Home> World
Advertisement

Coronavirus Vaccination: ಭಾರತದಲ್ಲಿ ಮಕ್ಕಳ ಕೋರೋನಾ ವ್ಯಾಕ್ಸಿನ್ ಪರೀಕ್ಷೆಗೆ ಅನುಮತಿ ಕೋರಿದ Johnson&Johnson

Johnson & Johnson Covid-19 Vaccine: ಮಕ್ಕಳಿಗಾಗಿ ಅಭಿವೃದ್ಧಿಪಡಿಸಲಾಗುತ್ತಿರುವ ಕೋವಿಡ್ -19 ಲಸಿಕೆಯ (Covid-19 Vaccine) ಕುರಿತು ನಡೆಯುತ್ತಿರುವ ಸಂಶೋಧನೆಯ ಫಲಿತಾಂಶಗಳು ಮುಂದಿನ ತಿಂಗಳು ಬರಬಹುದು ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ  (Union Health Minister Mansukh Mandavia) ಹೇಳಿದ ಸಮಯದಲ್ಲಿ ಜಾನ್ಸನ್ ಮತ್ತು ಜಾನ್ಸನ್ ಅನುಮತಿ ಕೋರಿದ ಸುದ್ದಿ ಬಂದಿದೆ.

Coronavirus Vaccination: ಭಾರತದಲ್ಲಿ ಮಕ್ಕಳ ಕೋರೋನಾ ವ್ಯಾಕ್ಸಿನ್ ಪರೀಕ್ಷೆಗೆ ಅನುಮತಿ ಕೋರಿದ Johnson&Johnson

ನವದೆಹಲಿ: Covid-19 Vaccine To Kids - ಭಾರತದಲ್ಲಿ ಮೂರನೇ ಅಲೆ ಕೊರೊನಾ ವೈರಸ್ (Coronavirus In India) ಸೋಂಕಿನ ಭಯದ ನಡುವೆ, ಮಕ್ಕಳಿಗೆ ಮತ್ತೊಂದು ಲಸಿಕೆಯ ಮಾರ್ಗ ತೆರೆಯುವ ಸಾಧ್ಯತೆ ಇದೆ. ಫಾರ್ಮಾ ಕಂಪನಿ Johnson & Johnson ಭಾರತದಲ್ಲಿ 12-17 ವರ್ಷ ವಯಸ್ಸಿನ ಮಕ್ಕಳಿಗೆ ಲಸಿಕೆಯನ್ನು ಪರೀಕ್ಷಿಸಲು ಅನುಮತಿ ಕೋರಿದೆ. ಮಕ್ಕಳಿಗಾಗಿ ಕೋವಿಡ್ -19 ಲಸಿಕೆಯನ್ನು ಅಭಿವೃದ್ಧಿಪಡಿಸುವುದರ ಕುರಿತು ನಡೆಯುತ್ತಿರುವ ಸಂಶೋಧನೆಯ ಫಲಿತಾಂಶಗಳು ಮುಂದಿನ ತಿಂಗಳು ಬರಬಹುದು ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಹೇಳಿರುವ ಹಿನ್ನೆಲೆ ಜಾನ್ಸನ್  ಅಂಡ್ ಜಾನ್ಸನ್ ಈ ಅನುಮತಿ ಕೋರಿರುವುದು ಭಾರಿ ಮಹತ್ವ ಪಡೆದುಕೊಂಡಿದೆ.

'ನಮ್ಮ ಗುರಿ ಪ್ರತಿಯೊಬ್ಬ ಪ್ರಜೆಗೂ ಲಸಿಕೆ ಸಿಗುವನ್ತಾಗಿಸುವುದಾಗಿದೆ. ಮಕ್ಕಳಿಗಾಗಿ ಕೋವಿಡ್ -19 ಲಸಿಕೆಯನ್ನು ಅಭಿವೃದ್ಧಿಪಡಿಸಲು ಸಂಶೋಧನೆ ನಡೆಸಲು ಜೈಡಸ್ ಕ್ಯಾಡಿಲಾ (Zydus Cadila) ಮತ್ತು ಭಾರತ್ ಬಯೋಟೆಕ್‌ಗೆ (Bharat Biotech)) ಭಾರತ ಸರ್ಕಾರ ಈಗಾಗಲೇ ಅನುಮತಿ ನೀಡಿದೆ. ಅವರ ಸಂಶೋಧನೆಯ ಫಲಿತಾಂಶಗಳು ಮುಂದಿನ ತಿಂಗಳು ಹೊರಬರುತ್ತವೆ ಎಂದು ನಾವು ನಿರೀಕ್ಷಿಸುತ್ತಿದ್ದೇವೆ. ಮಕ್ಕಳಿಗಾಗಿ ಲಸಿಕೆಗಳು ಶೀಘ್ರದಲ್ಲೇ ಲಭ್ಯವಾಗಲಿದೆ ಎಂಬ ಭರವಸೆ ನಮಗಿದೆ' ಮಾಂಡವಿಯಾ ಹೇಳಿದ್ದಾರೆ. 

ಇನ್ನೊಂದೆಡೆ AIIMS ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ಅವರೂ ಕೂಡ 2-18 ವರ್ಷದೊಳಗಿನವರ ಮೇಲೆ ಭಾರತ ಬಯೋಟಿಕ್ ಲಸಿಕೆ ಕೊವ್ಯಾಕ್ಸಿನ್ ಹಂತ 2 ಮತ್ತು 3 ಪ್ರಯೋಗಗಳ ದತ್ತಾಂಶ ಸೆಪ್ಟೆಂಬರ್ ವರೆಗೆ ಸಿಗುವ ಸಾದ್ಯತೆ ಇದೆ ಎಂದು ಹೇಳಿರುವುದು ಇಲ್ಲಿ ಗಮನಾರ್ಹ.

ಇದನ್ನೂ ಓದಿ-Corona Vaccination Latest Update: ಸೂರಿಲ್ಲದ ಭಿಕ್ಷುಕರ Vaccinationಗಾಗಿ ಕೇಂದ್ರ ಸರ್ಕಾರದ ಪ್ಲಾನ್, ರಾಜ್ಯಗಳಿಗೆ ಹೇಳಿದ್ದೇನು?

Zydus Cadila ಜೈಕೊವ್ ಡಿ 
ಇದಕ್ಕೂ ಮೊದಲು Zydus Cadila ಕಂಪನಿಯ Zycov-D Vaccineಗೆ ಅನುಮತಿ ಸಿಗುವ ಸಾಧ್ಯತೆ ಇದೆ ಎಂದು ಮೂಲಗಳು ವರದಿ ಮಾಡಿದ್ದವು. ಈ ವ್ಯಾಕ್ಸಿನ್ ಅನ್ನು ವಯಸ್ಕರ ಜೊತೆಗೆ 12-18 ವರ್ಷ ವಯಸ್ಸಿನ ಕಿಶೋರರಮೇಲೂ ಕೂಡ ಪರೀಕ್ಷೆ ನಡೆಸಲಾಗಿದೆ ಎನ್ನಲಾಗಿತ್ತು. DNA-ಪ್ಲಾಸ್ಮಾಯಿಡ್ ಆಧಾರಿತ  Zycov-D Vaccine ಮೂರು ಪ್ರಮಾಣಗಳ ಲಸಿಕೆಯಾಗಿದೆ. ಇದನ್ನು ಎರಡರಿಂದ ಮೂರು ಡಿಗ್ರಿ ಉಷ್ಣಾಂಶದಲ್ಲಿ ಸಂಗ್ರಹಿಸಬಹುದು ಹಾಗೂ ಕೋಲ್ಡ್ ಚೈನ್ ಅವಶ್ಯಕತೆ ಇದಕ್ಕೆ ಬೀಳುವುದಿಲ್ಲ ಎನ್ನಲಾಗಿದೆ.

ಇದನ್ನೂ ಓದಿ-Vaccine: ದಿನದ ಯಾವ ಸಮಯದಲ್ಲಿ ಲಸಿಕೆ ಹಾಕಿಸಿದರೆ ಉತ್ತಮ? ಅಧ್ಯಯನ ಏನ್ ಹೇಳುತ್ತೆ?

Zycov-D Vaccine ಅನ್ನು ದೇಶದ ಯಾವುದೇ ಭಾಗಕ್ಕೆ ಸುಲಭವಾಗಿ ಸಾಗಿಸಬಹುದು. ಈ ಲಸಿಕೆಗೆ ಬಯೋಟೆಕ್ನಾಲಜಿ ಇಂಡಸ್ಟ್ರಿ ರಿಸರ್ಚ್ ಅಸಿಸ್ಟೆನ್ಸ್ ಕೌನ್ಸಿಲ್ (BIRAC) ಅಡಿಯಲ್ಲಿ ರಾಷ್ಟ್ರೀಯ ಬಯೋಫಾರ್ಮಾ ಮಿಷನ್ (NBM) ಬೆಂಬಲ ದೊರೆತಿದೆ.

ಇದನ್ನೂ ಓದಿ-Coronavirus Vaccine: ಮಹಿಳೆಯರ ಫಲವತ್ತತೆಯ ಮೇಲೆ Corona Vaccine ಪ್ರಭಾವ! ತಜ್ಞರು ಹೇಳುವುದೇನು?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿ

Read More