Home> World
Advertisement

Power Blackout : ಕರೆಂಟ್ ಇಲ್ಲದೇ ಕಂಗಾಲಾಗಿ ಹೋದ ಸಂಪೂರ್ಣ ಪಾಕಿಸ್ತಾನ, ಆಗಿದ್ದೇನು..?

ರಾಷ್ಟ್ರೀಯ ಪವರ್ ಗ್ರಿಡ್ ನಲ್ಲಿ ದೋಷ ಕಂಡುಬಂದ ಹಿನ್ನೆಲೆಯಲ್ಲಿ, ಇಡೀ ಪಾಕಿಸ್ತಾನ ಕತ್ತಲಲ್ಲಿ ಮುಳುಗಿ ಹೋಗಿದೆ.

Power Blackout : ಕರೆಂಟ್ ಇಲ್ಲದೇ ಕಂಗಾಲಾಗಿ ಹೋದ ಸಂಪೂರ್ಣ ಪಾಕಿಸ್ತಾನ, ಆಗಿದ್ದೇನು..?

ಇಸ್ಲಾಮಾಮಾಬಾದ್: ಭಾರತದ ವಿಚಾರದಲ್ಲಿ ಅನಗತ್ಯ ಹಸ್ತಕ್ಷೇಪ  ಮಾಡುವ  ಇದೀಗ ವಿಶ್ವ ಮಟ್ಟದಲ್ಲಿ ಮತ್ತೊಮ್ಮೆ ನಗೆಪಾಟೀಲಿಗೆ ಈಡಾಗಿದೆ.  ಸಂಪೂರ್ಣ ಪಾಕಿಸ್ತಾನದ ಮಾನ ಮರ್ಯಾದೆ ಹರಾಜಾಗಿದೆ. ಭಾರತದೊಂದಿಗೆ ಕಾಲು ಕೆರೆದು ಜಗಳಕ್ಕೆ ಬರುವ ಪಾಕಿಸ್ತಾನದಲ್ಲಿ ಆಗಿದ್ದಾದರೂ ಏನು. ?

ಪಾಕಿಸ್ತಾನದ ಶೇ. 80 ರಷ್ಟು ಭಾಗದಲ್ಲಿ ಕರೆಂಟ್ ಕಟ್..

ಪಾಕಿಸ್ತಾನ  (Pakistan) ಸಂಪೂರ್ಣ ಕತ್ತಲಲ್ಲೇ ಮುಳುಗಿ ಹೋದ ಪ್ರಕರಣ ವರದಿಯಾಗಿದೆ.  ದೇಶದ ಸುಮಾರು ಶೇಕಡಾ 80 ರಷ್ಟು ಭಾಗಗಲ್ಲಿ ಸಂಪೂರ್ಣ ಕರೆಂಟ್ ಕಟ್  (Power cut).  ಇಸ್ಲಾಮಾಬಾದ್, (Islamabad)  ಕರಾಚಿ, ಲಾಹೋರ್ (Lahore), ಕ್ವೆಟ್ಟಾ ಇತ್ಯಾದಿ ಪ್ರಮುಖ ನಗರಗಳಲ್ಲಿಯೂ ವಿದ್ಯುತ್ ಸ್ತಬ್ದ. ಜನ ಜೀವನ ಸಂಪೂರ್ಣ  ಅಸ್ತವ್ಯಸ್ತವಾಗಿತ್ತು. ಬಿಲ್ಡಿಂಗ್ ಗಳಲ್ಲಿ ಲಿಫ್ಟ್ ಬಂದ್, ರಸ್ತೆಯಲ್ಲಿ   ಸಿಗ್ನಲ್ ಕಾರ್ಯನಿರ್ವಹಿಸದೇ ಪ್ರಯಾಣಿಕರು ಪರದಾಡಬೇಕಾದ ಸ್ಥಿತಿ. ಕರೆಂಟ್ ಇಲ್ಲದೆ ಆಸ್ಪತ್ರೆಗಳಲ್ಲೂ ಆತಂಕ ಆವರಿಸಿತ್ತು. ಇಡೀ ಪಾಕಿಸ್ತಾನದಲ್ಲಿ ಕಗ್ಗತ್ತಲು. ಕಾರ್ಗಾಲದ ರಾತ್ರಿ ಸೃಷ್ಟಿಯಾಗಿತ್ತು. 

ಇದನ್ನೂ ಓದಿ : ಲಡಾಖ್‌ನ ಎಲ್‌ಎಸಿ ಗಡಿಯಲ್ಲಿ ಚೀನಾದ ಸೈನಿಕನ ಬಂಧನ

ಪವರ್ ಗ್ರಿಡ್ ನಲ್ಲಿ ದೋಷ, ಕತ್ತಲಲ್ಲಿ ಪಾಕಿಸ್ತಾನ : 
ಭಾರತದಿಂದ ಕಾಶ್ಮೀರವನ್ನು ಕಿತ್ತುಕೊಳ್ಳುತ್ತೇವೆ ಎಂದು ಚಾಲೆಂಜ್ ಮಾಡುವ ಪಾಕಿಸ್ತಾನ, ಒಂದು ಪವರ್ ಗ್ರಿಡ್ ನ್ನು(Powergrid) ವ್ಯವಸ್ಥಿತವಾಗಿ ನಿರ್ವಹಿಸಲು ಆಗದೆ ಪರದಾಡುತ್ತಿದೆ.  ಪಾಕಿಸ್ತಾನದಲ್ಲಿ ಆಗಿದಿಷ್ಟೆ.. ರಾಷ್ಟ್ರೀಯ ಪವರ್ ಗ್ರಿಡ್ ನಲ್ಲಿ ತಾಂತ್ರಿಕ ದೋಷ ಕಂಡು ಬಂದಿತ್ತು. ಹಾಗಾಗಿ, ಪವರ್ ಟ್ರಿಪ್ (Power Trip) ಆಗಿತ್ತು. ಪರಿಣಾಮ ಸಂಪೂರ್ಣ ಪಾಕಿಸ್ತಾನ ಕತ್ತಲಲ್ಲಿ ಮುಳುಗಿ ಹೋಗಿತ್ತು. ಈ ಕುರಿತು ಮಾಹಿತಿ ನೀಡಿದ ಪಾಕಿಸ್ತಾನ  ಇಂಧನ ಸಚಿವ ಓಮರ್ ಅಯೂಬ್ ಖಾನ್, ವಿದ್ಯುತ್ ಆವರ್ತನ ವ್ಯವಸ್ಥೆಯಲ್ಲಿ ಉಂಟಾದ ಹಠಾತ್ ಕುಸಿತದಿಂದಾಗಿ, ವಿದ್ಯುತ್ ಕಡಿತ ಉಂಟಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. 

ಪವರ್ ಗ್ರಿಡ್ ದೋಷ ಬಗೆಹರಿಸಲು ಹೆಣಗಾಟ :
ಪಾಕಸ್ತಾನದ ಪ್ರಮುಖ ನಗರಗಳಲ್ಲಿ ಸಂಪೂರ್ಣವಾಗಿ ಕತ್ತಲು ಆವರಿಸಿದ್ದು, ತಾಂತ್ರಿಕ ದೋಷ ಸರಿಪಡಿಸಲು ಪಾಕಿಸ್ತಾನ ರಾಷ್ಟ್ರೀಯ ಪವರ್ ಗ್ರಿಡ್‌ ಹೆಣಗಾಡುತ್ತಿದೆ
ಕರಾಚಿ, ಲಾಹೋರ್, ರಾವಲ್‌ಪಿಂಡಿ, ಮುಲ್ತಾನ್ ಸೇರಿದಂತೆ ಪ್ರಮುಖ ನಗರಗಳು ವಿದ್ಯುತ್ ವ್ಯತ್ಯಯವನ್ನು ಎದುರಿಸಿವೆ. . ಪಾಕ್ ಆಕ್ರಮಿತ ಕಾಶ್ಮೀರ(POK) ಭಾಗದಲ್ಲೂ ವ್ಯತ್ಯಯ ಕಂಡುಬಂದಿದೆ.

ಇದನ್ನೂ ಓದಿ : ಜಾಗತಿಕ ಉಗ್ರ Masood Azhar ಬಂಧನಕ್ಕೆ ಜ.18 ಡೆಡ್ಲೈನ್

ಸದ್ಯ ತಾಂತ್ರಿಕ ದೋಷ ನಿವಾರಣೆಗೆ ಪಾಕಿಸ್ತಾನದ ರಾಷ್ಟ್ರೀಯ ಪವರ್ ಗ್ರಿಡ್ ಮುಂದಾಗಿದ್ದು, ಶೀಘ್ರದಲ್ಲೇ ವಿದ್ಯುತ್ ಸೇವೆ ದೊರೆಯಲಿದೆ ಎಂದು ಸಚಿವ ಒಮರ್ ಅಯೂಬ್ ಖಾನ್ ಭರವಸೆ ನೀಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More