Home> Viral
Advertisement

ರೀಲ್ಸ್ ಮಾಡಲು ಹೋಗಿ ಎರಡೂ ಕಾಲು ಮುರಿದುಕೊಂಡ ಭೂಪ; ಟ್ರ್ಯಾಕ್ಟರ್‌ನ ಚಕ್ರ ಎತ್ತಲು ಹೋಗಿ ದುರಂತ!

Viral video in india: ರೀಲ್ಸ್‌ ಹುಚ್ಚಿನಲ್ಲಿ ಅನೇಕರು ಅಪಾಯಕಾರಿ ಮತ್ತು ಅಸುರಕ್ಷಿತ ಸಾಹಸ ಮಾಡಲು ಪ್ರಯತ್ನಿಸುತ್ತಾರೆ. ಅದೇ ರೀತಿ ಸಾಹಸ ಪ್ರದರ್ಶಿಸಿ ಫೇಮಸ್‌ ಆಗಬೇಕು ಅನ್ನೋ ಬಯಕೆಯಲ್ಲಿ ಯುವಕನೊಬ್ಬ ತನ್ನ ಎರಡೂ ಕಾಲುಗಳನ್ನು ಮುರಿದುಕೊಂಡಿರುವ ಘಟನೆ ನಡೆದಿದೆ. 

ರೀಲ್ಸ್ ಮಾಡಲು ಹೋಗಿ ಎರಡೂ ಕಾಲು ಮುರಿದುಕೊಂಡ ಭೂಪ; ಟ್ರ್ಯಾಕ್ಟರ್‌ನ ಚಕ್ರ ಎತ್ತಲು ಹೋಗಿ ದುರಂತ!

Viral Video: ರೀಲ್ಸ್‌ ಮಾಡಿ ರಾತ್ರೋರಾತ್ರಿ ಫೇಮಸ್‌ ಆಗಲು ಅನೇಕರು ಪ್ರಯತ್ನಿಸುತ್ತಾರೆ. ಅನೇಕರು ಜೀವದ ಹಂಗು ತೊರೆದು ರೀಲ್ಸ್‌ ಮಾಡಲು ಹೋಗಿ ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಾರೆ. ರೈಲ್ವೆ ಹತ್ತಿರ ನಿಂತು ಪೋಸು ನೀಡುವುದು, ಹರಿಯುತ್ತಿರುವ ಜಲಪಾತದ ಬಳಿ ಸೆಲ್ಫಿ ತೆಗೆದುಕೊಳ್ಳುವುದು, ಅಪಾಯಕಾರಿ ನೀರಿನ ಸೆಳವಿನಲ್ಲಿ ಈಜಲು ಹೋಗುವುದು ಹೀಗೆ ವಿವಿಧ ರೀತಿಯಲ್ಲಿ ಸಾಹಸ ಮಾಡಲು ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. 

ಅನೇಕರು ಅಪಾಯಕಾರಿ ಮತ್ತು ಅಸುರಕ್ಷಿತ ಸಾಹಸ ಮಾಡಲು ಪ್ರಯತ್ನಿಸುತ್ತಾರೆ. ಅದೇ ರೀತಿ ಸಾಹಸ ಪ್ರದರ್ಶಿಸಿ ಫೇಮಸ್‌ ಆಗಬೇಕು ಅನ್ನೋ ಬಯಕೆಯಲ್ಲಿ ಯುವಕನೊಬ್ಬ ತನ್ನ ಎರಡೂ ಕಾಲುಗಳನ್ನು ಮುರಿದುಕೊಂಡಿರುವ ಘಟನೆ ನಡೆದಿದೆ. ಈ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಈ ಯುವಕನ ವಿಡಿಯೋ ನೋಡಿದ ನಂತರ ಆತ ಮಾಡಿದ ತಪ್ಪನ್ನು ನೀವು ಎಂದಿಗೂ ಮಾಡುವುದಿಲ್ಲ.

ಇದನ್ನೂ ಓದಿ: 23 ಮಲಗುವ ಕೋಣೆಗಳು, 19 ಸ್ನಾನಗೃಹಗಳು, 22 ಎಕರೆ ಉದ್ಯಾನ... ಮಾರಾಟಕ್ಕಿದೆ ಐಷಾರಾಮಿ ವಿಲ್ಲಾ!

ಸದ್ಯ ವೈರಲ್ ಆಗಿರುವ ವಿಡಿಯೋದಲ್ಲಿ ಯುವಕನೊಬ್ಬ ತನ್ನ ಎರಡು ಕಾಲುಗಳಿಂದ ಟ್ರ್ಯಾಕ್ಟರ್‌ನ ಚಕ್ರವನ್ನು ಎತ್ತಲು ಪ್ರಯತ್ನಿಸುತ್ತಿರುವುದನ್ನು ನೀವು ಕಾಣಬಹುದು. ರೀಲ್ಸ್‌ ಮಾಡಿ ಸಾಹಸ ಪ್ರದರ್ಶಿಸಿಲು ಹೋದ ಯುವಕನಿಗೆ ಇದೀಗ ದೊಡ್ಡ ಕುತ್ತು ಬಂದಿದೆ. ಏಕೆಂದರೆ ರೀಲ್ಸ್‌ ಮಾಡುವ ಹುಚ್ಚುತನದಿಂದ ಮೂರ್ಖ ಯುವಕ ತನ್ನ ಎರಡೂ ಕಾಲುಗಳನ್ನು ಕಳೆದುಕೊಂಡಿದ್ದಾನೆ.   

ಅಂದಹಾಗೆ ಆ ಯುವಕ ತನ್ನ ಕಾಲುಗಳಿಂದ ಚಕ್ರವನ್ನು ಎತ್ತಲು ಪ್ರಯತ್ನಿಸಿದ್ದಾನೆ. ಆದರೆ ಆತನ ಮೊಣಕಾಲುಗಳು ಚಕ್ರಗಳ ಭಾರ ತಾಳಲಾರದೆ ಎರಡೂ ಕಾಲುಗಳು ಕಡ್ಡಿ ತುಂಡುಗಳಂತೆ ಮುರಿದುಹೋಗಿವೆ. ಈ ವಿಡಿಯೋವನ್ನು ಲಕ್ಷಾಂತರ ಜನವರು ವೀಕ್ಷಿಸಿದ್ದಾರೆ. ʼಇದೆಲ್ಲಾ ನಿನಗೆ ಏಕೆ ಬೇಕಿತ್ತುʼ ಅಂತಾ ಅನೇಕರು ಯುವಕನಿಗೆ ಬೈದು ಕಾಮೆಂಟ್‌ ಮಾಡಿದ್ದಾರೆ. ರೀಲ್ಸ್‌ ಹುಚ್ಚಿನಿಂದ ತನ್ನ ಎರಡೂ ಕಾಲುಗಳನ್ನು ಕಳೆದುಕೊಂಡ ಯುವಕನ ಪರಿಸ್ಥಿತಿಗೆ ಅನೇಕರು ಮರುಕ ವ್ಯಕ್ತಪಡಿಸಿದ್ದಾರೆ.   

ಇದನ್ನೂ ಓದಿ: ಗರ್ಭಧರಿಸಿ ಮಕ್ಕಳಿಗೆ ಜನ್ಮ ನೀಡಬಲ್ಲ ವಿಶ್ವದ ಏಕೈಕ ಗಂಡು ಪ್ರಾಣಿ ಇದು!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More