Home> Viral
Advertisement

Viral Video: ಮದುವೆಗೆ ಕೆಲವೇ ನಿಮಿಷಗಳಲ್ಲಿ ವಧುವನ್ನು ಬಂಧಿಸಿದ ಪೊಲೀಸರು, ಕಾರಣವೇನು ಗೊತ್ತಾ?

Wedding viral Video: ಈ ಬಗ್ಗೆ ಮಾತನಾಡಿರುವ ಆಲಪ್ಪುಳ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿ, ‘ಕಾಯಂಕುಲಂ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ವ್ಯಕ್ತಿಯ ಬಗ್ಗೆ ದೂರು ದಾಖಲಾಗಿದ್ದು, ಪ್ರಕರಣ ಸಂಬಂಧ ಮಹಿಳೆಯನ್ನು ಅಲ್ಲಿನ ನ್ಯಾಯಾಲಯಕ್ಕೆ ಹಾಜರುಪಡಿಸಬೇಕಾಯಿತು’ ಎಂದು ತಿಳಿಸಿದ್ದಾರೆ.

Viral Video: ಮದುವೆಗೆ ಕೆಲವೇ ನಿಮಿಷಗಳಲ್ಲಿ ವಧುವನ್ನು ಬಂಧಿಸಿದ ಪೊಲೀಸರು, ಕಾರಣವೇನು ಗೊತ್ತಾ?

ನವದೆಹಲಿ: ಕೇರಳದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಅಂತರ್ ಧರ್ಮೀಯ ದಂಪತಿಗಳು ಕೇರಳದ ದೇವಸ್ಥಾನದಲ್ಲಿ ಸಪ್ತಪದಿ ತುಳಿಯಲು ಸಜ್ಜಾಗುತ್ತಿದ್ದ ಕೆಲವೇ ನಿಮಿಷಗಳ ಮೊದಲು ವಧುವನ್ನು ಪೊಲೀಸರು ಬಂಧಿಸಿ ಬಲವಂತವಾಗಿ ಕರೆದೊಯ್ದಿದ್ದಾರೆ.

ವರದಿಗಳ ಪ್ರಕಾರ ಜೂನ್ 18ರಂದು (ಭಾನುವಾರ) ಕೇರಳದ ಕೋವಲಂ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಈ ಇಡೀ ಘಟನೆಯು ಥೇಟ್ ಸಿನಿಮಾ ರೀತಿಯಲ್ಲಿ ನಡೆದಿದೆ. ವರನ ಬಿಟ್ಟು ತನಗೆ ಹೋಗಲು ಇಷ್ಟವಿಲ್ಲವೆಂದು ಕಿರುಚಾಡುತ್ತಾ ವಧು ರಂಪ ಮಾಡುತ್ತಿದ್ದಳು. ಈ ವೇಳೆ ಕೋವಲಂ ಪೊಲೀಸ್ ಠಾಣೆಯ ಸಿಬ್ಬಂದಿ ಖಾಸಗಿ ವಾಹನದ ಕಡೆಗೆ ಆಕೆಯನ್ನು ಹಿಡಿದು ತಳ್ಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಪೊಲೀಸರು ಆಕೆಯನ್ನು ವರನ ಬಳಿ ಹೋಗದಂತೆ ತಡೆದು ಬಲವಂತವಾಗಿ ಕರೆದೊಯ್ದಿದ್ದಾರೆ.

ಇದನ್ನೂ ಓದಿ: Viral Video: ಬೋಳು ತಲೆಯ ವಿಷಯ ಮುಚ್ಚಿಟ್ಟು ಮದುವೆಗೆ ಸಿದ್ಧನಾಗಿದ್ದ ವರನಿಗೆ ಏನಾಯ್ತು ನೋಡಿ!

ವಧುವನ್ನು ನಂತರ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಆಕೆಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಯಿತು. ಈ ವೇಳೆ ಆಕೆ ತನಗೆ ಒಂದು ವರ್ಷದಿಂದ ಪರಿಚಯವಿದ್ದ ವರನೊಂದಿಗೆ ಮದುವೆಯಾಗಲು ಬಯಸಿದ್ದೇನೆ ಅಂತಾ ಹೇಳಿದ್ದಾಳೆ. ಇದರ ಬೆನ್ನಲ್ಲೇ ನ್ಯಾಯಾಲಯದ ಮೆಟ್ಟಿಲೇರಿದ್ದ ವರನೊಂದಿಗೆ ತೆರಳಲು ಆಕೆಗೆ ಅವಕಾಶ ನೀಡಲಾಯಿತು.

ವರದಿಗಳ ಪ್ರಕಾರ, ಅಂತರ್ ಧರ್ಮೀಯ ವ್ಯಕ್ತಿಯೊಂದಿಗೆ ಮದುವೆಯಾಗಲು ಯುವತಿಯ ಪೋಷಕರು ನಿರಾಕರಿಸಿದ್ದರು. ಹೀಗಾಗಿ ಆಕೆ ಮನೆಯಿಂದ ತಪ್ಪಿಸಿಕೊಂಡು ಕೇರಳದ ದೇವಸ್ಥಾನದಲ್ಲಿ ಮದುವೆಯಾಗುತ್ತಿದ್ದಳು. ಈ ವೇಳೆ ಅಲ್ಲಿಗೆ ಆಗಮಿಸಿದ ಪೊಲೀಸರು ಆಕೆಯನ್ನು ವಶಕ್ಕೆ ತೆಗೆದುಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ಇದನ್ನೂ ಓದಿ: Viral Video: ನಡುರಸ್ತೆಯಲ್ಲೇ ಜಡೆಜಗಳ; ಪರಸ್ಪರ ಹೊಡೆದಾಡಿಕೊಂಡ ಕಾಲೇಜು ಯುವತಿಯರು!

ಈ ಬಗ್ಗೆ ಮಾತನಾಡಿರುವ ಆಲಪ್ಪುಳ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿ, ‘ಕಾಯಂಕುಲಂ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ವ್ಯಕ್ತಿಯ ಬಗ್ಗೆ ದೂರು ದಾಖಲಾಗಿದ್ದು, ಪ್ರಕರಣ ಸಂಬಂಧ ಮಹಿಳೆಯನ್ನು ಅಲ್ಲಿನ ನ್ಯಾಯಾಲಯಕ್ಕೆ ಹಾಜರುಪಡಿಸಬೇಕಾಯಿತು’ ಎಂದು ತಿಳಿಸಿದ್ದಾರೆ.

‘ಮದುವೆಗೆ ಸಜ್ಜಾಗಿದ್ದ ಮಹಿಳೆಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಹೀಗಾಗಿ ಅವರು ತಮ್ಮ ಕರ್ತವ್ಯವನ್ನು ನಿರ್ವಹಿಸಿದ್ದಾರೆ. ಆಕೆ ತಾನು ವರನೊಂದಿಗೆ ಹೋಗಬೇಕೆಂದು ನ್ಯಾಯಾಲಯಕ್ಕೆ ತಿಳಿಸಿದಳು. ನಂತರ ಅವನೊಂದಿಗೆ ಹೋಗಲು ಅವಕಾಶ ಮಾಡಿಕೊಡಲಾಯಿತು’ ಎಂದು ಅಧಿಕಾರಿ ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Read More