Home> Viral
Advertisement

Video Viral: ರೀಲ್ಸ್‌ ಮಾಡಲು ಹೋಗಿ ʼಯಮನ ಪಾದʼ ಸೇರಿದ ಬೈಕ್‌ ಸವಾರ!

Bike Accident Viral Video: ವೈರಲ್​​ ಆಗಿರುವ ಈ ವಿಡಿಯೋದಲ್ಲಿ ಇಬ್ಬರು ಸ್ನೇಹಿತರು ಹೆಲ್ಮೆಟ್ ಇಲ್ಲದೆ ಹೆದ್ದಾರಿಯಲ್ಲಿ ರೈಡ್​​​ ಹೋಗುತ್ತಿರುವುದನ್ನು ಕಾಣಬಹುದು. ಹಿಂದೆ ಕುಳಿತಿದ್ದವ ರೀಲ್ಸ್​​ ಮಾಡಲು ಪ್ರಾರಂಭಿಸುತ್ತಿದ್ದಂತೆ ಬೈಕ್​ ಚಾಲಕ ಹಿಂದಕ್ಕೆ ತಿರುಗಿ ಪೋಸ್​​ ನೀಡಲು ಪ್ರಾರಂಭಿಸಿದ್ದಾನೆ.

Video Viral: ರೀಲ್ಸ್‌ ಮಾಡಲು ಹೋಗಿ ʼಯಮನ ಪಾದʼ ಸೇರಿದ ಬೈಕ್‌ ಸವಾರ!

Bike Accident Viral Video: ಬೈಕ್‌ನಲ್ಲಿ ಕುಳಿತುಕೊಂಡು ರೀಲ್ಸ್‌ ಮಾಡಲು ಹೋಗಿ ಬೈಕ್‌ ಸವಾರನೊಬ್ಬ ಪ್ರಾಣ ಕಳೆದುಕೊಂಡಿರುವ ಘಟನೆ ನಡೆದಿದೆ. ಈ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ. 

ಹೌದು, ರೀಲ್ಸ್​ಗೆ ಪೋಸ್​​ ನೀಡಲು ಹೋಗಿ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಬೈಕ್​​ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರ ಸಾವನ್ನಪ್ಪಿದ್ದು, ಮತ್ತೊರ್ವನ ಸ್ಥಿತಿ ಗಂಭೀರವಾಗಿದೆ. ಈ ಘಟನೆ ಮಹಾರಾಷ್ಟ್ರದ ಧುಲೆ-ಸೋಲಾಪುರ ಹೆದ್ದಾರಿಯಲ್ಲಿ ನಡೆದಿದೆ. ಈ ಘಟನೆಗೆ ಸಂಬಂಧಿಸಿದ ಸಂಪೂರ್ಣ ವಿಡಿಯೋ ಮೊಬೈಲ್​ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್​​ ಆಗಿದೆ.

ಇದನ್ನೂ ಓದಿ: ‌37 ಸಾವಿರ ಕೋಟಿ ರೂ.ಗಳ ಒಡತಿ.. ಸುಧಾ ಮೂರ್ತಿ 30 ವರ್ಷಗಳಿಂದ ಒಂದೇ ಒಂದು ಸೀರೆ ಖರೀದಿಸಿಲ್ಲ.. ಕಾರಣ?

ಬೈಕಿನ ಹಿಂದಿನ ಸೀಟಿನಲ್ಲಿ ಕುಳಿತ್ತಿದ್ದ ಸ್ನೇಹಿತನ ರೀಲ್ಸ್​​​ಗೆ ಚಾಲಕ ಪೋಸ್​​ ಕೊಡಲು ಹೋಗಿದ್ದಾನೆ. ಈ ವೇಳೆ ಗಾಡಿ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್‌ ಸವಾರ ಸಾವನ್ನಪ್ಪಿ, ಆತನ ಸ್ನೇಹಿತ ಗಂಭೀರವಾಗಿ ಗಾಯಗೊಂಡಿದ್ದಾನೆ. 

ಅಂದಹಾಗೆ ವೈರಲ್​​ ಆಗಿರುವ ಈ ವಿಡಿಯೋದಲ್ಲಿ ಇಬ್ಬರು ಸ್ನೇಹಿತರು ಹೆಲ್ಮೆಟ್ ಇಲ್ಲದೆ ಹೆದ್ದಾರಿಯಲ್ಲಿ ರೈಡ್​​​ ಹೋಗುತ್ತಿರುವುದನ್ನು ಕಾಣಬಹುದು. ಹಿಂದೆ ಕುಳಿತಿದ್ದವ ರೀಲ್ಸ್​​ ಮಾಡಲು ಪ್ರಾರಂಭಿಸುತ್ತಿದ್ದಂತೆ ಬೈಕ್​ ಚಾಲಕ ಹಿಂದಕ್ಕೆ ತಿರುಗಿ ಪೋಸ್​​ ನೀಡಲು ಪ್ರಾರಂಭಿಸಿದ್ದಾನೆ. ಇದಕ್ಕಿದ್ದಂತೆ ಚಾಲಕನ ನಿಯಂತ್ರಣ ತಪ್ಪಿದ್ದು, ಬೈಕ್​​​ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಇಬ್ಬರೂ ಗಾಳಿಗೆ ಹಾರಿ ರಸ್ತೆಗೆ ಬಿದ್ದಿದ್ದಾರೆ. ವರದಿಗಳ ಪ್ರಕಾರ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.

ಇದನ್ನೂ ಓದಿ: ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗುವ ಮಹಿಳೆಯರು ಹೂ ಮುಡಿದುಕೊಳ್ಳಲ್ಲ..! ಏಕೆ ಗೊತ್ತಾ?

@atuljmd123 ಎಂಬ ಟ್ವಿಟರ್​​ ಖಾತೆಯಲ್ಲಿ ಈ ಅಪಘಾತದ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಲಕ್ಷಾಂತರ ಜನರು ಈ ವಿಡಿಯೋವನ್ನು ವೀಕ್ಷಿಸಿದ್ದು, ಆಘಾತ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಕಂಡ ನೂರಾರು ನೆಟಿಜನ್ಸ್‌ ʼಈ ರೀತಿಯ ರೀಲ್ಸ್​​​ ಹುಚ್ಚು ಬಿಟ್ಟು ಬಿಡಿʼ ಎಂದು ಕಾಮೆಂಟ್​ ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Read More