Home> World
Advertisement

ಪಾಕ್ ಅಭಿವೃದ್ದಿ ಯೋಜನೆಗಳಲ್ಲಿ 1 ಬಿಲಿಯನ್ ಡಾಲರ್ ಹೂಡಿಕೆಗೆ ಚೀನಾ ಚಿಂತನೆ

ಪಾಕಿಸ್ತಾನದ ಅಭಿವೃದ್ಧಿ ಯೋಜನೆಗಳಲ್ಲಿ ಬೀಜಿಂಗ್ 1 ಬಿಲಿಯನ್  ಡಾಲರ್ ಹೂಡಿಕೆ ಮಾಡಲು ಯೋಜಿಸಿದೆ ಎಂದು ಪಾಕಿಸ್ತಾನದ ಚೀನಾದ ರಾಯಭಾರಿ ಯಾವೋ ಜಿಂಗ್ ಘೋಷಿಸಿದ್ದಾರೆ.

ಪಾಕ್ ಅಭಿವೃದ್ದಿ ಯೋಜನೆಗಳಲ್ಲಿ 1 ಬಿಲಿಯನ್ ಡಾಲರ್ ಹೂಡಿಕೆಗೆ ಚೀನಾ ಚಿಂತನೆ

ಇಸ್ಲಾಮಾಬಾದ್: ಪಾಕಿಸ್ತಾನದ ಅಭಿವೃದ್ಧಿ ಯೋಜನೆಗಳಲ್ಲಿ ಬೀಜಿಂಗ್ 1 ಬಿಲಿಯನ್  ಡಾಲರ್ ಹೂಡಿಕೆ ಮಾಡಲು ಯೋಜಿಸಿದೆ ಎಂದು ಪಾಕಿಸ್ತಾನದ ಚೀನಾದ ರಾಯಭಾರಿ ಯಾವೋ ಜಿಂಗ್ ಘೋಷಿಸಿದ್ದಾರೆ. ಇಸ್ಲಾಮಾಬಾದ್ ಮಹಿಳಾ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ (ಐಡಬ್ಲ್ಯೂಸಿಸಿಐ) ಯನ್ನು ಉದ್ದೇಶಿಸಿ ಮಾತನಾಡುವ ವೇಳೆ ಅವರು ಈ ಘೋಷಣೆ ಮಾಡಿದ್ದಾರೆ ಎಂದು ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ.

ಇದಲ್ಲದೆ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ಅಡಿಯಲ್ಲಿ ಅಭಿವೃದ್ಧಿ ಯೋಜನೆಗಳ ವೇಗವು ತೃಪ್ತಿಕರವಾಗಿದೆ ಮತ್ತು ಚೀನಾ-ಪಾಕಿಸ್ತಾನ ಮುಕ್ತ ವ್ಯಾಪಾರ ಒಪ್ಪಂದದ (ಸಿಪಿಎಫ್‌ಟಿಎ) ಎರಡನೇ ಹಂತವನ್ನು ಅಕ್ಟೋಬರ್‌ನಲ್ಲಿ ಅಂತಿಮಗೊಳಿಸಲಾಗುವುದು ಎಂದು ಹೇಳಿದರು. ಶೇಕಡಾ 90 ರಷ್ಟು ಪಾಕಿಸ್ತಾನಿ ಕೃಷಿ ಉತ್ಪನ್ನಗಳು ಮತ್ತು ಸಮುದ್ರಾಹಾರ ಸೇರಿದಂತೆ ರಪ್ತಿಗೆ ಶೂನ್ಯ ತೆರಿಗೆ ವಿಧಿಸಲಿದೆ ಎಂದು ಅವರು ತಿಳಿಸಿದರು. 

ಈ ಕ್ರಮದಿಂದಾಗಿ ಮಾರುಕಟ್ಟೆ ಪ್ರವೇಶವು ಪಾಕಿಸ್ತಾನದ ರಫ್ತುಗಳನ್ನು 500 ಮಿಲಿಯನ್ ಗೆ ಹೆಚ್ಚಿಸುತ್ತದೆ, ಆ ಮೂಲಕ ಇದು ದ್ವಿಪಕ್ಷೀಯ ವ್ಯಾಪಾರದ ನಡುವಿನ ಅಸಮಾನತೆಯನ್ನು ಕಡಿಮೆ ಮಾಡುತ್ತದೆ' ಎಂದು ಯಾವ್ ಹೇಳಿದರು. ಮಾರುಕಟ್ಟೆಯನ್ನು ಅನ್ವೇಷಿಸಲು ಮತ್ತು ನೆಟ್‌ವರ್ಕಿಂಗ್ ಅನ್ನು ಉತ್ತೇಜಿಸಲು ನವೆಂಬರ್‌ನಲ್ಲಿ ನಡೆಯಲಿರುವ ಐದನೇ ಇಸ್ಲಾಮಾಬಾದ್ ಎಕ್ಸ್‌ಪೋದಲ್ಲಿ ಭಾಗವಹಿಸಲು ಚೀನಾದ ಉದ್ಯಮಿಗಳನ್ನು ಆಹ್ವಾನಿಸಲಾಗುವುದು ಎಂದು ರಾಯಭಾರಿ ಹೇಳಿದ್ದಾರೆ.

ಇದಲ್ಲದೆ, ಪಾಕಿಸ್ತಾನದ ಮಹಿಳಾ ಉದ್ಯಮಿಗಳನ್ನು ಚೀನಾಕ್ಕೆ ಕಳುಹಿಸಲಾಗುವುದು ಮತ್ತು ಪ್ರದರ್ಶನಗಳಲ್ಲಿ ಭಾಗವಹಿಸಲು ಮತ್ತು ವ್ಯಾಪಾರ ಅವಕಾಶಗಳನ್ನು ಅನ್ವೇಷಿಸಲು ಎಂದು ಅವರು ಹೇಳಿದರು.
 

Read More