Home> World
Advertisement

ಜಪಾನ್‌ನಲ್ಲಿ 6.1 ತೀವ್ರತೆಯ ಭೂಕಂಪ

ಭಾರತೀಯ ಕಾಲಮಾನದ ಪ್ರಕಾರ, ಬೆಳಿಗ್ಗೆ 5 ಗಂಟೆ 16 ನಿಮಿಷಗಳಲ್ಲಿ ಭೂಕಂಪ ಸಂಭವಿಸಿದೆ.
 

ಜಪಾನ್‌ನಲ್ಲಿ 6.1 ತೀವ್ರತೆಯ ಭೂಕಂಪ

ನವದೆಹಲಿ: ಜಪಾನ್‌ನಲ್ಲಿ ಗುರುವಾರ ಬೆಳಿಗ್ಗೆ ಭೂಕಂಪನ ಸಂಭವಿಸಿದೆ. ಮಾಹಿತಿಯ ಪ್ರಕಾರ, ರಿಕ್ಟರ್ ಮಾಪಕದಲ್ಲಿ ಅದರ ತೀವ್ರತೆ 6.1ರಷ್ಟು ದಾಖಲಾಗಿದೆ. ಭಾರತೀಯ ಕಾಲಮಾನದ ಪ್ರಕಾರ, ಬೆಳಿಗ್ಗೆ 5 ಗಂಟೆ 16 ನಿಮಿಷಗಳಲ್ಲಿ ಭೂಕಂಪ ಸಂಭವಿಸಿದೆ. ಭೂಕಂಪದಿಂದಾಗಿ ಜನರಲ್ಲಿ ಭೀತಿಯ ವಾತಾವರಣವಿದೆ.

ಉತ್ತರ ಜಪಾನ್‌ನ ಅಮೋರಿ ಪ್ರಾಂತ್ಯದ ಪೂರ್ವ ಕರಾವಳಿಯ ಪಕ್ಕದ ಪ್ರದೇಶಗಳಲ್ಲಿ ಜನರಿಗೆ ಭೂಕಂಪದ ಅನುಭವವಾಗಿದೆ ಎಂದು ಹೇಳಲಾಗುತ್ತಿದೆ. ಜಪಾನ್‌ನ ಹೊಕ್ಕೈಡೋದಲ್ಲಿ ಹೆಚ್ಚು ಭೂಕಂಪ ಉಂಟಾಗಿದೆ. ಭೂಕಂಪದಿಂದಾಗಿ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ನಷ್ಟದ ಬಗ್ಗೆ ವರದಿಯಾಗಿಲ್ಲ.

ಜಪಾನ್‌ನಲ್ಲಿ ಜುಲೈ 13 ರಂದು ವಾಯುವ್ಯದಿಂದ 169 ಕಿ.ಮೀ ದೂರದಲ್ಲಿ 6.1 ತೀವ್ರತೆಯ ಭೂಕಂಪನ ಸಂಭವಿಸಿತ್ತು. ಈ ಮಾಹಿತಿಯನ್ನು ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ. ಕ್ಸಿನ್ಹುವಾ ವರದಿಯ ಪ್ರಕಾರ, ಭೂಕಂಪದ ಕೇಂದ್ರಬಿಂದುವು 242.18 ಕಿ.ಮೀ ಆಳದಲ್ಲಿ 29.3349 ಡಿಗ್ರಿ ಉತ್ತರ ಅಕ್ಷಾಂಶ ಮತ್ತು 128.1371 ಡಿಗ್ರಿ ಪೂರ್ವ ರೇಖಾಂಶದಲ್ಲಿತ್ತು.

Read More