Home> Viral
Advertisement

Viral News: ಹೆಂಡತಿಯ ತೂಕ ಹೆಚ್ಚಾಗಿದ್ದಕ್ಕೆ ಕೋಪಗೊಂಡು ವಿಚ್ಛೇದನ ನೀಡಿದ ಪತಿ!

ಮೀರತ್‌ನ ಲಿಸಾಡಿ ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯ ಜಾಕಿರ್ ಕಾಲೋನಿ ನಿವಾಸಿ ನಜ್ಮಾ ಎಂಬುವವರಿಗೆ ಪತಿ ವಿಚ್ಛೇದನ ನೀಡಿದ್ದಾರೆ. ಪತ್ನಿ ದಪ್ಪಗಾದ ಕಾರಣ ಪತಿ ಸಲ್ಮಾನ್ ತನಗೆ ವಿಚ್ಛೇದನ ಬೇಕೆಂದು ನೋಟಿಸ್ ನೀಡಿದ್ದಾನೆ.

Viral News: ಹೆಂಡತಿಯ ತೂಕ ಹೆಚ್ಚಾಗಿದ್ದಕ್ಕೆ ಕೋಪಗೊಂಡು ವಿಚ್ಛೇದನ ನೀಡಿದ ಪತಿ!

ನವದೆಹಲಿ: ಮೀರತ್‍ನಲ್ಲಿ ವಿಚ್ಛೇದನದ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ತನ್ನ ಹೆಂಡತಿಯ ತೂಕ ಹೆಚ್ಚಾಗಿದ್ದಕ್ಕೆ ಕೋಪಗೊಂಡ ಪತಿ ಆಕೆಗೆ ವಿಚ್ಛೇದನ ನೀಡಿದ್ದಾನೆ. ತಾನು ದಪ್ಪವಾಗಿದ್ದಕ್ಕೆ ಪತಿ ನಿರಂತರವಾಗಿ ನಿಂದಿಸುತ್ತಿದ್ದ ಎಂದು ನೊಂದ ಮಹಿಳೆ ಆರೋಪಿಸಿದ್ದಾಳೆ.

ಮೀರತ್‌ನ ಲಿಸಾಡಿ ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯ ಜಾಕಿರ್ ಕಾಲೋನಿ ನಿವಾಸಿ ನಜ್ಮಾ ಅವರು ಪತಿಯಿಂದ ವಿಚ್ಛೇದನ ಪಡೆದಿರುವ ನತದೃಷ್ಟೆ. ನಾನು ದಪ್ಪಗಾಗಿರುವುದೇ ನನ್ನ ತಪ್ಪಾಗಿದೆ ಅಂತಾ ಮಹಿಳೆ ಅಳಲು ತೋಡಿಕೊಂಡಿದ್ದಾಳೆ. ಪತ್ನಿ ದಪ್ಪಗಾದ ಕಾರಣ ಪತಿ ವಿಚ್ಛೇದನದ ನೋಟಿಸ್ ಕಳುಹಿಸಿದ್ದಾನೆ. ನನಗೆ ಕೂಡಲೇ ವಿಚ್ಛೇದನ ಬೇಕೆಂದು ನನ್ನ ಪತಿ ನನಗೆ ನೋಟಿಸ್ ಕಳುಹಿಸಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ನೋಟಿಸ್ ನೋಡಿದ ನಂತರ ಪತಿಯೊಂದಿಗೆ ಮಾತನಾಡಲು ಆ ಮಹಿಳೆ ಪ್ರಯತ್ನಿಸಿದ್ದಾಳೆ. ಆದರೆ ಇದಕ್ಕೆ ಕ್ಯಾರೆ ಅನ್ನದ ಪತಿರಾಯ ‘ನೀನು ದಪ್ಪಗಾಗಿದ್ದೀಯ, ಹೀಗಾಗಿ ನಾನು ನಿನಗೆ ವಿಚ್ಛೇದನ ನೀಡುತ್ತಿದ್ದೇನೆ’ ಎಂದು ಹೇಳಿದ್ದಾನೆ.   

ಇದನ್ನೂ ಓದಿ: ಪ್ರಧಾನಿಗಳೇ ನಿಮ್ಮ ಭೇಟಿ ವಿಕಾಸಕ್ಕೋ.. ವಿನಾಶಕ್ಕೋ..? : ಸಿದ್ದರಾಮಯ್ಯ ಪ್ರಶ್ನೆ

ಖಾಕಿಪಡೆ ಮೊರೆ ಹೋದ ಮಹಿಳೆ

ಪತಿಯ ವಿಚ್ಛೇದನ ನೋಟಿಸ್‍ನಿಂದ ಕಂಗಾಲಾದ ಪತ್ನಿ ಪೊಲೀಸ್ ಠಾಣೆಗೆ ಬಂದು ನ್ಯಾಯಕ್ಕಾಗಿ ಮೊರೆ ಇಟ್ಟಿದ್ದಾಳೆ. ಈ ಬಗ್ಗೆ ಪರಿಶೀಲಿಸಿ ನಾವು ತನಿಖೆ ನಡೆಸುತ್ತೇವೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಲಿಸಾಡಿ ಗೇಟ್ ಪ್ರದೇಶದ ಜಾಕಿರ್ ಕಾಲೋನಿಯಲ್ಲಿ ವಾಸಿಸುವ ನಜ್ಮಾ ಅವರು 8 ವರ್ಷಗಳ ಹಿಂದೆ ಸಲ್ಮಾನ್ ಅವರನ್ನು ಮದುವೆಯಾಗಿದ್ದರು.

ದಂಪತಿಗೆ ಒಬ್ಬ ಪುತ್ರನಿದ್ದಾನೆ

ಸಲ್ಮಾನ್ ಮತ್ತು ನಜ್ಮಾ ದಂಪತಿಗೆ ಒಬ್ಬ ಪುತ್ರನಿದ್ದಾನೆ. ತನಗೂ ಒಬ್ಬ ಮಗನಿದ್ದಾನೆ. ಕಳೆದ 1 ತಿಂಗಳಿನಿಂದ ನನ್ನ ಪತಿ ಮನೆಯಿಂದ ಹೊರಹೋಗುವಂತೆ ನನಗೆ ಒತ್ತಾಯಿಸುತ್ತಿದ್ದಾನೆ. ಒಬ್ಬ ಮಗನನ್ನು ಬಿಟ್ಟು ನಾನು ಎಲ್ಲಿಗೆ ಹೋಗಬೇಕು..? ಅಂತಾ ನಜ್ಮಾ ಅಳಲು ತೋಡಿಕೊಂಡಿದ್ದಾಳೆ. ವಿಚ್ಛೇದನದ ಕಾರಣ ತಿಳಿಯಲು ಪ್ರಯತ್ನಿಸಿದಾಗ ‘ನೀನು ದಪ್ಪವಾಗಿದ್ದೀಯಾ, ಹೀಗಾಗಿ ನಾನು ನಿನಗೆ ವಿಚ್ಛೇದನ ನೀಡುತ್ತಿದ್ದೇನೆಂದು ಸ್ಪಷ್ಟವಾಗಿ ಹೇಳಿದ್ದಾನೆಂದು’ ಮಹಿಳೆ ಆರೋಪಿಸಿದ್ದಾಳೆ.  

ಇದನ್ನೂ ಓದಿ: Kiccha Sudeep :ಅಭಿನಯ ಚಕ್ರವರ್ತಿಗೆ ʼಪುಣ್ಯಕೋಟಿ ಯೋಜನೆʼಯ ರಾಯಭಾರಿ ಪಟ್ಟ

 ಪತ್ನಿಯ ಫೋನ್ ಸ್ವೀಕರಿಸದ ಪತಿರಾಯ

ನೋಟಿಸ್ ಬಗ್ಗೆ ಫೋನ್ ಮೂಲಕ ಮಾತನಾಡಲು ಮಹಿಳೆ ಎಷ್ಟೇ ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ. ಹಲವಾರು ಬಾರಿ ನಜ್ಮಾ ಫೋನ್ ಮಾಡಿದರೂ ಸಲ್ಮಾನ್ ಕರೆ ಸ್ವೀಕರಿಸಿಲ್ಲ. ಹೀಗಾಗಿ ಆಕೆ ತನ್ನ ಕುಟುಂಬದೊಂದಿಗೆ ರಾತ್ರಿಯೇ ಪೊಲೀಸ್ ಠಾಣೆ ಲಿಸಾಡಿ ಗೇಟ್ ತಲುಪಿ ತನಗೆ ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡಿಕೊಂಡಿದ್ದಾಳೆ.    

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More