Home> World
Advertisement

Detergent ನಲ್ಲಿ ಬಳಸಲಾಗುವ ಕೆಮಿಕಲ್ ನಿಂದ ತಯಾರಾಗುತ್ತೆ ಪಿಜ್ಜಾ-ಬರ್ಗರ್, ಈ ಹೆಸರಾಂತ ಬ್ರಾಂಡ್ ಔಟ್ ಲೆಟ್ ಗಳ ಮೇಲೆ ಗಂಭೀರ ಆರೋಪ

Pizza-Burger - ನೀವೂ ಕೂಡ ಮೆಕ್‌ಡೊನಾಲ್ಡ್ಸ್, ಬರ್ಗರ್ ಕಿಂಗ್, ಡೊಮಿನೋಸ್ ಮತ್ತು ಪಿಜ್ಜಾ ಹಟ್‌ನಂತಹ ಪ್ರಸಿದ್ಧ ಆಹಾರ ಮಳಿಗೆಗಳ ಪಿಜ್ಜಾ-ಬರ್ಗರ್‌ಗಳನ್ನು ತಿನ್ನುವ ಅಭಿಮಾನಿಯಾಗಿದ್ದರೆ, ತಕ್ಷಣ ಎಚ್ಚೆತ್ತುಕೊಳ್ಳಿ. ಏಕೆಂದರೆ, ಈ ಮಳಿಗೆಗಳ ಆಹಾರದಲ್ಲಿ ಅಪಾಯಕಾರಿ ರಾಸಾಯನಿಕಗಳನ್ನು ಬಳಸಲಾಗುತ್ತಿದ್ದು, ಇದರಿಂದ ಹಲವಾರು ರೋಗಗಳು ಬರುತ್ತವೆ ಎಂಬ ಅಂಶ ಸಂಶೋಧನೆಯೊಂದರಲ್ಲಿ ಬೆಳಕಿಗೆ ಬಂದಿದೆ.

Detergent ನಲ್ಲಿ ಬಳಸಲಾಗುವ ಕೆಮಿಕಲ್ ನಿಂದ ತಯಾರಾಗುತ್ತೆ ಪಿಜ್ಜಾ-ಬರ್ಗರ್, ಈ ಹೆಸರಾಂತ ಬ್ರಾಂಡ್ ಔಟ್ ಲೆಟ್ ಗಳ ಮೇಲೆ ಗಂಭೀರ ಆರೋಪ

ವಾಶಿಂಗ್ಟನ್: Junk Food - ನೀವೂ ಕೂಡ ಪಿಜ್ಜಾ-ಬರ್ಗರ್‌ಗಳನ್ನು (Pizza-Burger) ಇಷ್ಟಪಡುತ್ತಿದ್ದರೆ ಮತ್ತು ಅವುಗಳನ್ನು ಸವಿಯಲು ಹೆಚ್ಚಾಗಿ ಮೆಕ್‌ಡೊನಾಲ್ಡ್ಸ್, ಬರ್ಗರ್ ಕಿಂಗ್, ಡೊಮಿನೋಸ್ ಅಥವಾ ಪಿಜ್ಜಾ ಹಟ್‌ಗಳಿಗೆ (McDonald’s, Burger King, Domino’s, Pizza Hut) ಹೋಗುತ್ತಿದ್ದರೆ, ಎಚ್ಚರಿಕೆಯಿಂದಿರಿ. ಈ ಮಳಿಗೆಗಳಲ್ಲಿ ಸಿಗುವ ಜಂಕ್ ಫುಡ್‌ನಲ್ಲಿ ಡಿಟರ್ಜೆಂಟ್‌ಗಳಲ್ಲಿ ಬಳಸುವ ರಾಸಾಯನಿಕಗಳನ್ನು ಬಳಸಲಾಗುತ್ತದೆ ಎಂದು ಹೊಸ ಸಂಶೋಧನೆಯೊಂದು ಬಹಿರಂಗಪಡಿಸಿದೆ. ಅಂದರೆ, ಈ ಕಂಪನಿಗಳು ನಿಮ್ಮ ಆರೋಗ್ಯದ ಜೊತೆಗೆ ನೇರವಾಗಿ ಚೆಲ್ಲಾಟವಾಡುತ್ತಿವೆ ಎಂದರ್ಥ.

ಪ್ಲಾಸ್ಟಿಕ್ ಅನ್ನು ಮೃದುವಾಗಿಡುತ್ತದೆ ಈ ಕೆಮಿಕಲ್ (Chemical)

ಜಾರ್ಜ್ ವಾಷಿಂಗ್ಟನ್ (America) ವಿಶ್ವವಿದ್ಯಾಲಯ, ಸೌತ್‌ವೆಸ್ಟ್ ರಿಸರ್ಚ್ ಇನ್‌ಸ್ಟಿಟ್ಯೂಟ್ (ಸ್ಯಾನ್ ಆಂಟೋನಿಯೊ, ಟೆಕ್ಸಾಸ್), ಬೋಸ್ಟನ್ ವಿಶ್ವವಿದ್ಯಾಲಯ ಮತ್ತು ಹಾರ್ವರ್ಡ್ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಸಂಶೋಧನೆಯನ್ನು ಎಕ್ಸ್‌ಪೋಸರ್ ಸೈನ್ಸ್ ಮತ್ತು ಎನ್ವಿರಾನ್‌ಮೆಂಟಲ್ ಎಪಿಡೆಮಿಯಾಲಜಿ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ ಎಂದು ನಮ್ಮ ಸಹಯೋಗದ ವೆಬ್‌ಸೈಟ್ DNA ವರದಿ ಮಾಡಿದೆ. ಮೆಕ್‌ಡೊನಾಲ್ಡ್ಸ್, ಬರ್ಗರ್ ಕಿಂಗ್, ಪಿಜ್ಜಾ ಹಟ್, ಡೊಮಿನೋಸ್, ಟ್ಯಾಕೋ ಬೆಲ್ ಮತ್ತು ಚಿಪಾಟ್ಲ್ ಸೇರಿದಂತೆ ಪ್ರಸಿದ್ಧ ಫುಡ್ ಚೈನ್ ಗಳಲ್ಲಿ ಕಂಡುಬರುವ ಜಂಕ್ ಫುಡ್‌ನಲ್ಲಿ ಪ್ಲಾಸ್ಟಿಕ್ ಅನ್ನು ಮೃದುಗೊಳಿಸಲು ಬಳಸುವ ರಾಸಾಯನಿಕ ಪತ್ತೆಯಾಗಿದೆ ಎಂದು ಸಂಶೋಧನೆಯ ಹೇಳಿದೆ. 

64 ಫುಡ್ ಸ್ಯಾಂಪಲ್ ಗಳ ಪರೀಕ್ಷೆ 
ಈ ರಾಸಾಯನಿಕ ಪದಾರ್ಥ ಹಲವು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಸಂಶೋಧಕರು ಈ ಮಳಿಗೆಗಳಿಂದ ಹ್ಯಾಂಬರ್ಗರ್‌ಗಳು, ಫ್ರೈಗಳು, ಚಿಕನ್ ಗಟ್ಟಿಗಳು, ಚಿಕನ್ ಬರ್ರಿಟೊಗಳು ಮತ್ತು ಚೀಸ್ ಪಿಜ್ಜಾದ 64 ಆಹಾರ ಮಾದರಿಗಳನ್ನು ಪರಿಶೀಲಿಸಿದ್ದಾರೆ. 80% ಕ್ಕಿಂತ ಹೆಚ್ಚು ಆಹಾರಗಳಲ್ಲಿ DnBP ಎಂಬ ಥಾಲೇಟ್ ಮತ್ತು 70% ಥಾಲೇಟ್ DEHP ಅನ್ನು ಒಳಗೊಂಡಿರುತ್ತದೆ ಎಂದು ಅವರು ಹೇಳಿದ್ದು, ಈ ಎರಡೂ ರಾಸಾಯನಿಕಗಳು ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಿವೆ ಎನ್ನಲಾಗಿದೆ.

ಇದನ್ನೂ ಓದಿ-Coronavirus Havoc: ಈ ದೇಶದಲ್ಲಿ ಮತ್ತೆ ವಿನಾಶ ಉಂಟು ಮಾಡುತ್ತಿದೆ ಕರೋನಾ

ಎಲ್ಲಿ ಬಳಕೆಯಾಗುತ್ತದೆ Phthalate?
ಸಂಶೋಧಕರ ಪ್ರಕಾರ, Phthalate ಒಂದು ವಿಧದ ರಾಸಾಯನಿಕವಾಗಿದ್ದು, ಸೌಂದರ್ಯವರ್ಧಕಗಳು, ವಿನೈಲ್ ಫ್ಲೋರಿಂಗ್, ಡಿಟರ್ಜೆಂಟ್‌ಗಳು, ಡಿಸ್ಪೋಸೆಬಲ್ ಹ್ಯಾಂಡ್ ಗ್ಲೋಸ್, ವೈರ್ ಕವರ್‌ಗಳಂತಹ ಉತ್ಪನ್ನಗಳಲ್ಲಿ ಹಲವು  ವರ್ಷಗಳಿಂದ ಬಳಸಲಾಗುತ್ತಿದೆ. ಈ ರಾಸಾಯನಿಕವು ಪ್ಲಾಸ್ಟಿಕ್ ಅನ್ನು ಮೃದು ಮತ್ತು ಬಾಗುವಂತೆ ಮಾಡಲು ಸಹಾಯ ಮಾಡುತ್ತದೆ, ಇದರಿಂದಾಗಿ ಉತ್ಪನ್ನದ ಅವಶ್ಯಕತೆಗೆ ಅನುಗುಣವಾಗಿ ಅದನ್ನು ರೂಪಿಸಬಹುದು. ಈ ರಾಸಾಯನಿಕಗಳು ಮಕ್ಕಳಲ್ಲಿ ಅಸ್ತಮಾ, ಗಂಭೀರ ಮೆದುಳಿನ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಇದಲ್ಲದೆ, ಅವು ವ್ಯಕ್ತಿಯ ಸಂತಾನೋತ್ಪತ್ತಿ ವ್ಯವಸ್ಥೆಯ ಮೇಲೂ ನೇರವಾಗಿ ಪರಿಣಾಮ ಬೀರುತ್ತವೆ ಎಂದು ಹೇಳಲಾಗಿದೆ. 

ಇದನ್ನೂ ಓದಿ-Facebook New Name: ಫೇಸ್‌ಬುಕ್‌ನ ಹೆಸರು ಬದಲಾವಣೆ

ಹೇಳಿಕೆ ಬಿಡುಗಡೆಗೊಳಿಸಿದ FDA
ಮಾಂಸದಿಂದ ತಯಾರಿಸಲಾಗುವ ಆಹಾರಗಳಾದ ಬರ್ರಿಟೊಗಳು ಮತ್ತು ಚೀಸ್ ಬರ್ಗರ್‌ಗಳು ಹೆಚ್ಚಿನ ಮಟ್ಟದ ರಾಸಾಯನಿಕಗಳನ್ನು ಹೊಂದಿದ್ದರೆ, ಚೀಸ್ ಪಿಜ್ಜಾಗಳು ಕಡಿಮೆ ಮಟ್ಟವನ್ನು ಈ ರಾಸಾಯನಿಕವನ್ನು ಹೊಂದಿರುತ್ತವೆ. ಸಂಶೋಧನಾ ಸಹವರ್ತಿ ಲಾರಿಯಾ ಎಡ್ವರ್ಡ್ಸ್ ಎಲ್ಲಾ ಮಾದರಿಗಳು ಒಂದೇ ನಗರದಿಂದ ಬಂದಿವೆ ಎಂಬುದನ್ನು ಒಪ್ಪಿಕೊಂಡಿದ್ದಾರೆ ಮತ್ತು ವಿಶ್ಲೇಷಣೆಯು ವಿವಿಧ ರೀತಿಯ ರೆಸ್ಟೋರೆಂಟ್‌ಗಳ ಮೇಲೆ ಕೇಂದ್ರೀತವಾಗಿರಲಿಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ, ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (FDA) ಈ ಅಧ್ಯಯನದ ಕುರಿತು ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದೆ. 

ಇದನ್ನೂ ಓದಿ-North Korea Food Crisis : ಈ ದೇಶದಲ್ಲಿ ಹಣದುಬ್ಬರ ಕಾರಣ ಚಹಾ ಪುಡಿ ಬೆಲೆ ₹5100/ಕೆಜಿ ಮತ್ತು ಶಾಂಪೂ ಬಾಟಲ್ ₹14000; ಬಾಳೆಹಣ್ಣು ಕೆಜಿಗೆ ₹3300!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Read More