Home> Viral
Advertisement

Viral Video: ಸೋರುವ ಸರ್ಕಾರಿ ಶಾಲೆ ಮೇಲ್ಛಾವಣಿ, ಛತ್ರಿ ಹಿಡಿದು ಪಾಠ ಕೇಳುವ ವಿದ್ಯಾರ್ಥಿಗಳು!

ಬುಡಕಟ್ಟು ಸಮುದಾಯದ ಮಕ್ಕಳು ಸೋರುತ್ತಿರುವ ಸರ್ಕಾರಿ ಶಾಲೆಯ ಕಟ್ಟಡದ ಮೇಲ್ಛಾವಣಿ ಅಡಿ ಛತ್ರಿ ಹಿಡಿದು ಕುಳಿತು ಪಾಠ ಕೇಳುತ್ತಿದ್ದಾರೆ.  

Viral Video: ಸೋರುವ ಸರ್ಕಾರಿ ಶಾಲೆ ಮೇಲ್ಛಾವಣಿ, ಛತ್ರಿ ಹಿಡಿದು ಪಾಠ ಕೇಳುವ ವಿದ್ಯಾರ್ಥಿಗಳು!

ಸಿಯೋನಿ: ಸರ್ಕಾರಿ ಶಾಲೆಯೊಂದರ ಮೇಲ್ಛಾವಣಿ ಸೋರುತ್ತಿದ್ದರೂ ಛತ್ರಿ ಹಿಡಿದು ವಿದ್ಯಾರ್ಥಿಗಳು ಪಾಟ ಕೇಳುತ್ತಿರುವ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಇದು ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯಲ್ಲಿರುವ ಸರ್ಕಾರಿ ಶಾಲೆಗೆ ಒದಗಿಬಂದಿರುವ ದುಸ್ಥಿತಿ. ಇಲ್ಲಿನ ಬುಡಕಟ್ಟು ಸಮುದಾಯದ ಮಕ್ಕಳು ಸೋರುತ್ತಿರುವ ಸರ್ಕಾರಿ ಶಾಲೆಯ ಕಟ್ಟಡದ ಮೇಲ್ಛಾವಣಿ ಅಡಿ ಛತ್ರಿ ಹಿಡಿದು ಕುಳಿತು ಪಾಠ ಕೇಳುತ್ತಿದ್ದಾರೆ.  

ಇದನ್ನೂ ಓದಿ: Woman With Mustache: ಮೀಸೆ ಹೊತ್ತ ಮಹಿಳೆಯನ್ನು ಎಂದಾದರು ನೋಡಿದ್ದೀರಾ? ಹೌದು, ಮೀಸೆ ನನ್ನ ಹೆಮ್ಮೆ ಎನ್ನುತ್ತಾಳೆ ಈ ಮಹಿಳೆ

ಇಲ್ಲಿನ ಖೈರಿಕಲಾ ಗ್ರಾಮದ ಪ್ರಾಥಮಿಕ ಶಾಲೆಯು ಮೂಲ ಸೌಕರ್ಯಗಳ ಕೊರತೆಯಿಂದ ದುಸ್ಥಿತಿಗೆ ತಲುಪಿದೆ. ಮಳೆ ಬಂದರೆ ಸಾಕು ಶಾಲೆಯೊಳಗೆ ನೀರು ತುಂಬಿಕೊಳ್ಳುತ್ತದೆ. ಮೇಲ್ಛಾವಣಿಯ ಹೆಂಚುಗಳು ಒಡೆದು ಹೋಗಿದ್ದು, ನಿರಂತರವಾಗಿ ನೀರು ಸೋರುತ್ತಿರುತ್ತದೆ. ಹೀಗಾಗಿ ವಿದ್ಯಾರ್ಥಿಗಳು ಛತ್ರಿಯನ್ನು ಹಿಡಿದುಕೊಂಡೇ ಪಾಠ ಕೇಳುವ ಪರಿಸ್ಥಿತಿ ಇದೆ.

ಸರ್ಕಾರಿ ಶಾಲೆ ದುಸ್ಥಿತಿಗೆ ತಲುಪಿದ್ದರೂ ಯಾವೊಬ್ಬ ಅಧಿಕಾರಿಯೂ ಇದರ ಬಗ್ಗೆ ಕ್ಯಾರೆ ಅಂದಿಲ್ಲ. ಇಲ್ಲಿನ ಬುಡಕಟ್ಟು ಸಮುದಾಯದ ಮಕ್ಕಳಿಗೆ ಶಿಕ್ಷಣ ಅನ್ನೋದು ಗಗನಕುಸುಮವಾಗಿದೆ. ಯಾವುದೇ ಸೌಲಭ್ಯವಿಲ್ಲದೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವೆಂಬುದು ಮರೀಚಿಕೆಯಾಗಿದೆ. ಮಧ್ಯಪ್ರದೇಶದ ಸಿಎಂ ಶಿವರಾಜ್ ಚೌಹಾಣ್ ತನ್ನ ಮಕ್ಕಳನ್ನು ಓದಲು ವಿದೇಶಕ್ಕೆ ಕಳುಹಿಸುತ್ತಾರೆ. ಆದರೆ ಈ ಬಡ ಬುಡಕಟ್ಟು ಮಕ್ಕಳ ಸ್ಥಿತಿ ಹೇಗಿದೆ ನೋಡಿ’ ಅಂತಾ ಕ್ಯಾಪ್ಶನ್ ಬರೆದು ಈ ವಿಡಿಯೋವನ್ನು ಶೇರ್ ಮಾಡಲಾಗಿದೆ.

ಇದನ್ನೂ ಓದಿ: Viral Video: ಲಂಬು ವರನ ಕೊರಳಿಗೆ ಹಾರ ಹಾಕಲು ಸಾಧ್ಯವಾಗದೆ ವಧು ಏನು ಮಾಡಿದ್ದಾಳೆ ನೋಡಿ!

ಶೇರ್ ಆದ ಕೆಲವೇ ಗಂಟೆಗಳಲ್ಲಿ ಈ ವಿಡಿಯೋ ಸಖತ್ ವೈರಲ್ ಆಗಿದ್ದು, ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಅನೇಕರು ಸರ್ಕಾರಿ ಶಾಲೆಯ ಅವಸ್ಥೆ ಕಂಡು ಸರ್ಕಾರಕ್ಕೆ ಮತ್ತು ರಾಜಕಾರಣಿಗಳಿಗೆ ಛೀಮಾರಿ ಹಾಕಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More