Home> Viral
Advertisement

Viral: ಜೊಮಾಟೊದಲ್ಲಿ ಕಾಫಿ ಆರ್ಡರ್ ಮಾಡಿದ ವ್ಯಕ್ತಿಗೆ ಸಿಕ್ಕಿದ್ದೇನು ಗೊತ್ತಾ!

Viral: ದೆಹಲಿಯ ವ್ಯಕ್ತಿಯೊಬ್ಬರು ಜೊಮಾಟೊದಿಂದ ಕಾಫಿ ಆರ್ಡರ್ ಮಾಡಿದ್ದರು. ಆದರೆ, ಕಾಫಿಯಲ್ಲಿ ಸಿಕ್ಕ ವಸ್ತುವನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಅಷ್ಟಕ್ಕೂ ಅವರಿಗೆ ಕಾಫಿಯಲ್ಲಿ ಸಿಕ್ಕಿದ್ದೇನು ಗೊತ್ತಾ..!

Viral: ಜೊಮಾಟೊದಲ್ಲಿ ಕಾಫಿ ಆರ್ಡರ್ ಮಾಡಿದ ವ್ಯಕ್ತಿಗೆ ಸಿಕ್ಕಿದ್ದೇನು ಗೊತ್ತಾ!

ವೈರಲ್ ಸುದ್ದಿ:  ಆನ್‌ಲೈನ್‌ನಲ್ಲಿ ಆಹಾರವನ್ನು ಆರ್ಡರ್ ಮಾಡುವ ಪ್ರವೃತ್ತಿ ಸಾಕಷ್ಟು ಹೆಚ್ಚಾಗಿದೆ.  ಆದರೆ, ಹಲವು ಬಾರಿ  ಆನ್‌ಲೈನ್‌ನಲ್ಲಿ ನಾವು ಆರ್ಡರ್ ಮಾಡುವುದೇ ಬೇರೆ, ನಮ್ಮ ಮನೆಗೆ ತಲುಪುವುದೇ ಬೇರೆ. ಈ ವಿಷಯದ ಬಗ್ಗೆ ದೂರು ನೀಡಿದಾಗ ವಿತರಣಾ ಕಂಪನಿಗಳು ಗ್ರಾಹಕರ ಕ್ಷಮೆಯಾಚಿಸಿ ಸುಮ್ಮನಾಗುತ್ತವೆ. ಇದು ಯಾವುದಾದರೂ ವಸ್ತುವಿನ ಬಗ್ಗೆ ಆದರೂ ಪರವಾಗಿಲ್ಲ, ಆದರೆ, ಆಹಾರದ ವಿಷಯದಲ್ಲಿ ಹೀಗಾದಾಗ ಹೇಗಿರುತ್ತೇ..? ಇಲ್ಲಿ ವ್ಯಕ್ತಿಯೊಬ್ಬರು  ಜೊಮಾಟೊದಿಂದ ಕಾಫಿ ಆರ್ಡರ್ ಮಾಡಿದ್ದರು, ಅದರಲ್ಲಿದ್ದ ವಸ್ತುವನ್ನು ಕಂಡು ಶಾಕ್ ಆಗಿದ್ದಾರೆ. ಅಷ್ಟಕ್ಕೂ ಕಾಫಿಯಲ್ಲಿ ಕಂಡಿದ್ದಾದರೂ ಏನು ಗೊತ್ತೇ...

ಕಾಫಿಯಲ್ಲಿ ಚಿಕನ್ ತುಂಡು:- 

ದೆಹಲಿಯಲ್ಲಿ ವಾಸಿಸುವ ಸುಮಿತ್ ಎಂಬ ವ್ಯಕ್ತಿ  ಜೂನ್ 3 ರಂದು, ಜೊಮಾಟೊ ಮೂಲಕ ರೆಸ್ಟೋರೆಂಟ್‌ನಿಂದ ಕಾಫಿ ಆರ್ಡರ್ ಮಾಡಿದ್ದಾರೆ. ಸಸ್ಯಾಹಾರಿಯಾದ ತನ್ನ ಹೆಂಡತಿಗಾಗಿ ಅವರು ಈ ಕಾಫಿಯನ್ನು ಆರ್ಡರ್ ಮಾಡಿದ್ದರಂತೆ. ಆದರೆ ಸುಮಿತ್ ಅವರ ಪತ್ನಿ ಕಾಫಿ ಕುಡಿಯಲು ಆರಂಭಿಸಿದಾಗ ಅದರಲ್ಲಿ ಚಿಕನ್ ಪೀಸ್ ಬಿದ್ದಿರುವುದು ಕಂಡು ಬಂದಿದೆ. ಕಾಫಿಯಲ್ಲಿದ್ದ ಚಿಕನ್ ಪೀಸ್ ಕಂಡು ಬೆಚ್ಚಿಬಿದ್ದ ಸುಮಿತ್ ಕಾಫಿ ಕಪ್‌ನ ಮುಚ್ಚಳದಲ್ಲಿ ಚಿಕನ್ ಪೀಸ್ ಸಿಕ್ಕಿದ್ದನ್ನ ಚಿತ್ರ ತೆಗೆದು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. 

ಈ ಚಿತ್ರವನ್ನು ನೋಡಿ:

ಇದನ್ನೂ ಓದಿ- Viral Video: ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ವ್ಯಕ್ತಿಯ ಸ್ಟಂಟ್, ಕೆಳಗಿತ್ತು ಭಯಾನಕ ಮೊಸಳೆಗಳು...

ಕಾಫಿ ಮತ್ತು ಚಿಕನ್ ಪೀಸ್‌ಗಳ ಚಿತ್ರಗಳನ್ನು ಪೋಸ್ಟ್ ಮಾಡಿದ ಸುಮಿತ್: "ನಾನು ಥರ್ಡ್‌ವೇವ್ ಇಂಡಿಯಾ" ಹೆಸರಿನ ರೆಸ್ಟೊರೆಂಟ್‌ನಿಂದ ಜೊಮಾಟೊ ಮೂಲಕ ಕಾಫಿ ಆರ್ಡರ್ ಮಾಡಿದ್ದೆ ಆದರೆ ನನಗೆ ಸಿಕ್ಕ ವಸ್ತು ನನಗೆ ನಿರಾಶೆಯನ್ನುಂಟು ಮಾಡಿದೆ. ಕಾಫಿಯಲ್ಲಿ ಚಿಕನ್ ಗ್ರೈಂಡ್ ಇದೆ. ಜೊಮಾಟೊ ಜೊತೆಗಿನ ನನ್ನ ಒಡನಾಟ ಇಂದಿಗೆ ಕೊನೆಗೊಳ್ಳುತ್ತದೆ" ಎಂದು ಬರೆದಿದ್ದಾರೆ. 

ಇದನ್ನೂ ಓದಿ- Viral Video: ಸಾವಿನ ದವಡೆಯಲ್ಲಿ ಸಿಲುಕಿದ್ದ ಶ್ವಾನಕ್ಕೆ ಪುನರ್ಜನ್ಮ ನೀಡಿದ ವ್ಯಕ್ತಿ..!

ಈ ಹಿಂದೆಯೂ ಸುಮಿತ್ ಅವರಿಗೆ ಆಗಿತ್ತು ಇದೇ ರೀತಿಯ ಅನುಭವ:
ಮತ್ತೊಂದು ಅಚ್ಚರಿಯ ವಿಷಯ ಎಂದರೆ ಸುಮಿತ್‌ ಅವರಿಗೆ ಹೀಗಾಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಅವರಿಗೆ ಇಂತಹದ್ದೇ ಅನುಭವವಾಗಿದೆಯಂತೆ. ಈ ಬಗ್ಗೆಯೂ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿರುವ ಅವರು ನವರಾತ್ರಿ ಸಮಯದಲ್ಲಿ ವೆಜ್ ಬಿರಿಯಾನಿ ಬದಲಿಗೆ ಜೊಮಾಟೊ ನಾನ್ ವೆಜ್ ಬಿರಿಯಾನಿಯನ್ನೂ ಕಳುಹಿಸಿತ್ತು ಎಂದು ಅವರು ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More