Home> World
Advertisement

Coronavirus: ಮನೆಯಲ್ಲಿಯೇ ಕುಳಿತು ಕೊರೊನಾ ವೈರಸ್ ಟೆಸ್ಟ್ ಹೀಗೆ ಮಾಡಿ

ಕೊರೊನಾವೈರಸ್ ನ ಟೆಸ್ಟ್ ತೆಗೆದುಕೊಳ್ಳಲು ವಿಶ್ವದ ಖ್ಯಾತ ಸರ್ಚ್ ಇಂಜಿನ್ ದೈತ್ಯ ಗೂಗಲ್ ವೆಬ್ ಸೈಟ್ ವೊಂದನ್ನು ಸಿದ್ಧಪಡಿಸುತ್ತಿದೆ. ಇದನ್ನು ಮೊಟ್ಟ ಸ್ಯಾನ್ ಫ್ರಾನ್ಸಿಸ್ಕೊದ ಕಣಿವೆ ಪ್ರಾಂತ್ಯದಲ್ಲಿ ಇದನ್ನು ಮೊದಲು ಆನ್ಲೈನ್ ಮಾಡಲಾಗುತ್ತಿದೆ.

Coronavirus: ಮನೆಯಲ್ಲಿಯೇ ಕುಳಿತು ಕೊರೊನಾ ವೈರಸ್ ಟೆಸ್ಟ್ ಹೀಗೆ ಮಾಡಿ

ನವದೆಹಲಿ: ಚೀನಾ ಬಳಿಕ ಇದೆ ವಿಶ್ವಾದ್ಯಂತ ವೇಗವಾಗಿ ಹರಡಿರುವ ಕೊರೊನಾ ವೈರಸ್ ಇದೀಗ ತನ್ನ ಪ್ರಭಾವ ತೋರಿಸಲು ಆರಂಭಿಸಿದೆ. ಭಾರತದಲ್ಲಿ ಈ ಮಹಾಮಾರಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲಾಗಿದೆ. ಇದರಿಂದ ಎಚ್ಚೆತ್ತುಕೊಂಡ ವಿಶ್ವದ ಖ್ಯಾತ ಸರ್ಚ್ ಇಂಜಿನ್ ದೈತ್ಯ ಗೂಗಲ್ ಕೊರೊನಾ ವೈರಸ್ ನ ಪರೀಕ್ಷೆಗಾಗಿ ವೆಬ್ ಸೈಟ್ ವೊಂದನ್ನು ಕೂಡ ಸಿದ್ಧಪಡಿಸುತ್ತಿದ್ದು, ಈ ವೆಬ್ಸೈಟ್ ಒಂದು ವೈರಸ್ ಟ್ರೈಏಜ್ ಟೂಲ್ ಆಗಿದೆ. ಇದನ್ನು ವರ್ಲಿ ಅಭಿವೃದ್ಧಿಗೊಳಿಸುತ್ತಿದ್ದು, ವರ್ಲಿ ಅಲ್ಫಾಬೆಟ್ ನ ಆರೋಗ್ಯಕ್ಕೆ ಸಂಬಂಧಿಸಿದ ಸಂಸ್ಥೆಯಾಗಿದೆ. ಇದು ವರ್ಲಿಯ ಪ್ರಾಜೆಕ್ಟ್ ಬೇಸ್ಲೈನ್ ನ ಭಾಗವಾಗಿರಲಿದೆ. ಗೂಗಲ್ ನ ಈ ವೈರಸ್ ತಪಾಸಣೆಯ ವೆಬ್ಸೈಟ್ ಸದ್ಯ ಪ್ರಾರಂಭಿಕ ಹಂತದಲ್ಲಿದ್ದು, ಸ್ಯಾನ್ ಫ್ರಾನ್ಸಿಸ್ಕೊದ ಕಣಿವೆ ಪ್ರಾಂತ್ಯದಲ್ಲಿ ಸೋಮವಾರ ಮೊಟ್ಟಮೊದಲ ಬಾರಿಗೆ ಇದನ್ನು ಲಾಂಚ್ ಮಾಡಲಾಗುತ್ತಿದೆ.

ಶುಕ್ರವಾರ ವೈಟ್ ಹೌಸ್ ನ ರೋಜ್ ಗಾರ್ಡನ್ ನಲ್ಲಿ ನಡೆದ ಸುದ್ದಿಗೋಷ್ಠಿಯೊಂದರಲ್ಲಿ ಈ ಕುರಿತು ಮಾಹಿತಿ ನೀಡಿರುವ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಕೊರೊನಾ ವೈರಸ್ ಪರೀಕ್ಷೆಗಾಗಿ ಗೂಗಲ್ ಒಂದು ವೆಬ್ಸೈಟ್ ವೊಂದನ್ನು ಸಿದ್ಧಪಡಿಸುತ್ತಿದೆ ಎಂದಿದ್ದರು. ಗೂಗಲ್ ಸಂಸ್ಥೆಯ ಸುಮಾರು 1700 ಇಂಜಿನಿಯರ್ ಗಳು ಈ ವೆಬ್ಸೈಟ್ ಸಿದ್ಧಪಡಿಸಲು ಶ್ರಮಿಸುತ್ತಿದ್ದಾರೆ ಎಂದು ಟ್ರಂಪ್ ಹೇಳಿದ್ದರು. ಈ ಕುರಿತು ಹೇಳಿಕೆ ನೀಡಿದ್ದ ಅವರು, ಈ ವೆಬ್ ಸೈಟ್ ಜನರಿಗೆ ಕೊರೊನಾ ವೈರಸ್ ಟೆಸ್ಟ್ ಪಡೆಯಬೇಕೆ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಲು ಸಹಕರಿಸಲಿದೆ ಹಾಗೂ ಹತ್ತಿರದಲ್ಲಿರುವ ಆರೋಗ್ಯ ತಪಾಸಣಾ ಕೇಂದ್ರದ ಬಗ್ಗೆಯೂ ಸಹ ಮಾಹಿತಿ ನೀಡಲಿದೆ. ಈ ಕೇಂದ್ರಗಳಲ್ಲಿ ವಾಲ್ ಮಾರ್ಟ್ ಹಾಗೂ ಪಾರ್ಕಿಂಗ್ ಸ್ಥಳಗಳ ಡ್ರೈವ್-ಥ್ರೂ ಟೆಸ್ಟ್ ಸೆಂಟರ್ ಗಳೂ ಕೂಡ ಶಾಮೀಲಾಗಿರಲಿವೆ ಎಂದಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ವರ್ಲಿ ಸಂಸ್ಥೆಯ ವಕ್ತಾರ ಕೈರೋಲಿನಾ ವಾಂಗ್, ಬರುವ ಸೋಮಾವಾರದವರೆಗೆ ಈ ವೆಬ್ಸೈಟ್ ಅನ್ನು ಬಿಡುಗಡೆಗೊಳಿಸಲು ಯೋಜನೆ ರೂಪಿಸಲಾಗಿದೆ ಎಂದಿದ್ದಾರೆ. ಈ ಕುರಿತು ಕಂಪನಿಯ ನೌಕರರನ್ನು ಸಂಬೋಧಿಸಿರುವ ಅಲ್ಫಾಬೆಟ್ ಸಂಸ್ಥೆಯ CEO ಸುಂದರ್ ಪಿಚೈ, ವರ್ಲಿ ಹಾಗೂ ಗೂಗಲ್ ಈ ಪರೀಕ್ಷೆಗೆ ಸಹಕರಿಸಲಿವೆ ಎಂದಿದ್ದಾರೆ. ಈ ಕುರಿತು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ನಮಗೆ ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷಾ ಕಿಟ್ ಗಳು ಲಭಿಸಿದ ಸಂದರ್ಭಗಳಲ್ಲಿ, ನಾವು ಬೇಸ್ ಲೈನ್ ವೆಬ್ಸೈಟ್ ಮೇಲೆ ಸಾರ್ವಜನಿಕ ಆರೋಗ್ಯ ಹಾಗೂ ಆರೋಗ್ಯ ರಕ್ಷಣಾ ಎಜಿನ್ಸಿಗಳ ಜೊತೆಗೆ ಕನೆಕ್ಟ್ ಮಾಡಲು ಮಾರ್ಗಗಳನ್ನು ಹುಡುಕುತ್ತಿರುವುದಾಗಿ ಹೇಳಿದ್ದಾರೆ. ಇವುಗಳಲ್ಲಿ ಕೊರೊನಾ ವೈರಸ್ ಪ್ರಭಾವಕ್ಕೆ ಒಳಗಾಗಿರುವ ಜನರಿಗೆ ನೂತನ ರೀತಿಯ ಮಾರ್ಗದರ್ಶನದ ಆಧಾರದ ಮೇಲೆ ಪರೀಕ್ಷಾ ಸೈಟ್ ಮೇಲೆ ನಿರ್ದೇಶನಗಳನ್ನು ನೀಡಲಾಗುವುದು ಎಂದಿದ್ದಾರೆ.

ಇದುವರೆಗೆ ಕೊರೊನಾ ವೈರಸ್ ನಿಂದ ಸುಮಾರು 5000 ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ. ಭಾರತದಲ್ಲಿಯೂ ಕೂಡ ಈ ವೈರಸ್ ಸೋಂಕಿಗೆ ಇಬ್ಬರು ಬಲಿಯಾಗಿದ್ದು, ಈ ಸೋಂಕಿಗೆ ಗುರಿಯಾದ ರೋಗಿಗಳ ಸಂಖ್ಯೆ 93 ಕ್ಕೆ ತಲುಪಿದೆ. ಮಾರ್ಚ್ 10, 2020ಕ್ಕೆ 76 ವರ್ಷ ವಯಸ್ಸಿನ ಮೊಹಮ್ಮದ್ ಹುಸ್ಸೈನ್ ಸಿದ್ಧಿಕಿ ಈ ವೈರಸ್ ಸೋಂಕಿಗೆ ಬಲಿಯಾದ ಮೊದಲ ವ್ಯಕ್ತಿಯಾಗಿದ್ದಾರೆ. ಇನ್ನೊಂದೆಡೆ ಕೊರೊನಾ ವೈರಸ್ ನಿಂದ ವ್ಯಕ್ತಿ ಸಾವನ್ನಪ್ಪಿದ ಎರಡನೇಯ ಪ್ರಕರಣ ದೆಹಲಿಯಲ್ಲಿ ಪತ್ತೆಯಾಗಿದೆ.

Read More