Home> World
Advertisement

Afghanistan earthquake: ತಾಲಿಬಾನ್ ಉಗ್ರರ ವಶದಲ್ಲಿರುವ ಅಫ್ಘಾನಿಸ್ತಾನದಲ್ಲಿ ಭಾರೀ ಭೂಕಂಪ..!

ತಾಲಿಬಾನ್ ಭಯೋತ್ಪಾದಕರ ವಶದಲ್ಲಿರುವ ಯುದ್ಧಪೀಡಿತ ಅಫ್ಘಾನಿಸ್ತಾನದಲ್ಲಿ 4.5ರಷ್ಟು ತೀವ್ರತೆಯ ಭೂಕಂಪನ ಸಂಭವಿಸಿದೆ.

Afghanistan earthquake: ತಾಲಿಬಾನ್ ಉಗ್ರರ ವಶದಲ್ಲಿರುವ ಅಫ್ಘಾನಿಸ್ತಾನದಲ್ಲಿ ಭಾರೀ ಭೂಕಂಪ..!

ನವದೆಹಲಿ: ತಾಲಿಬಾನ್ ಭಯೋತ್ಪಾದಕರ ವಶದಲ್ಲಿರುವ ಯುದ್ಧಪೀಡಿತ ಅಫ್ಘಾನಿಸ್ತಾನ(Afghanistan)ದಲ್ಲಿ ಗುರುವಾರ ಭಾರೀ ಭೂಕಂಪನ ಸಂಭವಿಸಿದೆ. ಬೆಳಗ್ಗೆ 11.22ರ ವೇಳೆಗೆ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 4.5ರಷ್ಟು ತೀವ್ರತೆ ದಾಖಲಾಗಿದೆ ಅಂತಾ ಭಾರತದ ರಾಷ್ಟ್ರೀಯ ಭೂಕಂಪ ಮಾಪನಶಾಸ್ತ್ರ ಕೇಂದ್ರ (ಎನ್‌ಸಿಎಸ್‌) ತಿಳಿಸಿದೆ.

ಹಿಂದೂ ಕುಶ್ ಪ್ರದೇಶವು ಈ ಭೂಕಂಪನದ ಕೇಂದ್ರ ಬಿಂದುವಾಗಿದೆ. 92 ಕಿ.ಮೀ ಆಳದಲ್ಲಿ ಭೂಕಂಪನ(Earthquake)ಸಂಭವಿಸಿದೆ ಎಂದು ಎನ್‌ಸಿಎಸ್ ತನ್ನ ಪ್ರಾಥಮಿಕ ವರದಿಯಲ್ಲಿ ತಿಳಿಸಿದೆ. ಬೆಜಾರಕ್, ಜಬಲ್ ಸರಜ್ ಮತ್ತು ಚರಿಕರ್ ಸೇರಿದಂತೆ ಹಲವು ನಗರಗಳಲ್ಲಿ ಭೂಮಿ ಕಂಪಿಸಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಪ್ರತಿಭಟನಾಕಾರರ ಮೇಲೆ ತಾಲಿಬಾನ್ ಸದಸ್ಯರಿಂದ ಗುಂಡಿನ ದಾಳಿ

ಒಂದು ವಾರದೊಳಗೆ ಅಫ್ಘಾನಿಸ್ತಾನ(Afghanistan)ದಲ್ಲಿ ಸಂಭವಿಸಿರುವ 2ನೇ ಭೂಕಂಪನ ಇದಾಗಿದೆ. ಭೂಕಂಪನದಿಂದ ಯಾವುದೇ ರೀತಿಯ ಸಾವು-ನೋವು, ಹಾನಿಯುಂಟಾಗಿರುವ ಬಗ್ಗೆ ವರದಿಯಾಗಿಲ್ಲ. ಭೂಕಂಪನದ ಅನುಭವದಿಂದ ಅಲ್ಲಿನ ಜನರು ಕೆಲಕಾಲ ಆತಂಕಕ್ಕೊಳಗಾಗಿದ್ದರು ಅಂತಾ ತಿಳಿದುಬಂದಿದೆ.

ತಾಲಿಬಾನ್ ಉಗ್ರರು ರಾಜಧಾನಿ ಕಾಬೂಲ್(Kabul) ಅನ್ನು ತಮ್ಮ ವಶಕ್ಕೆ ತೆಗೆದುಕೊಂಡು, ಯುದ್ಧವು ಮುಗಿದಿದೆ ಎಂದು ಘೋಷಿಸಿದ್ದಾರೆ. ಇದಾದ ಕೆಲವೇ ದಿನಗಳಲ್ಲಿ ಅಫ್ಘಾನಿಸ್ತಾನದಲ್ಲಿ ಭೂಕಂಪ ಸಂಭವಿಸಿದೆ. ಈಗಾಗಲೇ ಅಧ್ಯಕ್ಷ ಅಶ್ರಫ್ ಘನಿ ದೇಶದಿಂದ ಪಲಾಯನ ಮಾಡಿದ್ದಾರೆ. ರಕ್ತಪಾತ ತಪ್ಪಿಸಲು ನಾನು ದೇಶ ತೊರೆದಿರುವುದಾಗಿ ಘನಿ ಹೇಳಿಕೊಂಡಿದ್ದಾರೆ. ಸದ್ಯ ಮಕ್ಕಳು, ಮಹಿಳೆಯರು ಸೇರಿದಂತೆ ಅಫ್ಘಾನ್ ಪ್ರಜೆಗಳು ತಾಲಿಬಾನ್ ಉಗ್ರರ ಕರಿನೆರಳಿನಲ್ಲಿ ಬದುಕುವಂತಾಗಿದೆ.

ಇದನ್ನೂ ಓದಿ: Female TikTok Star: ಗಾಳಿಯಲ್ಲಿ ತೂರಾಡಿದರು.. ಬಟ್ಟೆ ಹರಿದುಹಾಕಿದರು.. ಮೊಬೈಲ್ ಕದ್ದರು..!

ಅಫ್ಘಾನಿಸ್ತಾದಲ್ಲಿ ಹೊಸ ಸರ್ಕಾರ ರಚಿಸುವಲ್ಲಿ ತಾಲಿಬಾನ್ ನಾಯಕರು(Taliban Leaders) ಬ್ಯುಸಿಯಾಗಿದ್ದಾರೆ. ಅಫ್ಘಾನ್ ಪ್ರಜೆಗಳ ರಕ್ಷಣೆಗಾಗಿ ವಿಶ್ವದ ನಾಯಕರೆಲ್ಲರೂ ಸೇರಿಕೊಂಡು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಗಳು ಕೇಳಿಬರುತ್ತಿವೆ. ಅಮೆರಿಕದ ಸೇನಾಪಡೆ ನಿರ್ಗಮಿಸಿದ ಬಳಿಕ ಅಫ್ಘಾನಿಸ್ತಾನದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ತಾಲಿಬಾನ್ ಉಗ್ರರ ಆಡಳಿತದಲ್ಲಿ ನಮಗೆ ಉಳಿಗಾಲವಿಲ್ಲವೆಂದು ಸಾವಿರಾರು ಜನರು ದೇಶ ತೊರೆಯಲು ನಿರ್ಧರಿಸಿದ್ದಾರೆ. ಅನೇಕರು ಬೇರೆ ದೇಶಗಳಿಗೆ ಹೋಗಲು ಪ್ರಯತ್ನಿಸಿ ವಿಫಲರಾಗಿ ಹತಾಶರಾಗಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Read More