Home> World
Advertisement

Europe on Verge of War: 'ಯುರೋಪ್ ಯುದ್ಧದಂಚಿನಲ್ಲಿದೆ', ಎಚ್ಚರಿಕೆ ನೀಡಿದ ಜರ್ಮನಿ ವಾಯ್ಸ್ ಚಾನ್ಸಲರ್

Europe on Verge of War: ಜರ್ಮನಿಯ ವೈಸ್ ಚಾನ್ಸೆಲರ್ ಆಗಿರುವ ರಾಬರ್ಟ್ ಹೆಬೆಕ್ ಯುರೋಪ್ನಲ್ಲಿನ ಯುದ್ಧದ ಕುರಿತು ಗಂಭೀರ ಎಚ್ಚರಿಕೆ ನೀಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಯುರೋಪ್ ಯುದ್ಧದ ಅಂಚಿನಲ್ಲಿರಬಹುದು ಎಂದಿದ್ದಾರೆ.

Europe on Verge of War: 'ಯುರೋಪ್ ಯುದ್ಧದಂಚಿನಲ್ಲಿದೆ', ಎಚ್ಚರಿಕೆ ನೀಡಿದ ಜರ್ಮನಿ ವಾಯ್ಸ್ ಚಾನ್ಸಲರ್

Europe on Verge of War - ಜರ್ಮನಿಯ(Germany) ವಾಯ್ಸ್ ಚಾನ್ಸಲರ್ (Germany Vice Chancellor) ಮತ್ತು ಅರ್ಥಶಾಸ್ತ್ರ ಸಚಿವ ರಾಬರ್ಟ್ ಹೆಬೆಕ್ (Robert Habeck) ಯುರೋಪ್ನಲ್ಲಿ ಯುದ್ಧದ ಸಂಕೇತವನ್ನು ನೀಡಿದ್ದಾರೆ. ಭಾನುವಾರ ನಡೆದ ಸಂದರ್ಶನದಲ್ಲಿ ಅವರು ಈ ಕುರಿತು ಸಂಕೇತವೊಂದನ್ನು ನೀಡಿದ್ದು,  ಯುರೋಪ್ (Europ) ಬಹುಶಃ ಯುದ್ಧದ ಅಂಚಿನಲ್ಲಿರಬಹುದು (Europ On War Mode) ಎಂದು ಹೇಳಿದ್ದಾರೆ. ಆರ್‌ಟಿಎಲ್/ಎನ್‌ಟಿವಿ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಹಬೆಕ್, ಯಾವುದೇ ವಿವರಣೆಯಿಲ್ಲದೆ, ಪರಸ್ಪರ ಎದುರಿಸುತ್ತಿರುವ ದೊಡ್ಡ ಸಶಸ್ತ್ರ ಪಡೆಗಳತ್ತ ಅವರು ಗಮನ ಸೆಳೆದಿದ್ದಾರೆ.

ಜರ್ಮನಿಯ ವೈಸ್ ಚಾನ್ಸೆಲರ್ ರಾಬರ್ಟ್ ಹೆಬೆಕ್ ಪ್ರಕಾರ, ಯುರೋಪ್ನಲ್ಲಿನ ದೊಡ್ಡ ಸಶಸ್ತ್ರ ಪಡೆಗಳಿಂದ ಯುರೋಪ್ ಭವಿಷ್ಯದಲ್ಲಿ ಯುದ್ಧ ಎದುರಿಸಬಹುದು. ನಾವು ಯುರೋಪಿನಲ್ಲಿ ಯುದ್ಧದ ಅಂಚಿನಲ್ಲಿರಬಹುದು ಒತ್ತಿ ಹೇಳಿದ್ದಾರೆ. ಇದು ಸಂಪೂರ್ಣವಾಗಿ ದಮನಕಾರಿ ಮತ್ತು ಬೆದರಿಕೆಯಾಗಿದೆ ಎಂದು ಅವರು ಹೇಳಿದ್ದಾರೆ. 

ರಷ್ಯಾ ಮತ್ತು ಉಕ್ರೇನ್ (Russia-Ukraine Crisis) ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ಜರ್ಮನಿಯ ವೈಸ್ ಚಾನ್ಸೆಲರ್ ರಾಬರ್ಟ್ ಹೆಬೆಕ್ ಅವರ ಹೇಳಿಕೆ ಬಂದಿದೆ. ಜರ್ಮನಿಯ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರು ರಷ್ಯಾ ಮತ್ತು ಉಕ್ರೇನ್ ನಡುವಿನ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ವಾಸ್ತವದಲ್ಲಿ ಓಲಾಫ್ ಸ್ಕೋಲ್ಜ್ ಅವರು ರಷ್ಯಾ ಮತ್ತು ಉಕ್ರೇನ್ ನಡುವಿನ ಉದ್ವಿಗ್ನತೆಯನ್ನು ಕಡಿಮೆ ಮಾಡುವ ಪ್ರಯತ್ನಗಳ ಭಾಗವಾಗಿ ಮುಂದಿನ ವಾರ ಎರಡೂ ದೇಶಗಳಿಗೆ ಭೇಟಿ ನೀಡಲಿದ್ದಾರೆ.

ಇದನ್ನೂ ಓದಿ-Shocking: ಹಾರುವ ವಿಮಾನದಲ್ಲಿಯೇ ಮಹಿಳೆಯ ಮೇಲೆ ಅತ್ಯಾಚಾರ..!

ಪಾಶ್ಚಿಮಾತ್ಯ ಗುಪ್ತಚರ ಅಧಿಕಾರಿಗಳು ಉಕ್ರೇನ್ ಮೇಲೆ ರಷ್ಯಾದ ದಾಳಿಯ ಬಗ್ಗೆ ಎಚ್ಚರಿಕೆ ನೀಡಿದ ಸಮಯದಲ್ಲಿ ಸ್ಕೋಲ್ಜ್ ಪ್ರಸ್ತುತ ಪ್ರವಾಸವನ್ನು ನಡೆಸುತ್ತಿದ್ದು, ಜರ್ಮನಿಯು ತನ್ನ ಎಲ್ಲಾ ನಾಗರಿಕರನ್ನು ಉಕ್ರೇನ್ ತೊರೆಯುವಂತೆ ಕೇಳಿಕೊಂಡಿದೆ. ಶೋಲ್ಜ್ ಸೋಮವಾರ ಉಕ್ರೇನ್ ರಾಷ್ಟ್ರಪತಿಗಳನ್ನು ಭೇಟಿ ಮಾದಳುಕೀವ್ ಗೆ ತೆರಳುತ್ತಿದ್ದು, ಮಂಗಳವಾರ ರಷ್ಯಾ ಅಧ್ಯಕ್ಷರನ್ನು ಭೇಟಿ ಮಾಡಲು ಅವರು ಮಾಸ್ಕೋಗೆ ತೆರಳಸಿದ್ದಾರೆ. ಭೇಟಿಗೆ ಹೊರಡುವ ಮೊದಲು, ಅವರು ರಷ್ಯಾದ ದಾಳಿಯ ಸಾಧ್ಯತೆಯ ಬಗ್ಗೆ ಮತ್ತೊಮ್ಮೆ ಎಚ್ಚರಿದೆ ನೀಡಿದ್ದಾರೆ ಮತ್ತು ರಾಜತಾಂತ್ರಿಕ ಪ್ರಯತ್ನಗಳ ಮುಂದುವರಿಕೆಗೆ ವಿವಿಧ ರೀತಿಯಲ್ಲಿ ಕರೆ ನೀಡಿದ್ದಾರೆ. 

ಇದನ್ನೂ ಓದಿ-Malala Yousafzai : ಹಿಜಾಬ್ ವಿವಾದಕ್ಕೆ ಪ್ರತಿಕ್ರಿಯಿಸಿದ ಮಲಾಲಾ ಯೂಸುಫ್‌ಜಾಯ್!

ಇನ್ನೊಂದೆಡೆ ರಷ್ಯಾ (Russia) ಮತ್ತು ಉಕ್ರೇನ್(Ukraine) ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆ ಮತ್ತು ಯುದ್ಧದ ಭೀತಿಯ ನಡುವೆ ಕೆಲವು ವಿಮಾನಯಾನ ಸಂಸ್ಥೆಗಳನ್ನು ಅಲರ್ಟ್ ಮೋಡ್ ನಲ್ಲಿರಿಸಿದೆ. ಅಂದಿನಿಂದ, ಕೆಲವು ವಿಮಾನಯಾನ ಸಂಸ್ಥೆಗಳು ಉಕ್ರೇನ್‌ಗೆ ತಮ್ಮ ವಿಮಾನಗಳನ್ನು ರದ್ದುಗೊಳಿಸಿವೆ ಅಥವಾ ಯುದ್ಧದ ಭಯದಿಂದಾಗಿ ಅವರು ತಮ್ಮ ಮಾರ್ಗಗಳನ್ನು ಬದಲಿಸಿದ್ದಾರೆ.

ಇದನ್ನೂ ಓದಿ-Paracetamol ಕುರಿತು ಬೆಚ್ಚಿಬೀಳಿಸುವ ಮಾಹಿತಿ ಬಹಿರಂಗ, ಸೇವಿಸುವ ಮುನ್ನ ಈ ಸುದ್ದಿಯನ್ನೊಮ್ಮೆ ಓದಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More