ಮೇರಿ ಕೋಂ ಅವರ ಹೇಳಿಕೆಯೂ ಇದೆ. 

1909 ಫೆಬ್ರವರಿ 28ರಂದು ಪ್ರಥಮವಾಗಿ ಮಹಿಳಾ ದಿನಾಚರಣೆಯನ್ನು ಅಮೆರಿಕಾದ ಸೋಷಿಯಲಿಸ್ಟ್​ ಪಾರ್ಟಿ ಆಚರಣೆ ಮಾಡಿತು. 1919ರಿಂದ ಮಾರ್ಚ್​ 8ರಂದು ಮಹಿಳಾ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ.

Read More