Home> World
Advertisement

Watch:ಭಾರೀ ಮಳೆಯ ಬೆನ್ನಲ್ಲೇ ವಿಲಕ್ಷಣ 'ಏಲಿಯನ್ ತರಹದ' ಜೀವಿ ಪತ್ತೆ!

Viral Video: ಸಿಡ್ನಿಯಲ್ಲಿ ಭಾರೀ ಮಳೆಯ ಬೆನ್ನಲ್ಲೇ ವಿಲಕ್ಷಣ 'ಏಲಿಯನ್ ತರಹದ' ಜೀವಿ ಪತ್ತೆಯಾಗಿದೆ. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್ ಆಗುತ್ತಿದೆ. 

Watch:ಭಾರೀ ಮಳೆಯ ಬೆನ್ನಲ್ಲೇ ವಿಲಕ್ಷಣ 'ಏಲಿಯನ್ ತರಹದ' ಜೀವಿ ಪತ್ತೆ!

ನವದೆಹಲಿ: ಆಸ್ಟ್ರೇಲಿಯಾದ ಸಿಡ್ನಿಯ ಬೀದಿಯಲ್ಲಿ ಕುತೂಹಲದಿಂದ ಕಾಣುವ ಜೀವಿ ಪತ್ತೆಯಾಗಿದ್ದು, ಈ ವಿಚಾರ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್ (Video Viral) ಆಗುತ್ತಿದೆ. 

ಇದನ್ನೂ ಓದಿ: ಕೇಂದ್ರ ನೌಕರರಿಗೆ ಸಿಹಿ ಸುದ್ದಿ : ನಿಮ್ಮ ವೇತನದಲ್ಲಿ ₹20,484 ಏರಿಕೆ, ಮಾರ್ಚ್ 16 ರಂದು ಪ್ರಕಟ!

ಭ್ರೂಣವನ್ನು ಹೋಲುವ ಈ ವಿಚಿತ್ರ ಪ್ರಾಣಿಯ ವಿಡಿಯೋವನ್ನು ಇನ್ಸ್ಟಾಗ್ರಾಮ್ (Instagram) ಬಳಕೆದಾರ ಹ್ಯಾರಿ ಹೇಯ್ಸ್ ಎಂಬುವವರು ಹಂಚಿಕೊಂಡಿದ್ದಾರೆ.

 

 
 
 
 

 
 
 
 
 
 
 
 
 
 
 

A post shared by @_harryhayes

 

ಫೆಬ್ರವರಿ 28 ರಂದು ಬೆಳಿಗ್ಗೆ ಸಿಡ್ನಿಯ ಮಾರಿಕ್‌ವಿಲ್ಲೆ ಉಪನಗರದ ಮೂಲಕ ಜಾಗಿಂಗ್ ಮಾಡುತ್ತಿದ್ದಾಗ ಈ ವಿಚಿತ್ರವಾಗಿ ಕಾಣುವ ಜೀವಿಯನ್ನು (Alien) ಕಂಡಿದ್ದೇನೆ ಎಂದು ಹ್ಯಾರಿ ಹೇಯ್ಸ್ ತಿಳಿಸಿದ್ದಾರೆ. 1,144 ಲೈಕ್‌ಗಳನ್ನು ಈ ಕ್ಲಿಪ್ ಪಡೆದಿದೆ.  

ಇದನ್ನೂ ಓದಿ: ಮೋದಿಗೆ ಧನ್ಯವಾದ ಹೇಳಿದ ಉಕ್ರೇನ್ ನಲ್ಲಿ ಸಿಲುಕಿಹಾಕಿಕೊಂಡ ಪಾಕಿಸ್ತಾನದ ಯುವತಿ..! ಕಾರಣ ಇಲ್ಲಿದೆ

ಏತನ್ಮಧ್ಯೆ, ಆಸ್ಟ್ರೇಲಿಯಾದ ಅತ್ಯಂತ ಜನನಿಬಿಡ ನಗರವಾದ ಸಿಡ್ನಿಯಲ್ಲಿ ಕಳೆದ ವಾರದಿಂದ ಭಾರೀ ಮಳೆ ಸುರಿಯುತ್ತಿದೆ. ದೇಶದ ಪೂರ್ವ ಭಾಗದಾದ್ಯಂತ ಪ್ರವಾಹದಿಂದ ಸತ್ತವರ ಸಂಖ್ಯೆ ಶನಿವಾರ (ಮಾರ್ಚ್ 5) ದಂದು  17 ಕ್ಕೆ ತಲುಪಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More