Home> World
Advertisement

ಭಾರತಕ್ಕೆ 200 ಮಿಲಿಯನ್ ಯುರೋ ನೆರವು ನೀಡುವುದಾಗಿ ಘೋಷಿಸಿದ ಫ್ರಾನ್ಸ್

ಕೋವಿಡ್ -19 ಸಾಂಕ್ರಾಮಿಕದ ಮಧ್ಯೆ ಸಮಾಜದ ದುರ್ಬಲ ವರ್ಗಗಳನ್ನು ಬೆಂಬಲಿಸಲು 200 ಮಿಲಿಯನ್ ಯುರೋಗಳಷ್ಟು ಹಣಕಾಸಿನ ನೆರವು ನೀಡುವುದಾಗಿ ಫ್ರಾನ್ಸ್ ಗುರುವಾರ ಪ್ರಕಟಿಸಿದೆ.

ಭಾರತಕ್ಕೆ 200 ಮಿಲಿಯನ್ ಯುರೋ ನೆರವು ನೀಡುವುದಾಗಿ ಘೋಷಿಸಿದ ಫ್ರಾನ್ಸ್

ನವದೆಹಲಿ: ಕೋವಿಡ್ -19 ಸಾಂಕ್ರಾಮಿಕದ ಮಧ್ಯೆ ಸಮಾಜದ ದುರ್ಬಲ ವರ್ಗಗಳನ್ನು ಬೆಂಬಲಿಸಲು 200 ಮಿಲಿಯನ್ ಯುರೋಗಳಷ್ಟು ಹಣಕಾಸಿನ ನೆರವು ನೀಡುವುದಾಗಿ ಫ್ರಾನ್ಸ್ ಗುರುವಾರ ಪ್ರಕಟಿಸಿದೆ.

'ಕೋವಿಡ್ 19 ಅನ್ನು ಜಯಿಸಲು ಕೈಜೋಡಿಸುವುದರ ಭಾಗವಾಗಿ ಫ್ರೆಂಚ್ ಅಭಿವೃದ್ಧಿ ಸಂಸ್ಥೆ ಎಎಫ್ಡಿ_ಎನ್ ಮೂಲಕ,ಸಾಮಾಜಿಕ ಕಲ್ಯಾಣ ವ್ಯವಸ್ಥೆಗಳನ್ನು ಹೆಚ್ಚಿಸಲು ಮತ್ತು ಭಾರತದಲ್ಲಿ ದುರ್ಬಲ ಜನಸಂಖ್ಯೆಯನ್ನು ರಕ್ಷಿಸಲು ಫ್ರಾನ್ಸ್ 200 ಮಿಲಿಯನ್ ವರೆಗೆ ಆರ್ಥಿಕ ಸಹಾಯವನ್ನು ಒದಗಿಸುತ್ತಿದೆ' ಎಂದು ಫ್ರೆಂಚ್ ರಾಯಭಾರಿ ಎಮ್ಯಾನುಯೆಲ್ ಲೆನೈನ್ ಟ್ವೀಟ್ ಮಾಡಿದ್ದಾರೆ.

ಅಜೆನ್ಸ್ ಫ್ರಾಂಕೈಸ್ ಡಿ ಡೆವಲಪ್‌ಮೆಂಟ್ (ಎಎಫ್‌ಡಿ) ಯ ಸಲಹಾ ಮಂಡಳಿಯು ಈ ಹಣವನ್ನು ಹಂಚಿಕೆ ಮಾಡಿದೆ ಮತ್ತು ಮುಂದಿನ ವಾರಗಳಲ್ಲಿ ಭಾರತದ ಹಣಕಾಸು ಸಚಿವಾಲಯದೊಂದಿಗೆ ಕಲ್ಯಾಣ ಕ್ರಮಗಳು ಮತ್ತು ಸಮಾಜದ ಅತ್ಯಂತ ದುರ್ಬಲ ವರ್ಗಗಳನ್ನು ಬೆಂಬಲಿಸುವ ಒಪ್ಪಂದಕ್ಕೆ ಸಹಿ ಹಾಕುವ ನಿರೀಕ್ಷೆಯಿದೆ ಎನ್ನಲಾಗಿದೆ. 

ಎಎಫ್‌ಡಿ 115 ದೇಶಗಳಲ್ಲಿ ಉತ್ತಮ ಮತ್ತು ಹೆಚ್ಚು ಸುಸ್ಥಿರ ಜಗತ್ತನ್ನು ರಚಿಸುವ ಗುರಿಯನ್ನು ಹೊಂದಿದೆ. ಇದು ಹವಾಮಾನ, ಜೀವವೈವಿಧ್ಯ, ಶಿಕ್ಷಣ, ನಗರಾಭಿವೃದ್ಧಿ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಯೋಜನೆಗಳ ಮೇಲೆ ಕೇಂದ್ರೀಕರಿಸುತ್ತದೆ.

ಮಾರ್ಚ್ 31 ರಂದು ಪ್ರಧಾನಿ ನರೇಂದ್ರ ಮೋದಿಯವರೊಂದಿಗಿನ ದೂರವಾಣಿ ಸಂಭಾಷಣೆಯಲ್ಲಿ ಆರ್ಥಿಕ ಸಹಾಯದ ಬಗ್ಗೆ ಮ್ಯಾಕ್ರನ್ ಚರ್ಚಿಸಿದ್ದರು, ಇದು ಕೋವಿಡ್ -19 ವಿರುದ್ಧದ ಹೋರಾಟದಲ್ಲಿ ಸಹಯೋಗದ ಬಗ್ಗೆಯೂ ಗಮನಹರಿಸಿತು.

ಭಾರತ ಮತ್ತು ಫ್ರಾನ್ಸ್‌ನ ನೌಕಾಪಡೆಗಳು ತಮ್ಮ ಮುಂದಿನ ಜಂಟಿ ವ್ಯಾಯಾಮದ ಬಗ್ಗೆ ಪ್ರಾಥಮಿಕ ಚರ್ಚೆಗಳನ್ನು ನಡೆಸುತ್ತಿವೆ, ಇದು ಕೋವಿಡ್ -19 ಬಿಕ್ಕಟ್ಟಿನ ನಂತರ ನಡೆಯಲಿದೆ ಎಂದು ಉಲ್ಲೇಖಿಸಲಾಗಿದೆ. ಪ್ರಸ್ತುತ, ಎರಡೂ ನೌಕಾಪಡೆಗಳು ತಮ್ಮ ಪ್ರಜೆಗಳನ್ನು ಹಿಂದೂ ಮಹಾಸಾಗರ ಪ್ರದೇಶದಿಂದ ವಾಪಾಸು ಕಳುಹಿಸುವ ಕಾರ್ಯಗಳಲ್ಲಿ ತೊಡಗಿವೆ.

Read More