Home> World
Advertisement

ಶಾಕಿಂಗ್! ಚೀನಾದಲ್ಲಿ ಮತ್ತೊಂದು ಭಯಾನಕ ವೈರಸ್ ಪತ್ತೆ: ಇದುವರೆಗೆ 7 ಸಾವು

ಈ ಕಾಯಿಲೆಯಿಂದ ಈವರೆಗೆ ಏಳು ಜನರು ಸಾವನ್ನಪ್ಪಿದ್ದಾರೆ ಮತ್ತು 60ಕ್ಕೂ ಹೆಚ್ಚು ಜನರು ಸೋಂಕಿಗೆ ಒಳಗಾಗಿದ್ದಾರೆ ಎಂದು ವರದಿಯಾಗಿದೆ.

ಶಾಕಿಂಗ್! ಚೀನಾದಲ್ಲಿ ಮತ್ತೊಂದು ಭಯಾನಕ ವೈರಸ್ ಪತ್ತೆ: ಇದುವರೆಗೆ 7 ಸಾವು

ಬೀಜಿಂಗ್: ಕರೋನಾವೈರಸ್ ಬಿಕ್ಕಟ್ಟಿನ ಮಧ್ಯೆ ಚೀನಾದಿಂದ ಬಂದ ಸುದ್ದಿ ಮತ್ತೊಮ್ಮೆ ಜಗತ್ತಿಗೆ ಬೆದರಿಕೆ ಒಡ್ಡಿದೆ. ಚೀನಾದಲ್ಲಿ ಮತ್ತೊಂದು ಸಾಂಕ್ರಾಮಿಕ ರೋಗ ಹರಡುತ್ತಿದೆ. ಈ ಕಾಯಿಲೆಯಿಂದ ಈವರೆಗೆ ಏಳು ಜನರು ಸಾವನ್ನಪ್ಪಿದ್ದಾರೆ ಮತ್ತು 60ಕ್ಕೂ ಹೆಚ್ಚು ಜನರು ಸೋಂಕಿಗೆ ಒಳಗಾಗಿದ್ದಾರೆ ಎಂದು ವರದಿಯಾಗಿದೆ. ಚೀನಾದ (China)ಅಧಿಕೃತ ಮಾಧ್ಯಮಗಳು ಈ ಬಗ್ಗೆ ಬುಧವಾರ ಮಾಹಿತಿ ನೀಡಿವೆ.

ಚೀನಾದ ಅಧಿಕೃತ ಮಾಧ್ಯಮಗಳು ಬುಧವಾರ ಈ ಮಾಹಿತಿಯನ್ನು ನೀಡಿವೆ. ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ಈ ರೋಗ ಹರಡುವ ಸಾಧ್ಯತೆಯ ದೃಷ್ಟಿಯಿಂದ ಚೀನಾದಲ್ಲಿ ಎಚ್ಚರಿಕೆ ನೀಡಲಾಗಿದೆ. ಅಂದಹಾಗೆ ಈ ವರ್ಷದ ಮೊದಲಾರ್ಧದಲ್ಲಿ ಪೂರ್ವ ಚೀನಾದ ಜಿಯಾಂಗ್ಸು ಪ್ರಾಂತ್ಯದಲ್ಲಿ 37ಕ್ಕೂ ಹೆಚ್ಚು ಜನರು SFTS ವೈರಸ್‌ಗೆ ತುತ್ತಾಗಿದ್ದರು. ಇದರ ನಂತರ, ಪೂರ್ವ ಚೀನಾದ ಅನ್ಹುಯಿ ಪ್ರಾಂತ್ಯದಲ್ಲಿ 23 ಜನರು ಸೋಂಕಿಗೆ ಒಳಗಾಗಿದ್ದಾರೆ ಮತ್ತು ಈಗ ಈ ಸಂಖ್ಯೆ ಹೆಚ್ಚುತ್ತಿದೆ.

ಕರೋನಾವೈರಸ್‌ನ ಮೂಲವನ್ನು ಕಂಡುಹಿಡಿದ ಮೊದಲ ತಂಡ ಯಾವುದು? WHO ಹೇಳಿದ್ದೇನು?

ಮಾಧ್ಯಮ ವರದಿಗಳ ಪ್ರಕಾರ ವೈರಸ್‌ನಿಂದ ಬಳಲುತ್ತಿರುವ ಮಹಿಳೆ ಮೊದಲು ಜ್ವರ, ಕೆಮ್ಮಿನಂತಹ ಲಕ್ಷಣಗಳನ್ನು ತೋರಿಸಿದರು. ಇದರ ನಂತರ ಅವರ ದೇಹದಲ್ಲಿ ಲ್ಯುಕೋಸೈಟ್ ಇರುವುದನ್ನು ವೈದ್ಯರು ಕಂಡುಕೊಂಡರು ಮತ್ತು ಪ್ಲೇಟ್‌ಲೆಟ್‌ಗಳು ಕಡಿಮೆಯಾಗಿರುವುದು ಗಮನಕ್ಕೆ ಬಂದಿದೆ. ಆದರೆ ಒಂದು ತಿಂಗಳ ಚಿಕಿತ್ಸೆಯ ನಂತರ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ವೈರಸ್‌ನಿಂದಾಗಿ ಪೂರ್ವ ಚೀನಾದ ಅನ್ಹುಯಿ ಮತ್ತು ಝೆಜಿಯಾಂಗ್ ಪ್ರಾಂತ್ಯದಲ್ಲಿ ಕನಿಷ್ಠ ಏಳು ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕೃತ ಪತ್ರಿಕೆ ಗ್ಲೋಬಲ್ ಟೈಮ್ಸ್ ಹೇಳಿದೆ.

59 ಚೀನೀ ಆ್ಯಪ್‌ಗಳ ನಿಷೇಧದ ಬಳಿಕ ಚೀನಾದ ಕಂಪನಿಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ ಸರ್ಕಾರ

ಅಂದಹಾಗೆ SFTS ವೈರಸ್ ಚೀನಾಕ್ಕೆ ಹೊಸದೇನಲ್ಲ. ಇದು ಚೀನಾದಲ್ಲಿ 2011ರಲ್ಲಿ ಪತ್ತೆಯಾಗಿದೆ, ಆದರೆ ಕರೋನಾ ಬಿಕ್ಕಟ್ಟಿನ ಮಧ್ಯೆ ಅದರ ಹೊಸ ಪ್ರಕರಣಗಳು ಬರುತ್ತಿರುವುದು ಎಲ್ಲರ ಕಳವಳವನ್ನು ಹೆಚ್ಚಿಸಿದೆ. ಪ್ರಾಣಿಗಳ ದೇಹಕ್ಕೆ ಅಂಟಿಕೊಳ್ಳುವಂತಹ ಉಣ್ಣೆಗಳಂತಹ ಕೀಟಗಳಿಂದ ಈ ಸೋಂಕು ಮನುಷ್ಯರಿಗೆ ಹರಡಬಹುದು ಮತ್ತು ನಂತರ ಅದು ವೇಗವಾಗಿ ಹರಡಬಹುದು ಎಂದು ವಿಜ್ಞಾನಿಗಳು ನಂಬಿದ್ದಾರೆ.

ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ SFTS ವೈರಸ್ ಹರಡುವ ಸಾಧ್ಯತೆಯನ್ನು ನಿರ್ಲಕ್ಷಿಸಲಾಗುವುದಿಲ್ಲ ಎಂದು ಝೆಜಿಯಾಂಗ್ ವಿಶ್ವವಿದ್ಯಾಲಯದ ಅಂಗಸಂಸ್ಥೆಯ ಆಸ್ಪತ್ರೆಯ ವೈದ್ಯ ಶೆಂಗ್ ಜಿಫಾಂಗ್ ಹೇಳಿದ್ದಾರೆ. ಸೋಂಕಿತ ರೋಗಿಯು ಇತರರಿಗೆ ವೈರಸ್ ಹರಡಬಹುದು ಎಂದವರು ಆತಂಕ ವ್ಯಕ್ತಪಡಿಸಿದ್ದಾರೆ.
 

Read More