Home> World
Advertisement

ದೆಹಲಿ-ಲಾಹೋರ್ ನಡುವಿನ ಬಸ್ ಸಂಚಾರ ರದ್ದು

  ಪಾಕಿಸ್ತಾನವು ದೆಹಲಿ-ಲಾಹೋರ್ ಬಸ್ ಸಂಚಾರವನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದರಿಂದ ದೆಹಲಿ ಸಾರಿಗೆ ನಿಗಮ (ಡಿಟಿಸಿ) ಸೋಮವಾರದಂದು ದೆಹಲಿ-ಲಾಹೋರ್ ಬಸ್ ಸೇವೆಯನ್ನು ರದ್ದುಗೊಳಿಸಿದೆ ಎಂದು ಸಾರಿಗೆ ಅಧಿಕಾರಿ ತಿಳಿಸಿದ್ದಾರೆ.

ದೆಹಲಿ-ಲಾಹೋರ್ ನಡುವಿನ ಬಸ್ ಸಂಚಾರ ರದ್ದು

ನವದೆಹಲಿ: ಪಾಕಿಸ್ತಾನವು ದೆಹಲಿ-ಲಾಹೋರ್ ಬಸ್ ಸಂಚಾರವನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದರಿಂದ ದೆಹಲಿ ಸಾರಿಗೆ ನಿಗಮ (ಡಿಟಿಸಿ) ಸೋಮವಾರದಂದು ದೆಹಲಿ-ಲಾಹೋರ್ ಬಸ್ ಸೇವೆಯನ್ನು ರದ್ದುಗೊಳಿಸಿದೆ ಎಂದು ಸಾರಿಗೆ ಅಧಿಕಾರಿ ತಿಳಿಸಿದ್ದಾರೆ.

ಪಾಕ್ ಇತ್ತೀಚಿಗೆ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಭಾರತ ರದ್ದುಪಡಿಸಿದ ಹಿನ್ನೆಲೆಯಲ್ಲಿ ರೈಲು ಸಂಚಾರವನ್ನು ರದ್ದುಪಡಿಸಿತ್ತು, ಇದಾದ ನಂತರ ಬಸ್ ಸಂಚಾರವನ್ನು ಅದು ಸ್ಥಗಿತಗೊಳಿವುದಾಗಿ ಹೇಳಿತ್ತು. ಈ ಹಿನ್ನಲೆಯಲ್ಲಿ ಡಿಟಿಸಿ ಬಸ್ ರಂಚಾರವನ್ನು ಸ್ಥಗಿತಗೊಳಿಸಿದೆ.

ಶನಿವಾರದಂದು ಪಾಕಿಸ್ತಾನದ ಹಿರಿಯ ಮಂತ್ರಿಯೊಬ್ಬರು ಸೋಮವಾರದಿಂದ ಬಸ್ ಸೇವೆಯನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿದ್ದಾರೆ. ದೆಹಲಿ ಸಾರಿಗೆ ನಿಗಮ (ಡಿಟಿಸಿ) ಬಸ್ ಸೋಮವಾರ ಬೆಳಿಗ್ಗೆ 6 ಗಂಟೆಗೆ ಲಾಹೋರ್‌ಗೆ ತೆರಳಬೇಕಿತ್ತು. ಆದರೆ, ಬಸ್ ಸೇವೆಯನ್ನು ಸ್ಥಗಿತಗೊಳಿಸುವ ಪಾಕಿಸ್ತಾನದ ನಿರ್ಧಾರದಿಂದಾಗಿ ಅದು ಹೋಗಲಿಲ್ಲ ಎಂದು ಅಧಿಕಾರಿ ಹೇಳಿದ್ದಾರೆ.

ದೆಹಲಿ-ಲಾಹೋರ್ ಬಸ್ ಸೇವೆಯನ್ನು ಸ್ಥಗಿತಗೊಳಿಸುವ ಪಾಕಿಸ್ತಾನದ ನಿರ್ಧಾರದಿಂದಾಗಿ ಆಗಸ್ಟ್ 12 ರಿಂದ ಡಿಟಿಸಿ ಬಸ್ ನ್ನು ದೆಹಲಿಯಿಂದ ಲಾಹೋರ್ ಗೆ ಕಳುಹಿಸಲು ಸಾಧ್ಯವಿಲ್ಲ ಎಂದು ಡಿಟಿಸಿ ಹೇಳಿಕೆ ನೀಡಿದೆ. ಪಾಕಿಸ್ತಾನ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಪಿಟಿಡಿಸಿ) ಶನಿವಾರ ಡಿಟಿಸಿಗೆ ಸೋಮವಾರದಿಂದ ಸೇವೆಯನ್ನು ಸ್ಥಗಿತಗೊಳಿಸುವ ಬಗ್ಗೆ ದೂರವಾಣಿ ಮೂಲಕ ತಿಳಿಸಿತ್ತು.

ಈ ಬಸ್ ಸೇವೆಯನ್ನು ಮೊದಲು ಫೆಬ್ರವರಿ 1999 ರಲ್ಲಿ ಪ್ರಾರಂಭಿಸಲಾಯಿತು ಆದರೆ 2001 ರ ಸಂಸತ್ತಿನ ದಾಳಿಯ ನಂತರ ಸ್ಥಗಿತಗೊಳಿಸಲಾಯಿತು. ನಂತರ ಇದನ್ನು ಜುಲೈ 2003 ರಲ್ಲಿ ಪುನರಾರಂಭಿಸಲಾಯಿತು.

Read More