Home> Viral
Advertisement

Viral Video: ಡಿಸ್ಕೌಂಟ್‌ ಸೀರೆಗಾಗಿ ನಾರಿಯರ ಜಡೆಜಗಳ.. WWF ಗಿಂತ ಬಲು ಜೋರಾಗಿತ್ತು ಫೈಟ್‌!

Viral Video: ಮೈಸೂರು ಸಿಲ್ಕ್​​​ ಸೀರೆಯನ್ನು ರಿಯಾಯಿತಿ ಮಾರಾಟ ಘೋಷಿಸಲಾಗಿತ್ತು. ಸಿಲ್ಕ್​ ಸೀರೆ ಆಸೆ ಹೊತ್ತಿರುವ ಮಹಿಳೆಯರಿಗೆ ಡಿಸ್ಕೌಂಟ್‌ ದರ ನೀಡಿದರೇ ಬಿಟ್ಟರೇ...ಮಹಿಳಾ ನಾರಿಗಳು ಸೀರೆ ಹಿಡಿಯುವ ಬದಲು ಜುಟ್ಟು ಹಿಡಿದು ಬಿಗ್ ಫೈಟ್​​ ನಡೆಸಿದ್ದಾರೆ.

Viral Video: ಡಿಸ್ಕೌಂಟ್‌ ಸೀರೆಗಾಗಿ ನಾರಿಯರ ಜಡೆಜಗಳ.. WWF ಗಿಂತ ಬಲು ಜೋರಾಗಿತ್ತು ಫೈಟ್‌!

ಬೆಂಗಳೂರು: ಮಹಿಳೆಯರೆ ಹಾಗೆ ವ್ಯಾಪರ, ವ್ಯವಹಾರದಲ್ಲಿ ಬಲು ಜೋರು. ಇತ್ತಿಚೇಗೆ ಮಾಲ್ ಸಂಖ್ಯೆ ಹೆಚ್ಚಿದ್ದರಿಂದ ಅಂಗಡಿಗೆ ಹೋಗಿ ಬಟ್ಟೆ ಅಥವಾ ವಸ್ತುಗಳನ್ನು ಬಾರ್ಗಿನ್‌ ಮಾಡಿ ಖರೀದಿಸುವವರ ಸಂಖ್ಯೆ ಸ್ವಲ್ಪ ತಗ್ಗಿದೆ. ಆದರೆ ಹಳ್ಳಿ ಕಡೆಗಳಲ್ಲಿ ಇಂದಿಗೂ ಜೀವಂತವಾಗಿದೆ. ಹೀಗೆ  ಮೈಸೂರು ಸಿಲ್ಕ್​​​ ಸೀರೆಯನ್ನು ರಿಯಾಯಿತಿ ದರದಲ್ಲಿ ಮಾರಾಟ ಘೋಷಿಸಲಾಗಿತ್ತು. 

ಬೆಂಗಳೂರು: ಮೈಸೂರು ಮಹಾರಾಜರ ಕಾಲದಿಂದಲೂ ಖ್ಯಾತಿ ಗಳಿಸಿರುವ ಈ ಮೈಸೂರು ಸಿಲ್ಕ್​​​  ಇಂದಿಗೂ ಅಷ್ಟೇ ಖ್ಯಾತಿ ಪಡೆದಿದೆ. ಮೈಸೂರು ಸಿಲ್ಕ್ ಸ್ಯಾರಿಯುಟ್ಟು ಜಂಭದಿಂದ ತಿರುಗಾಡಬೇಕೆಂಬುವುದು ಪ್ರತಿ ಹೆಂಗಸರ ಆಸೆಯು ಆಗಿರುತ್ತದೆ.  ಸಿಲ್ಕ್​ ಸೀರೆ ಆಸೆ ಹೊತ್ತಿರುವ ಮಹಿಳೆಯರಿಗೆ ಡಿಸ್ಕೌಂಟ್‌ ದರ ನೀಡಿದರೇ ಬಿಟ್ಟರೇ...

ಇದನ್ನೂ ಓದಿ: Pregnancy Test: ಸಾಮೂಹಿಕ ವಿವಾಹದಲ್ಲಿ ವಧುಗಳ ಪ್ರೇಗ್ನೆನ್ಸಿ ಟೆಸ್ಟ್, ಬೆಚ್ಚಿಬೀಳಿಸುವ ಮಾಹಿತಿ ಬಹಿರಂಗ!

ವಿಷಯ ತಿಳಿದ ಸೀರೆನಾರಿಯರು, ಎದ್ನೊ ಬಿದ್ನೊ ಎಂಬಂತೆ ಬೆಂಗಳೂರಿನ ಮಲ್ಲೇಶ್ವರಂ 8ನೇ ಕ್ರಾಸ್​ನಲ್ಲಿರುವ  ಕೆನರಾ ಯೂನಿಯನ್​​ ಹಾಲ್​​ನಲ್ಲಿ ಮೈಸೂರು ಸಿಲ್ಕ್​ ಸೀರೆ ಮಳಿಗೆಗೆ ನುಗ್ಗಿ ಸೀರೆ ಖರೀದಿಯಲ್ಲಿ ಮುಗಿ ಬಿದ್ದಿದ್ದಾರೆ..

ಸೀರೆ ಖರೀದಿಸಿದ್ದು ತಪ್ಪಲ್ಲ... ಆದರೆ ಖರೀದಿಗಾಗಿ ದುರಾಸೆ ಪಟ್ಟಿದ್ದು ತಪ್ಪಾಗಿತ್ತು ಅಂದರೆ.. ಎಲ್ಲ ಮಹಿಳೆಯರು ತಾ ಮುಂದು ನಾ ಮುಂದು ಎಂಬಂತೆ ಸೀರೆ ಖರೀದಿಯಲ್ಲಿ ಮುಳುಗಿದ್ದರು. ಅದೇನಾಯಿತೋ ಏನೋ ಖರೀದಿ ಮಧ್ಯೆ ಇಬ್ಬರು ಮಹಿಳಾ ನಾರಿಗಳು ಸೀರೆ ಹಿಡಿಯುವ ಬದಲು ಜುಟ್ಟು ಹಿಡಿದು ಬಿಗ್ ಫೈಟ್​​ ನಡೆಸಿದ್ದಾರೆ. ಅಷ್ಟರ ಮಟ್ಟಿಗೆ ಮೈಸೂರು ಸಿಲ್ಕ್​ ಸೀರೆ ಆಸೆ ಹುಟ್ಟಿಸಿತ್ತು.  

ಇದನ್ನೂ ಓದಿ: ಭೂಮಿಗೆ ಮೊದಲು ಬಂದಿದ್ದು ಕೋಳಿನಾ? ಮೊಟ್ಟೆನಾ? Chat GPT ಕೊಟ್ಟೇ ಬಿಡ್ತು ಉತ್ತರ!

ಇದನ್ನು ಕಂಡ ಅಂಗಡಿ ಸಿಬ್ಬಂದಿಗಳು ಸೀರೆನಾರಿಯರ ಜಗಳ ಬಿಡುಸುವಲ್ಲಿ ಮುಂದಾಗಿದ್ದಾರೆ. ಆದರೂ ಜಗ್ಗದೇ ಕುಗ್ಗದೇ ಜಗಳ ಜೋರಾಗಿಯೇ ನಡೆಯುತ್ತಿತ್ತು. ಅಷ್ಟರಲ್ಲಿ ಸೆಕ್ಯೂರಿಟಿ ಬಂದು ಇಬ್ಬರರನ್ನು ದೂರ ತಳ್ಳಿದ್ದರು. ಯಾರಿಗೂ ಡೋಂಟ್‌ ಕೇರ್‌ ಎನ್ನದೇ ಜುಟ್ಟು ಹಿಡಿದು ಹೊಡೆದಾಡಿಕೊಂಡಿದ್ದಾರೆ.

ಇಷ್ಟೆಲ್ಲಾ ನಡೆಯುತ್ತಿದ್ದರೂ ಅಲ್ಲೆ ಸೀರೆ ಖರೀದಿಸುತ್ತಿದ್ದ ಹೆಂಗಸರು ಜಗಳ ದೃಶ್ಯ ನೋಡಿದರೂ, ತಮಗೂ ಫೈಟ್​​ಗೂ ಸಂಬಂಧವೇನೂ ಇಲ್ಲ ಎಂಬಂತೆ ಸುಮ್ಮನಾಗಿ, ಸೀರೆ ಸೆಲೆಕ್ಷನ್​​ನಲ್ಲಿ ಮುಳುಗಿದ್ದಾರೆ. ಇನ್ನು ಕೆಲವರು ಸ್ಥಳದಲ್ಲಿ ಸಿಕ್ಕ ಫ್ರೀ ಎಂಜಾಯ್‌ ಮೆಂಟ್ ನ್ನು ವೀಕ್ಷಿಸಿ ತುಸು ನಕ್ಕು ಸುಮ್ಮನಾಗಿದ್ದಾರೆ. ಸೀರೆ ಖರಿದಿಸಲು ಬಂದವರು ಸೀರೆಗಾಗಿ ಜುಟ್ಟು ಹಿಡಿದು ಜಗಳ ಆಡುತ್ತಾರೆಂದರೆ ಮೈಸೂರು ಸಿಲ್ಕ್​​​  ಸೀರೆಗೆ ಎಷ್ಟು ಬೇಡಿಕೆ ಇರಬಹುದು.. 

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Read More